ರಾಜಕೀಯ ಸುದ್ದಿಗಳು

ಜ್ಞಾನದೇಗುಲವಿದು ಕೈಮುಗಿದು ಒಳಗೆ ಬಾ

ಸುದ್ದಿಲೈವ್/ಶಿವಮೊಗ್ಗ

ಕೇಂದ್ರದಲ್ಲಿ ಮೋದಿ ಸರ್ಕಾರ ರಾಷ್ಟ್ರದ ಅಭಿವೃದ್ಧಿಗೆ ಸಾಕಷ್ಟು ಆದ್ಯತೆ ಕೊಟ್ಟಿದೆ. ರಾಷ್ಟ್ರೀಯ ಹೆದ್ದಾರಿಗೆ ಹೆಚ್ಚಿನ ಒತ್ತು ನೀಡಿದೆ. ಇದೇ 22 ರ ಗುರುವಾರ ಮಧ್ಯಾಹ್ನ ಕೇಂದ್ರದ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಶಿವಮೊಗ್ಗಕ್ಕೆ ಆಗಮಿಸುತ್ತಿದ್ದಾರೆ ಎಂದು ಸಂಸದ ರಾಘವೇಂದ್ರ ತಿಳಿಸಿದರು.

ಸುದ್ದಿಗೋಷ್ಠಿ ನಡೆಸಿದ ಸಂಂಸದ ರಾಘವೇಂದ್ರ ಪ್ರಧಾನಿ ಮೋದಿ ಶಿವಮೊಗ್ಗ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಕೊಟ್ಟಿದ್ದಾರೆ. ಈ ಹಿನ್ನಲೆಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ  18 ಕಾಮಗಾರಿಗಳ ಲೋಕಾರ್ಪಣೆ, ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಭಾರತ ಸ್ವಾತಂತ್ರ್ಯ ನಂತರ 91287 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಆಗಿದೆ ಎಂದರು.

54858 ಕಿ.ಮೀ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಈ 10 ವರ್ಷದಲ್ಲಿ ಆಗಿದೆ. ಮೋದಿ ಸರಕಾರ ಅಧಿಕಾರಕ್ಕೆ ಬಂದ ನಂತರ ಹೆದ್ದಾರಿ ಅಭಿವೃದ್ಧಿ ಸಾಕಷ್ಟು ಆಗಿದೆ. ಶಿವಮೊಗ್ಗ, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ ಸೇರಿದಂತೆ ಒಟ್ಟು 6 ಜಿಲ್ಲೆಯ ಕಾಮಗಾರಿ ಉದ್ಘಾಟನೆಯಾಗಲಿದೆ ಎಂದರು.

6168 ಕೋಟಿ ಮೊತ್ತದ ಹೆದ್ದಾರಿ ಕಾಮಗಾರಿ ಲೋಕಾರ್ಪಣೆ, ಶಂಕುಸ್ಥಾಪನೆ ಆಯೋಜನೆ ಮಾಡಲಾಗಿದೆ ಎಂದರು.

ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ ಸ್ಲೋಗನ್ ವಿಚಾರ

ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ ರಾಷ್ಟ್ರ ಕವಿ ಕುವೆಂಪು ಅವರು ಕೊಟ್ಟಿದ್ದ ಸ್ಲೋಗನ್ ಆ ಸ್ಲೋಗನ್ ತಿರುಚುವ ಕೆಲಸ ಆಗಿದೆ ಎಂರರು. ಸಣ್ಣತನದ ಪರಮಾವಧಿ ಒಳ್ಳೆಯದಲ್ಲ ಎಂದು ಗುಡಗಿದ್ದಾರೆ.

ಒಬ್ಬ ಸರಕಾರಿ ನೌಕರ ಸಾವರ್ಕರ್ ಕುರಿತು ನಾಟಕ ಮಾಡಲು ಹೋಗಿದ್ದಕ್ಕೆ ವರ್ಗಾವಣೆ ಆಗಿದೆ. ಶಿಕಾರಿಪುರದಿಂದ ಶೃಂಗೇರಿಗೆ ವರ್ಗಾವಣೆ ಮಾಡಿದ್ದಾರೆವೆಂದು ದೂರಿದರು.

ಜ್ಞಾನ ದೇಗುಲವಿದು ಕೈಮುಗಿದು ಒಳಗೆ ಬಾ ಎಂಬ ಘೋಷ ವಾಕ್ಯವನ್ನ, ಜ್ಞಾನದೇಗುಲವಿದು ಧೈರ್ಯವಾಗಿ ಪ್ರಶ್ನಿಸು ಎಂದು ಬದಲಾವಣೆ ಮಾಡಲಾಗಿದೆ. ಮಕ್ಕಳಿಗೆ ವಿನಯವನ್ನು ಕಲಿಸಲು ರಾಷ್ಟ್ರಕವಿ ಕುವೆಂಪು ಅವರು ನೀಡಿದ ಘೋಷವಾಕ್ಯವಿದು. ದೇವಸ್ಥಾನ ಬೇರೆ ಅಲ್ಲ…, ಶಾಲೆ ಬೇರೆಯಲ್ಲ ಇಲ್ಲಿ ಧೈರ್ಯವಾಗಿ ಪ್ರಶ್ನಿಸು ಎಂಬ ಮಾತು ಸರಿ ಅಲ್ಲ ಎಂದರು.

