ರಾಜಕೀಯ ಸುದ್ದಿಗಳು

ಕರಸೇವಕರನ್ನ ಬಂಧಿಸಿರುವುದನ್ನ ಖಂಡಿಸಿ ನಾಳೆ ಬಿಜೆಪಿ ನಗರ ಘಟಕದಿಂದ ಪ್ರತಿಭಟನೆ

ಸುದ್ದಿಲೈವ್/ಶಿವಮೊಗ್ಗ

ಅಯೋಧ್ಯಯಲ್ಲಿ ನಡೆದಿದ್ದ ಕರ ಸೇವೆಯಲ್ಲಿ ಪಾಲ್ಗೊಂಡಿದ್ದ ರಾಮ ಭಕ್ತರನ್ನ ಬಂಧಿಸಿರುವುದನ್ನ ಖಂಡಿಸಿ ಜಿಲ್ಲಾ ಬಿಜೆಪಿ ವತಿಯಿಂದ ಜನವರಿ 04 ರಂದು ನಗರದ ಬಸ್ ನಿಲ್ದಾಣ ವೃತ್ತದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದೆ.

ಸಂಸದ ಬಿ.ವೈ.ರಾಘವೇಂದ್ರ, ಶಾಸಕರುಗಳಾದ ಎಸ್.ಎನ್.ಚನ್ನಬಸಪ್ಪ, ರುದ್ರೇಗೌಡರು, ಡಿ.ಎಸ್.ಅರುಣ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ.ಮೇಘರಾಜ್ ಸೇರಿದಂತೆ ಹಲವಾರು ಪ್ರಮುಖರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.ಅಂದು ಬೆಳಿಗ್ಗೆ 11 ಗಂಟೆಗೆ ಪ್ರತಿಭಟನೆ ನಡೆಯಲಿದೆ ಎಂದು ನಗರ ಬಿಜೆಪಿ ಅಧ್ಯಕ್ಷ ಜಗದೀಶ್  ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.

ಅಯೋಧ್ಯ ಕರ ಸೇವೆಯಲ್ಲಿ ಪಾಲ್ಗೊಂಡ ಹುಬ್ಬಳ್ಳಿಯ ಶ್ರೀಕಾಂತ ಪೂಜಾರಿ ಅವರನ್ನು ರಾಜ್ಯದ ಪೊಲೀಸರು ಬಂಸಿದ್ದಾರೆ. ಇದರ ವಿರುದ್ಧ ಪ್ರತಿಭಟನೆಗೆ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಕರೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದರು.

ಇಡೀ ದೇಶಾದ್ಯಂತ ರಾಮಮಂದಿರ ನಿರ್ಮಾಣದ ಸಂತಸ ಮನೆ ಮಾಡಿದೆ. ಈ ಹಿನ್ನೆಲೆಯಲ್ಲಿ ಮನೆ ಮನೆಗೆ ಮಂತ್ರಾಕ್ಷತೆ ತಲುಪಿಸುವ ಕಾರ್ಯ ಭರದಿಂದ ಸಾಗಿದೆ. ಆದರೆ ಕರ್ನಾಟಕ ಕಾಂಗ್ರೆಸ್ ಸರ್ಕಾರ ಆ ಸಂತಸವನ್ನು ಕಸಿದುಕೊಳ್ಳುವ ಹುನಾರ ನಡೆಸಿದೆ. ತುಷ್ಟೀಕರಣ ನೀತಿ ಅನುಸರಿಸುತ್ತಿರುವ ಕಾಂಗ್ರೆಸ್, ಹಿಂದೂ ಕಾರ್ಯಕರ್ತರ ಮನೋಸ್ಥೈರ್ಯ ಕುಗ್ಗಿಸಲು ಕರ ಸೇವಕರನ್ನ ಬಂಧಿಸುವ ಕಾರ್ಯ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಲ್ಪಸಂಖ್ಯಾತರ ಓಲೈಕೆಗಾಗಿ ಎಸ್‍ಸಿಪಿ-ಟಿಎಸ್‍ಪಿ ಯೋಜನೆಯಲ್ಲಿನ 10,000 ಕೋಟಿ ಅನುದಾನವನ್ನು ಕೊಡುವುದಾಗಿ ಮುಖ್ಯಮಂತ್ರಿಗಳೇ ಘೋಷಣೆ ಮಾಡುತ್ತಾರೆ. ಹಿಜಾಬ್ ಧರಿಸಲು ಅವಕಾಶ ಕೊಡುವುದಾಗಿ ಹೇಳುತ್ತಾರೆ. ಅಲ್ಪಸಂಖ್ಯಾತರ ಓಲೈಕೆ ಮತ್ತು ಖುಷಿಪಡಿಸಲು ರಾಜಕಾರಣ ಮಾಡುವುದು ಖಂಡನೀಯ ಎಂದರು.

ಸ್ವಾತಂತ್ಯ ಬಂದಾಗಿನಿಂದಲೂ ಕಾಂಗ್ರೆಸ್ ದೇಶದಲ್ಲಿ ತುಷ್ಟೀಕರಣ ನೀತಿಯನ್ನೇ ಅನುಸರಿಸಿಕೊಂಡು ಬಂದಿದೆ. ಮುಸ್ಲಿಮರನ್ನು ಸಂತೋಷ ಪಡಿಸುವುದೇ ಇವರ ಏಕಮಾತ್ರ ಉz್ದÉೀಶವಾಗಿದೆ. ಅದಕ್ಕಾಗಿ ಬಾಬರ್ ಸಂತತಿಯವರಂತೆ ನಡೆದುಕೊಳ್ಳುತ್ತಾರೆ. ಮತ್ತೊಂದೆಡೆ ತಮ್ಮ ಸರ್ಕಾರದಲ್ಲಿನ ಉಪಮುಖ್ಯಮಂತ್ರಿಗಳ ಮೇಲಿನ ತನಿಖೆ ವಾಪಾಸ್ ಪಡೆಯಲು ನಿರ್ಧರಿಸಿದೆ. ಮಾಜಿ ಶಾಸಕ ಅಖಂಡ ಶ್ರೀನಿವಾಸ್ ಅವರ ಮನೆ ಮೇಲೆ ದಾಳಿ ಮಾಡಿರುವ ಆರೋಪಿಗಳ ಮೇಲಿನ ಪ್ರಕರಣ ವಾಪಾಸ್ ಪಡೆಯಲು ಮುಂದಾಗುತ್ತಾರೆ ಎಂದು ಟೀಕಿಸಿದರು.

ಪ್ರಮುಖರಾದ ಮಾಲತೇಶ್, ಬಾಲು, ಪ್ರದೀಪ್, ಮಾಜಿ ಸೂಡಾ ಅಧ್ಯಕ್ಷ ನಾಗರಾಜ್ ಸುದ್ದಿಗೋಷ್ಟಿಯಲ್ಲಿದ್ದರು.

ಇದನ್ನೂ ಓದಿ-https://suddilive.in/archives/6113

Related Articles

Leave a Reply

Your email address will not be published. Required fields are marked *

Back to top button