ಕ್ರೈಂ ನ್ಯೂಸ್

ಬಾಡಿವಾರೆಂಟ್ ಮೇಲೆ ಬಿಜಿಕೆ ಶಿವಮೊಗ್ಗ ನ್ಯಾಯಾಯಕ್ಕೆ ಹಾಜರ್

ಸುದ್ದಿಲೈವ್/ಶಿವಮೊಗ್ಗ

ನಕ್ಸಲ್ ನಾಯಕ ಬಿ.ಜಿ. ಕೃಷ್ಣಮೂರ್ತಿ ಶಿವಮೊಗ್ಗ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ನಿನ್ನೆ ರಾತ್ರಿ ಕೇರಳದಿಂದ ಶಿವಮೊಗ್ಗಕ್ಕೆ ಪೊಲೀಸರು ಕರೆ ತರಲಾಗಿದೆ. ಶಿವಮೊಗ್ಗ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

ಶಿವಮೊಗ್ಗದಲ್ಲಿ ಒಟ್ಟು 5 ಕೇಸುಗಳನ್ನ ಹೊಂದಿರುವ ನಕ್ಸಲ್ ನಾಯಕ ಕೃಷ್ಣಮೂರ್ತಿ ತೀರ್ಥಹಳ್ಳಿಯ 2 ಕೇಸುಗಳು, ಆಗುಂಬೆಯ 3 ಕೇಸುಗಳ ಸಂಬಂಧ ವಿಚಾರಣೆಗಾಗಿ ಕರೆತಲಾಗಿದೆ.

ಇಂದು 3 ಕೇಸುಗಳ ವಿಚಾರಣೆ ನಡೆಸಲಾಗುತ್ತಿದೆ. 2021 ರ ನವೆಂಬರ್ ನಲ್ಲಿ ಕೇರಳ ಪೊಲೀಸರಿಂದ ಬಂಧಿಸಲ್ಪಟ್ಟಿದ್ದ ನಕ್ಸಲ್ ಕೃಷ್ಣಮೂರ್ತಿ ಕೇರಳದ ತ್ರಿಶೂರ್ ಜಿಲ್ಲೆಯ ವಿಯೂರ್ ನ ಜೈಲಿನಲ್ಲಿ ಬಂಧಿಸಲಾಗಿತ್ತು. ನಕ್ಸಲ್ ಸಂಘಟನೆಯಲ್ಲಿ ಪ್ರಮುಖ ಪಾತ್ರ ಬಿಜೆಕೆ ವಹಿಸಿಕೊಂಡಿದ್ದರು.

ಸಾಕೇತ್ ರಾಜನ್ ಬಳಿಕ ನಾಯಕತ್ವ ವಹಿಸಿಕೊಂಡಿದ್ದ ಕೃಷ್ಣಮೂರ್ತಿ ಕೇರಳ ಹಾಗೂ ಆಂಧ್ರದಲ್ಲಿ ಸಕ್ರಿಯ ಕಾರ್ಯಾಚರಣೆ ನಡೆಸುತ್ತಿದ್ದರು. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ನೆಮ್ಮಾರು ಸಮೀಪದ ಬುಕ್ಕಡಿಬೈಲ್ ನಿವಾಸಿಯಾಗಿದ್ದ ಬಿಜಿಕೆಯನ್ನ 2006 ರಪ್ರಕರಣಕ್ಕೆ ಸಂಬಂಧಿಸಿದಂತೆ  ಶಿವಮೊಗ್ಗ ಕೋರ್ಟ್ ಗೆ ಹಾಜರು ಪಡಿಸಲಾಗಿದೆ.

ಶಿವಮೊಗ್ಗ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯಕ್ಕೆ ಬಿಗಿ ಬಂದೋಬಸ್ತ್ ನಲ್ಲಿ ಕೋರ್ಟ್ ಗೆ ಹಾಜರು ಪಡಿಸಲಾಗಿದೆ. ತೀರ್ಥಹಳ್ಳಿ ಠಾಣೆ ಇನ್ಸ್ಪೆಕ್ಟರ್ ಅಶ್ವಥ್ ಗೌಡ ನೇತೃತ್ವದಲ್ಲಿ ಕೋರ್ಟ್ ಗೆ ಹಾಜರು ಪಡಿಸಲಾಗಿದ್ದಾರೆ. ಮಾವೋವಾದಿ ನಕ್ಸಲರ ಪ್ರಮುಖ ನಾಯಕನಾಗಿರುವ ಬಿ.ಜಿ.ಕೃಷ್ಣಮೂರ್ತಿ

 

Related Articles

Leave a Reply

Your email address will not be published. Required fields are marked *

Back to top button