ರಾಜಕೀಯ ಸುದ್ದಿಗಳು

ಗ್ಯಾರೆಂಟಿ ಸಮಾವೇಶದ ಮೂಲಕ ಲೋಕಸಮರದ ಕಹಳೆ ಊದಿದ ಸಚಿವರು

ಸುದ್ದಿಲೈವ್/ಸೊರಬ

ಅಂಗಡಿ ಬಂದ್ ಆಗೋದು ವಿಪಕ್ಷಗಳದ್ದು ನಮ್ದಲ್ಲ ಎಂದು ಸಚಿವ ಮಧು ಬಂಗಾರಪ್ಪ ಗುಡುಗಿದ್ದಾರೆ. ಗ್ಯಾರೆಂಟಿ ಸಮಾವೇಶದ ಮೂಲಕ ಸಚಿವರು ಲೋಕಸಭೆಯ ಕಹಳೆ ಊದಿದ್ದಾರೆ.

ಸೊರಬದ ಗ್ಯಾರಂಟಿ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ  ಮಧು ಬಂಗಾರಪ್ಪ ವಿಪಕ್ಷಗಳು ಕಮಿಷನ್ ಕಮಿಷನ್ ಎಂದು ವಿಪಕ್ಷಗಳು ಕೂಗಾಡ್ತಿತ್ತಿದ್ದಾರೆ.  ನಿಮ್ಮ ಅಕೌಂಟ್ ಗೆ ಬರುತ್ತಿರುವ 2000 ರೂ. ಗೃಹಲಕ್ಷ್ಮಿಯಲ್ಲಿ ಕಮಿಷನ್ ಕೊಟ್ಟಿದ್ದೀರಾ ನೀವು ಎಂದು ಪ್ರಶ್ನಿಸಿದರು. ಕಮಿಷನ್ ಎಂಬುದು ವಿಪಕ್ಷಗಳ ಆರೋಪವಾಗಿದೆ. ನಮ್ಮ ಸರ್ಕಾರದಲ್ಲಿ ಅದಿಲ್ಲವೆಂದು ಸ್ಪಷ್ಟಪಡಿಸಿದರು.

ಬಸ್ ಹತ್ತೋಕೆ ಕಮಿಷನ್ ಕೊಡ್ತೀರಾ?ಸುಮ್ಮನೆ ಕಮಿಷನ್ ಕಮಿಷನ್ ಅಂತಾರೆ. ಕೈ ಎತ್ತಿ ನೋಡೋಣ ಯಾರಾದ್ರು ಕಮಿಷನ್ ಕೊಟ್ಟೀದ್ದೀರಾ ಎಂದು ಪ್ರಶ್ನಿಸುವ ಮೂಲಕ ವಿಪಕ್ಷಗಳಿಗೆ ಟಾಂಗ್ ನೀಡಿದ್ದಾರೆ.

ಹೇ ಯಾರೋ ನೀನು ಕಮಿಷನ್ ಕೊಟ್ಟಿದ್ದೀಯಾ? 2000 ಸಾವಿರ ಎಲ್ಲೋ ಕಮಿಷನ್ ಕೊಡ್ತೀಯಾ? ಕೈ ಇಳಿಸೋ ಟಿವಿಯವರು ನಿನ್ನ ತೋರಿಸುತ್ತಾರೆ. ಆಗ ನೀನು ಹೀರೋ ನಾನು ವಿಲನ್ ಆಗ್ತೀನಿ ಅವಾಗ. ನಮ್ಮ ಖಜಾನೆ ಖಾಲಿ ಆಗಿಲ್ಲ. ಮಾರ್ಕೆಟ್ ನಲ್ಲಿ ಬ್ಲಡ್ ದುಡ್ಡು ಎರಡೂ ಇಂಪಾರ್ಟೆಂಟ್,  ದುಡ್ಡ ನ್ನ ಮಾರ್ಕೆಟ್ ನಲ್ಲಿ ಇಟ್ಟೀದ್ದೀವಿ. ಮಾರ್ಕೆಟ್ ನಲ್ಲಿ ದುಡ್ಡು ಚೆನ್ನಾಗಿದೆ ಎಂದರು.

