ರಾಜಕೀಯ ಸುದ್ದಿಗಳು

ಗೋಪಾಳದಲ್ಲಿ ಮತದಾನದ ಹಬ್ಬ ಆಚರಣೆ

ಸುದ್ದಿಲೈವ್/ಶಿವಮೊಗ್ಗ

ಮಹಾನಗರ ಪಾಲಿಕೆಯ ಸ್ವೀಪ್ ಸಮಿತಿ ವತಿಯಿಂದ ಭಾನುವಾರದಂದು ಮತದಾನದ ಕುರಿತು ಜಾಗೃತಿ ಮೂಡಿಸಲು ಗೋಪಾಳದಲ್ಲಿನ ನಿವಾಸಿಗಳೊಂದಿಗೆ ಮತದಾನದ ಹಬ್ಬವನ್ನು ವಿನೂತನವಾಗಿ ಆಚರಿಸಲಾಯಿತು.

ಮತದಾನದ ಹಬ್ಬದಲ್ಲಿ ಮಹಿಳೆಯರು ರಂಗೋಲಿ ಬಿಡಿಸಿದರು. ಈ ಸಂದರ್ಭದಲ್ಲಿ ಎಲ್ಲಾ ಮಹಿಳೆಯರಿಗೂ ಯುಗಾದಿ ಹಬ್ಬದ ಪ್ರಯುಕ್ತ ಅರಿಶಿನ-ಕುಂಕುಮ ಕೊಡುವುದರ ಮೂಲಕ ಸಂಪ್ರದಾಯವಾಗಿ ಆಚರಿಸಲಾಯಿತು.

ಇದೇ ವೇಳೆ ಕಲಾವಿದರ ತಂಡದಿಮದ ಮತದಾನ ಜಾಗೃತಿ ಗೀತೆ, ಕೋಲಾಟ, ಬೀದಿ ನಾಟಕ ದ ಮೂಲಕ ಮತದಾನ ಮಾಡುವಂತೆ ಮನವಿ ಮಾಡಲಾಯಿತು. ಈ ಕಾರ್ಯಕ್ರಮ ದಲ್ಲಿ ಮಹಾನಗರ ಪಾಲಿಕೆ ಯ ಸ್ವೀಪ್ ತಂಡ, ನೇಸರ ಕಲಾವಿದರ ತಂಡ, ಸ್ಟೈಲ್ ಡಾನ್ಸ್ ತಂಡ ವಿನೂತನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ-https://suddilive.in/archives/12312

Related Articles

Leave a Reply

Your email address will not be published. Required fields are marked *

Back to top button