ರಾಜಕೀಯ ಸುದ್ದಿಗಳು

ರಾಘಣ್ಣನ ಕೌಂಟರ್ ಗೆ ಆಯನೂರು ಎನ್ ಕೌಂಟರ್?

ಸುದ್ದಿಲೈವ್/ಶಿವಮೊಗ್ಗ

ನಾಲಿಗೆ ಸಂಸ್ಕೃತಿಯನ್ನ ಹೇಳುತ್ತೆ ಎಂದು ನಿನ್ನೆ ಸಂಸದ ರಾಘವೇಂದ್ರ ಶಿಕ್ಷಣ ಸಚಿವ ಮಧು ಬಂಗಾರಪ್ಪನವರಿಗೆ ಕೌಂಟರ್ ನೀಡಿದ್ದರು. ಅವರ ಕೌಂಟರ್ ಹೇಳಿಕೆಗೆ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಮತ್ತೊಂದು ಕೌಂಟರ್ ಹೊಡೆದಿದ್ದಾರೆ.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಿಮ್ಮ‌ ಮತ್ತು ನಿಮ್ಮ ತಂದೆಗೆ ಅವಮಾನ ಹೇಳಿಕೆ ನೀಡಿದ ಈಶ್ವರಪ್ಪನವರ ಆರೋಪಕ್ಕೆ ಪ್ರತಿಕ್ರಿಯಿಸಲಿಲ್ಲ. ಕೆಜೆಪಿಗೆ ಹೋಗಿದ್ದ ಬಿಎಸ್ ವೈ ಜೊತೆ ನೀವು ಹೋಗದೆ ಅಧಿಕಾರದ ಆಸೆಗಾಗಿ ಬಿಜೆಪಿಯಲ್ಲಿ ಉಳಿದುಕೊಂಡ್ರಿ.

ಚೆಕ್ ನಲ್ಲಿ ಹಣ ಪಡೆದುಕೊಂಡ ಆರೋಪದ ಸಮಯದಲ್ಲಿ ತುಟಿಬಿಚ್ಚಲಿಲ್ಲ. ರಾಜೀನಾಮೆ ನೀಡಿದಾಗ ಮಾತನಾಡಲಿಲ್ಲ. ಬಿಜೆಪಿ ಕಾರ್ಯಕರಗತರನ್ನ ಚೇಲಾ‌ ಎಂದಿರುವುದು ಯಾವ ಸಂಸ್ಕೃತಿ ತೋರುತ್ತದೆ. ಹಿಂದಿಯಲ್ಲಿ ಚೇಲಾ ಎಂದರೆ ಹಿಂಬಾಲಕರು ಎಂದು.  ಈಶ್ವರಪ್ಪನವರು ಮಾತನಾಡಿರುವುದು ಸಂಸ್ಕೃತಿ ಮಾತಿಗೆ ಉತ್ತರಿಸಲಿಲ್ಲ. ಚಾರಿತ್ರ್ಯ ಹೀನ ಭಾಷೆಗೆ ಉತ್ತರಿಸಲು ನಿಮಗೆ ಆಗಲಿಲ್ಲ. ನಮ್ಮನ್ಬ ಸಂಸ್ಕೃತಿ ಹೀನರು ಎನ್ನುತ್ತೀರ ಎಂದು ಪ್ರಶ್ನಿಸಿದರು.

ಹಡಬೆ ಹಣ ಎಂದರೆ ಯಾವ ಅಸಂಸ್ಕೃತಿ ಪದವಾಗುತ್ತದೆ. ಬಿಎಸ್ ವೈ ಜೈಲಿಗೆ ಹೋದಾಗ ಮಾತನಡದ ನೀವು. ರಾಮನ ಬಗ್ಗೆ ಮಾತನಾಡುತ್ತೀರ? ತಂದೆಯ ಮಾತಿಗಾಗಿ ರಾಮ ಕಾಡಿಗೆ ಹೋದ. ನೀವು ಉಳಿಯಲು ಪೂಜ್ಯ ತಂದೆಯನ್ನ ಜೈಲಿಗೆ ಕಳುಹಿಸಿದ್ದೀರಿ ಎಂದು ವಾಗ್ದಾಳಿ ನಡೆಸಿದರು.

ಬಿಎಸ್ ವೈ ವಿರುದ್ಧ ಪ್ರತಿದಿನ‌ ಕೇಳಲಾಗುತ್ತಿರುವ ಆರೋಪಗಳಿಗೆ ಮೊದಲು ಉತ್ತರಿಸಿ ಆ ಮೇಲೆ ನಮ್ಮ ಸಂಸ್ಕೃತಿಯ ಬಗ್ಗೆ ಪಾಠ ಮಾಡಿ ಎಂದ ಅವರು, ವಿಐಎಸ್ ಎಲ್ ಮತ್ತು ಎಂಪಿಎಂ ವಿಷಯದಲ್ಲಿ ನಮಗೆ ಅನುಮಾನವಿದೆ. ಶರಾವತಿ ಮುಳುಗಡೆ ವಿಷಯದಲ್ಲಿ ಏನು ಕ್ರಮ ಕೈಗೊಂಡಿದ್ದೀರಿ ಎಂದು ದೂರಿದರು.

