ರಾಜಕೀಯ ಸುದ್ದಿಗಳು

ಕಿಮ್ಮನೆ ರತ್ನಾಕರ್ ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ-ಕೆಲವರಿಗೆ ಸ್ಪಷ್ಟನೆ ಕೆಲವರಿಗೆ ಸವಾಲು

ಸುದ್ದಿಲೈವ್/ಶಿವಮೊಗ್ಗ

ಸಾಹಿತ್ಯ ಸಮ್ನೇಳನದಲ್ಲಿ ಪ್ರಸ್ತಾಪಿಸಿದ ಸನಾತನ ಧರ್ಮದ ಬಗ್ಗೆ ಹಾಗೂ  ಸೋಗಲಾಡಿಗಳು ತೀರ್ಥಹಳ್ಳಿ ತಾಲೂಕಿನಲ್ಲಿದ್ದಾರೆ ಎಂಬ ಪತ್ರಕರ್ತರ ಲೇಖನದ ಕುರಿತು ಕಿಮ್ಮನೆ ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟೀಕರಣ ನೀಡಿದ್ದಾರೆ.

1972 ರಿಂದ ರಾಜಕಾರಣದಿಂದ ಬಂದಿದ್ದೇನೆ ಅಂದಿನಿಂದ ಇಂದಿನವರೆಗೆ ಸೋಗಲಾಡಿತನವನ್ನ ನಾನು ತೋರಿಸಿಲ್ಲ. ಕವಿಶೈಲದಿಂದ ತೀರ್ಥಹಳ್ಳಿಯಲ್ಲಿ ಪಾದಯಾತ್ರೆ ನಡೆಸಿದ್ದೆ ಹಂಸಲೇಖ ಬಂದು ಉದ್ಘಾಟಿಸಿದ್ದರು. ಇದು ಸೋಗಲಾಡಿತನವೇ ಎಂದು ಪ್ರಶ್ನಿಸಿದರು.

ನಾನು ಎಲ್ಲೂ ಸೋಗಲಾಡಿತನ ತೋರಿಸಿಲ್ಲ. ಯಾರು ತೋರಿದ್ದಾರೆ ಅವರ ಹೆಸರು ಹೇಳಲಿ. ಗೋಪಾಲಗೌಡರ ಕಾಲದಿಂದ ಸೈದ್ಧಾಂತಿಕವನ್ನ ತೋರಿದ್ದೇವೆ. ಕೆಲ ವರ್ಷಗಳ ಹಿಂದೆ ಬಿಜೆಪಿಯವರು ಮುಸ್ಲೀಂ ಮನೆ ಸುಡುವುದನ್ನ‌ ಎದುರುಗಡೆ ನಿಂತು ಎದುರಿಸಿ ಮನೆ ಸುಡುವುದನ್ನ ತಪ್ಪಿಸಿದ್ದೇನೆ. ಇದು ಗಟ್ಟಿತನ ಅಲ್ಲವಾ ಎಂದು ಪ್ರಶ್ನಿಸಿದರು.

ಸಾಹಿತ್ಯ ಸಮ್ಮೇಳನದ ಪೂರ್ವ ಭಾವಿ ಸಭೆಯಲ್ಲಿ ಮಾಜಿ ಸಚಿವ ಆರಗ ಜ್ಞಾನೇಂದ್ರ ಸನಾತನ ಧರ್ಮದ ಬಗ್ಗೆ ನಾನು ಮಾತನಾಡಿದ್ದನ್ನ ವಿರೋಧಿಸಿದ್ದರು. ಅವರಿಗೆ ಬಹಿರಂಗ ಚರ್ಚೆಗೆ ನಾನು ಸಿದ್ದ ಎಂದು ಸವಾಲು ಎಸೆದರು.