ಈಗ ಸಿಂಗಲ್ ಇಂಜಿನ್ ಇದೆ.ಮುಂದೆ ಡಬಲ್ ಇಂಜಿನ್ ಆದ್ರೆ ಇನ್ನು ಇನ್ನೇನು ಬರುತ್ತದೆ ನೀವು ನೋಡಬೇಕು ಎಂದು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನ್ನ ಗೆಲ್ಲಿಸಯವ ಮೂಲಕ ಆಡಳಿತಕ್ಕೆ ತರುವಂತೆ ಕೋರಿದರು.

ನೋಡಬೇಕು ಮುಂದೆ ಡಬಲ್ ಇಂಜಿನ್ ಆಗುತ್ತಾ ಎಂದು?ಜನರು ಆಶೀರ್ವಾದ ಇದ್ದರೆ ಅದುಸಾಧ್ಯ.ಟೀಕೆ ಟಿಪ್ಪಣಿ ಯಾರು ಮಾಡ್ತಾರೋ ಅವರಿಗೆ ಇಂತಹ ಕಾರ್ಯಕ್ರಮ ದ ಮೂಲಕ ಉತ್ತರ‌ ಕೊಡ್ತಾ ಇದ್ದೇವೆ. ಅಂಗಡಿ ಕ್ಲೋಸ್ ಆಗೋದು ವಿರೋಧ ಪಕ್ಷದು, ನಮ್ದು ಅಲ್ಲ.ಇನ್ನು ಐದು ವರ್ಷ ಗ್ಯಾರಂಟಿ ಇರುತ್ತದೆ. ಐದು ವರ್ಷನೂ ಸಿದ್ದರಾಮಯ್ಯ ಸರ್ಕಾರ ಇರುತ್ತದೆ. ಯಾರೇ ಎಷ್ಟು ಹೇಳಿದ್ರು ನಮ್ಮ ಸರ್ಕಾರ ಇರುತ್ತದೆ.  ತಿಪ್ಪರ್ ಲಾಗ ಹೊಡಿದ್ರಾ ನಮ್ಮ ಸರ್ಕಾರ ಅಲುಗಾಡಿಸಲು ಆಗೋಲ್ಲ ಎಂದು ಗುಡುಗಿದರು.

ಕುಡುಕರಿಗೆ 2000 ಕೊಡಬೇಡಿ

ಹೇ ಯಾರೋ ಅವನು, ಯಾಕೋ ಗಲಾಟೆ ಮಾಡ್ತಾ ಇದ್ದೀಯಾ?ಅವನಿಗೆ ಯಾರೋ ಎರಡು ಸಾವಿರ ಕೊಟ್ಟಿದ್ದಾರೆ ನೋಡು ಎಂದು ವೇದಿಕೆ ಮೇಲೆಯೇ ಸಭೀಕರಲ್ಲಿ ಪ್ರಶ್ನಿಸಿದ ಸಚಿವರು ಎಣ್ಣೆ ಕುಡಿದುಕೊಂಡು ಬಂದಿದ್ದಾನೆ ಇಲ್ಲಿಹೇ ನೋಡ್ರಮ್ಮ ನೀವು ನಿಮ್ಮ ಗಂಡನಿಗೆ ಹಣ ಕೊಡಬೇಡಿ ಅದ್ರಲ್ಲೂ ಎಣ್ಣೆ ಹೊಡೆಯೋರಿಗೆ ಕೊಡಬೇಡಿ ಎಂದು ಗುಡುಗಿದರು.

ಇದನ್ನೂ ಓದಿ-https://suddilive.in/archives/9393

Related Articles

Leave a Reply

Your email address will not be published. Required fields are marked *

Back to top button