ವಿಐಎಸ್ ಎಲ್ ಕಾರ್ಖಾನೆಯನ್ನ ಚುನಾವಣೆ ಮುಗಿಯುವ ತನಕ ತಳ್ಳುವ ಕುತಂತ್ರ ಅಡಗಿದೆ ಎಂದು ನಮಗೆ ಅನಿಸುತ್ತಿದೆ ಎಂದು ಅನುಮಾನ ವ್ಯಕ್ತಪಡಿಸಿದರು.

ಉಚಿತ ವಿದ್ಯುತ್ ನೀಡಿದ್ದು ಬಂಗಾರಪ್ಪನಾ ಅಥವಾ ಬಿಎಸ್ ವೈನಾ?

ಪಂಪ್ ಸೆಟ್ ಗೆ ಉಚಿತ ವಿದ್ಯುತ್ನೀಡಿರುವುದು ಬಿಎಸ್ ವೈ ಎಂದಿದ್ದೀರಿ. ಎಂತಹ ಹಸಿಸುಳ್ಳನ್ನ ಹೇಳುತ್ತಿದ್ದೀರಿ. ರಾಮ ಮಂದಿರ ಕಟ್ಟಿರುವುದು ನಾವು ಎಧುತ್ತಿರುವುದು ನೀವು. ಆದರೆ ಹಿಂದುಳಿದ ಜಾತಿಯ ಜನಾಂಗದ ದೇವಸ್ಥಾನ, ರಾಮ, ಬಸಣ್ಣನ ದೇವಸ್ಥಾನಕ್ಜೆ ಆರಾಧಾನ ಹೆಸರಿನಲ್ಲಿ ಹಣ ನೀಡಿರುವುದು ಬಂಗಾರಪ್ಪ ಎಂದರು.

ವಿಮಾನ ನಿಲ್ದಾಣ ಯಾರದ್ದು?

ಸಮುದಾಯ ಭವನದ ಪಟ್ಟಿಕೊಟ್ಟಿದ್ದೀರ. ನೀರಾವರಿಯ ಎಸ್ ಟಿ ಪಿಎಸ್ ನಲ್ಲಿ 18% ಹಣವನ್ನ ಮುಂದುವರೆದ ಜನಾಂಗಕ್ಕೂ ನೀಡಿ ಮನಸೋಇಚ್ಛೆ ಬಳಕೆ ಮಾಡುದ್ರಿ. ವಿಮಾನ ನಿಲ್ದಾಣದಲ್ಲಿ ಹಣ ಹೂಡಿಕೆ ರಾಜ್ಯ ಸರ್ಕಾರದ್ದು, ಎರಡು ಪರವಾನಗಿ ಹಿಡಿದುಕೊಂಡಿದ್ರಿ. ದಿವಂಗತ ಅನಂತಕುಮಾರ್ ವಿಮಾನ ಯಾನ ಸಚಿವರಾದಾಗ ವಿಂಡ್ ರಿಪೋರ್ಟ್ ಪಡೆಯಲು ವಿಫಲರಾದ ಅರಣ ಅದು ವಿಫಲವಾಗಿತ್ತು. ಆಗ ನಾನು ಓಡಾಡಿದ್ದೆ ಎಂದು ಆಯನೂರು ಹೇಳಿದರು.

ಜಿಲ್ಲೆಯ ಅಭಿವೃದ್ಧಿಯ ಜೊತೆ ನೀವು ಅಭಿವೃದ್ದಿ ಆಗಿದ್ದೀರಿ

ಕಾಗೋಡು ಹೇಳದಿದ್ದರೆ ಹೈವೆ ನಿರ್ಮಾಣವಾಗ್ತಾಇರಲಿಲ್ಲ. 257 ಕಿಮಿ ರಾಜ್ಯದ ಹೈವೆ ರಸ್ತೆಗಳನ್ನ‌ ಅಪ್ ಗ್ರೇಡ್ ಮಾಡಿಕೊಟ್ಟಿದ್ದು ಕಾಂಗ್ರೆಸ್ ಸರ್ಕಾರ ಅದಕ್ಕೆ ಹಣ ತಂದು ಕೆಲಸ ಮಾಡುದ್ರಿ. ಇದಕ್ಕೆ ಸ್ವಾಗತವಿದೆ. ಜಿಲ್ಲೆಯ ಅಭಿವೃದ್ಧಿಯ ಜೊತೆ ನೀವು ಅಭಿವೃದ್ಧಿ ಆಗಿದ್ದೀರಿ.