ತಾಲೂಕು ಕಸಾಪ ಸಭೆಯಲ್ಲಿ ಸನಾತಧರ್ಮದ ಬಗ್ಗೆ ಮಾತನಾಡಿದ್ದೆ. ಸನಾತನವನ್ನ ದೂರು ಇಲ್ಲ ವಹಿಸಿಕೊಂಡು ಮಾತನಾಡಿಲ್ಲ. ಸಾಹಿತಿಗಳು ಸನಾತನ ಧರ್ಮದ ಬಗ್ಗೆ ಹೆಚ್ಚಿಗೆ ಜ್ಞಾನ ಚೆಲ್ಲಬೇಕಿತ್ತು ಎಂದಿದ್ದೆ. ಸನಾತನ ಎಙದರೆ ನಿಘಂಟಿನಲ್ಲಿ ಹಿಟ್ ಅಂಡ್ ರನ್ ಅಂತ ಇದೆ. ಹಳೆಯದು ಎಂದು ಇದೆ. ಇದಕ್ಕೆ ಪ್ರತ್ಯೇಕ ಕೃತಿಕಾರವಿಲ್ಲ. ಅನಾದಿ ಕಾಲದಿಂದ ಬಂದಿದೆ.

ಉಪನಿಷತ್ತು, ಮನುಸೃತಿ ಈ ಬಗ್ಗೆ ಚರ್ಚೆ ಮಾಡುವುದಾದರೆ ಈಶ್ವರಪ್ಪ ಮತ್ತು ಜ್ಞಾನೇಂದ್ರ ಬರಲಿ ಎಂದು ಸವಾಲು ಎಸೆದರು. ಹಿಂದೂ ಧರ್ಮಕ್ಕೆ ಸೇರಿದ್ದೇನೆ. ಆದರೆ ನೂನ್ತೆಗಳಿವೆ. ಅದನ್ನ ಸರಿಪಡಿಸಿ ಎನ್ನುವವನು ನಾನು. ಚರ್ಚೆಗೆ ಸಿದ್ದ ಎಂದರು. ನಾನು ಹೋಮ ಮಾಡಿಸಿದವನೇ, ದೇವಸ್ಥಾನಕ್ಕೆ ಹೋಗುವನು. ಮನುಸ್ಮೃತಿಯ ಬಗ್ಗೆ ವಿನು್ ಗುರೂಜಿಗೆ ಖಾಸಗಿ ಕಾರ್ಯಕ್ರಮದಲ್ಲಿ ಜ್ಞಾನಚೆಲ್ಲಿ ಎಂದಿದ್ದೆ ಎಂದು ತಿಳಿಸಿದರು.

ಆರ್ ಎಸ್ ಎಸ್ ನ ಗರ್ಭಗುಡಿ ಸಂಸ್ಕೃತಿ ಇದೆ ಎಂದು ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಆರೋಪಿಸಿದ್ದಾರೆ ಈ ಬಗ್ಗೆ ತಮ್ಮ‌ಅಭಿಪ್ರಾಯವೇನು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಆರ್ ಎಸ್ ಎಸ್ ಹಿಂದೂ ಧರ್ಮದ ನೂನ್ಯತೆ ತೆಗೆದುಹಾಕಲು ಯಾವ‌ಕಾರ್ಯಕ್ರಮ ಹಾಕಿಕೊಂಡಿಲ್ಲ. ಜನಸಂಘ, ಆರ್ ಎಸ್ ಎಸ್, ಬಿಜೆಪಿ ಶ್ರೀರಾಮ ಸೇನೆ ಎಲ್ಕವೂ ಒಂದೇ ಪರಿವಾರದವರು ಇತರೆ ಧರ್ಮವನ್ನ ಟೀಕಿಸುವುದು ಇವರ ಮುಖ್ಯಗುರಿಯಾಗಿದೆ. ತನ್ನ ಧರ್ಮದಲ್ಲಿರುವ‌ ನೂನ್ಯತೆಯನ್ನ ಸರಿಪಡಿಸಲು ಏನು ಕಾರಣ ಎಂದರು.

ಇದನ್ನೂ ಓದಿ-https://suddilive.in/archives/4407

Related Articles

Leave a Reply

Your email address will not be published. Required fields are marked *

Back to top button