ದೇವಸ್ಥಾನದಲ್ಲಿ ಹೇಗೆ ವಿನಯದಿಂದ ಇರುತ್ತೇವೋ  ಹಾಗೆ ಶಾಲೆಯಲ್ಲಿ ಮಕ್ಕಳು ವಿನಯದಿಂದ ಇರಬೇಕು ಎಂಬ ಅರ್ಥವಿತ್ತು. ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಹಾಗೂ ರಾಜ್ಯ ಶಿಕ್ಷಣ ನೀತಿಯ ಬಗ್ಗೆ ಚರ್ಚೆ ನಡೆದಿದೆ. ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಬಗ್ಗೆಯೂ ಸಾಕಷ್ಟು ಚರ್ಚೆ ನಡೆಯಿತು. ಶಿಕ್ಷಣ ಕ್ಷೇತ್ರಗಳಲ್ಲಿ ಬದಲಾವಣೆ ತರುವುದಾಗಿ ಹೇಳಿ ತಪ್ಪು ಹೆಜ್ಜೆ ಇಡಲಾಗುತ್ತಿದೆ ಎಂದರು.

ಕೆಲವು ಹಬ್ಬಗಳನ್ನು ಮಾತ್ರ ಆಚರಣೆ ಮಾಡಬೇಕೆಂಬ ತಪ್ಪು ಸುತ್ತೋಲೆ ಕೂಡ ಸರ್ಕಾರ ಕಳುಹಿಸಿ ನಂತರ ವಾಪಸ್ ಪಡೆಯಿತು. ಈ ರೀತಿ ನಡೆಸದಂತೆ ಸರ್ಕಾರಕ್ಕೆ ಪ್ರಾರ್ಥನೆ ಮಾಡುತ್ತೇನೆ. ತಂದೆ ತಾಯಿ ಸ್ಥಾನದಲ್ಲಿರುವ ಶಿಕ್ಷಕರಿಗೆ ಕೈ ಮುಗಿಯುವುದು ಎಂದರೆ ಗುಲಾಮಗಿರಿಯ ಸಂಕೇತ ಅಲ್ಲ. ಮಕ್ಕಳ ಮನಸ್ಸಿನಲ್ಲಿ ತಪ್ಪು ಕಲ್ಪನೆ ಮೂಡಿಸುವ ಕೆಲಸ ಮೊದಲಿನಿಂದಲೂ ಮಾಡುತ್ತಾ ಬಂದಿದ್ದಾರೆ ಎಂದರು.

ಸರ್ಕಾರದ ಮನಸ್ಥಿತಿ ಏನು ಎಂಬುದು ಇದರಿಂದ ಸ್ಪಷ್ಟವಾಗಿ ಗೊತ್ತಾಗಿದೆ.ಇಂತಹ ಸುತ್ತೋಲೆಗಳನ್ನು ತರಬಾರದು ತಂದ ಮೇಲೆ ಅದನ್ನು ಹಿಂಪಡೆದರೆ ಅದು ಸಂತೋಷದ ವಿಷಯ.ಕೇಂದ್ರ ಸರ್ಕಾರ ಶಿಕ್ಷಣ ಕ್ಷೇತ್ರದಲ್ಲಿ ಕಾಲಕ್ಕೆ ತಕ್ಕಂತೆ ಬದಲಾವಣೆ ಮಾಡಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಳ್ಳೆಯ ಶಿಕ್ಷಣ ನೀಡಲು ಎನ್ ಇ ಪಿ ಶಿಕ್ಷಣ ವ್ಯವಸ್ಥೆ ಮಾಡಲಾಗಿದೆ ಎಂದರು.

ಅಂದು 16 ರಾಜ್ಯಗಳು ಒಪ್ಪಿಗೆ ನೀಡಿದ ನಂತರ ಎನ್‌ಇಪಿ ವ್ಯವಸ್ಥೆ ಜಾರಿ ಗೆ ಬಂದಿತ್ತು. ಆದರೆ ಬದಲಾವಣೆಯಿಂದ ಶಾಲಾ ಮಕ್ಕಳಿಗೆ ಅನ್ಯಾಯ ಆಗುತ್ತಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಸಿಬಿಎಸ್ಸಿ ಐ ಸಿ ಎಸ್ ಸಿ ಶಿಕ್ಷಣ ವ್ಯವಸ್ಥೆ ನಡೆಸುತ್ತಾರೆ. ಆದರೆ, ಸರ್ಕಾರಿ ಶಾಲೆಯ ಮಕ್ಕಳಿಗೆ ಮಾತ್ರ ಅನ್ಯಾಯ ಆಗುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ತಂದಂತಹ ಪಾಲಿಸಿ 25 ವರ್ಷಗಳ ಕಾಲ ಬದಲಾವಣೆ ಮಾಡಬಾರದು. ರಾಜಕೀಯ ವ್ಯವಸ್ಥೆಯಲ್ಲಿ ಲಾಭಗಳಿಗಾಗಿ ಈ ರೀತಿ ಮಾಡಬಾರದು ಎಂದು ರಾಘವೇಂದ್ರ ಆಕ್ಷೇಪಿಸಿದ್ದಾರೆ.

ಇದನ್ನೂ ಓದಿ-https://suddilive.in/archives/9251

Related Articles

Leave a Reply

Your email address will not be published. Required fields are marked *

Back to top button