ಶಿವಮೊಗ್ಗ ನಗರದಲ್ಲಿ 15 ಕಿಮಿ ದೂರ ಬೈಪಾಸ್ ನಿರ್ಮಿಸಲಾಗಿದೆ. ಅದು ಬಂದು ಇಳಿದಿದ್ದು ನಿಮ್ಮ‌ಕಾಲೇಜಿನ ಬಳಿ. ರೈಲ್ವೆ ಒವರ್ ಬ್ರಿಡ್ಜ್ ಸಹ ನಿರ್ಮಿಸಿರುವುದು ನಿಮ್ಮ‌ಆಸ್ತಿ ಇರುವ ಕಡೆ ವಿನಃ ಅಭಿವೃದ್ಧಿಯ ಪಟ್ಟಿ ಇದೆ. ನೀವು ತೋರಿಸಿರುವ ಪೇಪರ್ ಬ್ಲಾಕು ಅಲ್ಲ, ವೈಟು ಅಲ್ಲ ನಿಮ್ಮದು ಎಲ್ಲೋ ಪೇಪರ್ ಎಂದ ಆಯನೂರು, ಮೋದಿ ಬಗ್ಗೆ ನಮಗೂ ಪ್ರಧಾನಿ ಎಂಬ ಗೌರವವಿದೆ. ಮೋದಿ ಬಿಟ್ಟು ನಿಮ್ಮ ಹೆಸರಿನಲ್ಲೇ ಚುನಾಬಣೆ ಮಾಡಿ ಮೋದಿಯನ್ನ ಯಾಕೆ ಟೀಕಿಸೋಣ ಎಂದರು.

ಕಾರ್ಮಿಕ ವಿರೋಧಿ ನೀವು

ಕಾರ್ಮಿಕ ಕಾಯ್ದೆಯನ್ನ ತಿದ್ದುಪಡಿ ಮಾಡಿ ಶೋಷಣೆಗೆ ತೋರಿಸಿದ್ದೀರಿ. 8 ಗಂಟೆ ದುಡಿಮೆಯನ್ನ ಯಾಕೆ ಮಾಡಿದ್ದು ಎಂಬುದು ಗೊತ್ತ ನಿಮಗೆ? ಕಾರ್ಮಿಕ ವಿರೋಧಿ ಬಡವರ ವಿರೋಧಿ ಆಗಿರುವ ನೀವು ಕುಲಘಾತಕ ಸಂಸ್ಕೃತಿಯನ್ನ‌ ಒಪ್ಪಲು ಸಾಧ್ಯವಿಲ್ಲ.‌ಸಂಸ್ಕೃತಿ ಮಾತನಾಡಲು ನೀವು ಮತ್ತು ಈಶ್ವರಪ್ಪನವರು ಹುಷಾರಾಗಿ ಮಾತಾಡಬೇಕು ಎಂದರು.

ಕಾಂಗ್ರೆಸ್ ನಲ್ಲಿ ಬಲಿದಾನದ ಹಿನ್ನಲೆಯಲ್ಲಿ ವಾರಸುದಾರರು ಬಂದಿದ್ದಾರೆ. ಅದು ನಮ್ಮ‌ವಂಶಪಾರ್ಯಂಪರೆಯಾಗಿದೆ. ನಿಮ್ಮದು ಯಾವ ಬಲಿದಾನ ಎಂದು ಪ್ರಶ್ನಿಸಿದ ಆಯನೂರು ನಿಮ್ಮದು ಬಲಿಯೂ ಬೇರೆಯವರನ್ನ‌ ಕೊಟ್ಟೀದ್ದೀರಿ, ದಾನವನ್ನ ಬೇರೆಯವರಿಗೆ ಕೊಟ್ಟೀದ್ದೀರಿ ಎಂದು ಟೀಕಿಸಿದರು.

ಗೊಂದಲಗೊಂಡ ಚರ್ಚೆ

ಸಂಸದರ ಬಹಿರಂಗ ಚರ್ಚೆಯ ಆಹ್ವಾನ ಸ್ವೀಕರಿಸಿದ ಆಯನೂರು ನಾವುಸಿದ್ದ. ನಾನು ಎತ್ತಿರುವ ಪ್ರಶ್ನೆಯ ಬಗ್ಗೆ ಉತ್ತರಕ್ಕೆ ಸಿದ್ದರಾಗಿ ಬರಲು ಆಯನೂರು ಮತ್ತೊಂದು  ಸವಾಲು ಎಸೆದಿದ್ದಾರೆ. ಸಂಸದರು ಸಚಿವರಿಗೆ ಬಹಿರಂಗ ಚರ್ಚೆಗೆ ಬರಲು ಹೇಳಿದರೆ, ಆಯನೂರು ನಾನೇ ಬರುವೆ,  ನಾನು ಎತ್ತಿರುವ ಪ್ರಶ್ನೆಗೆ ಸಂಸದರು ಸಿದ್ದರಾಗಿ ಬರಲಿ ನೋಡೋಣ ಎಂದು ಹೇಳಿದ್ದಾರೆ. ಇದರಿಂದ ಯಾರು ಯಾರಿಗೆ ಚರ್ಚೆಗೆ ಆಹ್ವಾನಿಸಿದರು. ಚರ್ಚೆಗೆ ಯಾರು ಬರುತ್ತಾರೆ ಎಂಬುದೇ ಗೊಂದಲವಾಗಿದೆ.

ಇದನ್ನೂ ಓದಿ-https://suddilive.in/archives/11688

Related Articles

Leave a Reply

Your email address will not be published. Required fields are marked *

Back to top button