ಕ್ರೈಂ ನ್ಯೂಸ್

ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಗೋವುಗಳ ರಕ್ಷಣೆ

ಸುದ್ದಿಲೈವ್/ಶಿಕಾರಿಪುರ

ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದಲ್ಲಿ ಗೋವುಗಳನ್ನ ಸಾಗಿಸಲಾಗುತ್ತಿದ್ದು ಜಾನುವಾರುಗಳನ್ನ ಶಿರಾಳಕೊಪ್ಪ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ.

4 ಟಾಟಾ ಎಸ್, 3 ಅಶೋಕ ಲೈಲ್ಯಾಂಡ್, 1 ಬೊಲೆರೋ ಪಿಕಪ್ ಸೇರಿ, ಒಟ್ಟು ಗಾಡಿ 7ಗಳಲ್ಲಿ 18 ಎಮ್ಮೆಗಳು, 37 ಹಸು ಮತ್ತು ಕರುಗಳು 4 ಒಂಟೆಗಳು ಪತ್ತೆಯಾಗಿವೆ.‌ ಶಿರಾಳಕೊಪ್ಪ ಪೊಲೀಸರ ವಶಕ್ಕೆ ಪಡೆದಿದ್ದಾರೆ.

ಹಿಂದೂ ಜಾಗರಣ ವೇದಿಕೆ ಪುಣೇ ದಹಳ್ಳಿ, ಶಿರಾಳಕೊಪ್ಪ ಹಾಗೂ ಸೊರಬ ಕಾರ್ಯಕರ್ತರಿಂದ ಪೊಲೀಸರಿಗೆ ವಾಹನಗಳಲ್ಲಿ ಸಾಗಿಸುವ ಮಾಹಿತಿ ಲಭ್ಯವಾಗಿದೆ. ಮಾಹಿತಿ ಆಧಾರದ ಮೇರೆಗೆ ಪೊಲೀಸರು ದಾಳಿ ನಡೆಸಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಎಸ್ಪಿ ಮಿಥುನ್ ಕುಮರ್ ವಾಹನಗಳಲ್ಲಿ ಗೋವುಗಳು ಮತ್ತು ಒಂಟೆ ಪತ್ತೆಯಾಗಿದೆ. ಸೂಕ್ತ ದಾಖಲಾತಿ ತರಲು ಸೂಚಿಸಲಾಗಿದೆ.‌ ದಾಖಲಾತಿ ಆಧಾರದ ಮೇರೆಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಗೋವುಗಳನ್ನ ಸಂತೆಗೆ ತೆಗೆದುಕೊಂಡು ಹೋಗುತ್ತಿರುವುದಾಗಿ ಹೇಳುತ್ತಿದ್ದಾರೆ. ದಾಖಲಾತಿ ಪರಿಶೀಲನೆಯ ನಂತರ ಮುಂದಿನ ಕ್ರಮ ಎಂದರು.

ಆದರೆ ಒಂಟೆಗಳು ಪತ್ತೆಯಾದ ಕಾರಣ ಇವುಗಳ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

ಇದನ್ನೂ ಓದಿ-https://suddilive.in/archives/11683

Related Articles

Leave a Reply

Your email address will not be published. Required fields are marked *

Back to top button