ಕ್ರೈಂ ನ್ಯೂಸ್

ಕುಡಿಯುವ ನೀರಿನ ವಿಚಾರದಲ್ಲಿ ಅಟ್ರಾಸಿಟಿ ಪ್ರಕರಣ ದಾಖಲು

ಸುದ್ದಿಲೈವ್/ಭದ್ರಾವತಿ

ಕುಡಿಯುವ ನೀರಿನ ಸಂಬಂಧ ನಿರ್ಮಾಣವಾಗಬೇಕಿದ್ದನೀರಿನ ಟ್ಯಾಂಕ್ ನಿರ್ಮಾಣದಲ್ಲಿ, ಹಾಗೂ ಭದ್ರಾವತಿ ತಾಲೂಕು ಅರೆಬಿಳಚಿ ಗ್ರಾಮದಲ್ಲಿ ನೀರಿನ ಸಮಸ್ಯೆಯ ಬಗ್ಗೆ ನಡೆದ ಸಭೆಯಲ್ಲಿ ನಡೆದ ವಿಡಿಯೋವನ್ನ ವಾಟ್ಸಪ್ ಗ್ರೂಪ್ ವೊಂದರಲ್ಲಿ ಗೂಂಡಾಗಳಿಂದ‌ ಕಚೇರಿ ದುರುಪಯೋಗವಾಗಿದೆ ಎಂದು ಹರಿಬಿಟ್ಟ ವಿಚಾರದಲ್ಲೂ ಜಾತಿ ನಿಂದನೆ ಪ್ರಕರಣ ದಾಖಲಾಗಿದೆ.

ತಾಲೂಕಿನ ಅರೆಬಿಳಚಿ ಗ್ರಾಮದ ಭೋವಿ ಕಾಲೋನಿಯಲ್ಲಿ ಕುಡಿಯುವ ನೀರಿನ ಸಂಬಂಧ ಮಧುಸೂದನ್ ಎಂಬುವರು ಟ್ಯಾಂಕ್ ನಿರ್ಮಿಸಿಕೊಡುವಂತೆ ಅರಬಿಳಚಿ ಗ್ರಾಪಂನ ಪಿಡಿಒಗೆ ಮನವಿ ನೀಡಿದ್ದರು.

ಭದ್ರಾ ಚಾನೆಲ್ ಬಳಿ ಟ್ಯಾಂಕ್ ನಿರ್ಮಿಸಿಕೊಡಿ ಎಂದು ಮಧುಸೂದನ್ ಅರ್ಜಿ ನೀಡಿದ್ದರು. ಆದರೆ ಟ್ಯಾಂಕ್ ನ್ನ‌ ಬೇರೆಡೆ ನಿರ್ಮಿಸುತ್ತಿದ್ದರಿಂದ ಮತ್ತೆ ಮಧುಸೂದನ್ ಪಿಡಿಒ ಮತ್ತು ಅರ್ಜಿಯವರಿಗೆ ಕೇಳಿಕೊಳ್ಳುತ್ತಿದ್ದರು. ಇದರಿಂದ ರಾಮಲಿಂಗಂ ಎಂಬುವರು ಮಧುಸೂದನ್ ಅವರ ಜಾತಿ ಬಳಸಿಕೊಂಡು ಬೈದಿದ್ದಾರೆ. ಹಲ್ಲೆಕೂಡ ನಡೆದಿದೆ ಎಂದು ಆರೋಪಿಸಲಾಗಿದೆ.

ಈ ವೇಳೆ ಶಿವಕುಮಾರ್ ರಾಮಲಿಂಗಂರಿಗೆ ನಿಮಗೆ ಸಂಬಂಧವಿಲ್ಲದ ವಿಷಯ ಯಾಕೆ ತಲೆಹಾಕುತ್ತೀರಿ ಎಂದು ಪ್ರಶ್ನಿಸಿದ್ದಾರೆ. ಅವರಿಗೂ ಜಾತಿ ಹೆಸರಿನಲ್ಲಿ ಬೈದಿರುವುದಾಗಿ ಎಫ್ಐಆರ್ ನಲ್ಲಿ ಆರೋಪಿಸಲಾಗಿದೆ.

ಇದಾದ ಬಳಿಕ ಇತ್ತೀಚೆಗೆ ಗ್ರಾಮಪಂಚಾಯಿತಿಯಲ್ಲಿ ನೀರಿನ ಸಮಸ್ಯೆಯ ಕುರಿತು ಇಂಜಿನಿಯರ್, ಪಿಡಿಒ ಮತ್ತು ನೀರುಗಂಟಿ ಸಮ್ಮುಖದಲ್ಲಿ ಸಭೆ ನಡೆದಿದೆ. ಇದರಲ್ಲಿ ರಾಮಲಿಂಗಂನವರ ಕಡೆಯವರಾದ ಐದು ಉನರು ವಿಡಿಯೋ ಮಾಡಿಕೊಂಡು ವಿಶ್ವಬಳಗ ವಾಟ್ಸಪ್ ಗ್ರೂಪ್ ಗೆ ” ಮಧುಸೂದನ್ ಮತ್ತು 25 ಜನ ಗೂಂಡಾಗಳಿಂದ ಪಂಚಾಯಿತಿ ಕಚೇರಿ ದುರುಪಯೋಗವಾಗಿದೆ.

ಪಂಚಾಯಿತಿ ಅಧಿಕಾರಿಗಳು ನಿಷ್ಕ್ರಿಯೆಗೊಂಡಿದ್ದಾರೆ” ಎಂದು ವಿಡಿಯೋವೊಂದನ್ನ ಹರಿಬಿಡಲಾಗಿದೆ. ಇದನ್ನ ಕೇಳಿದಾಗ ಜಾತಿ ನಿಂದನೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಪ್ರಕರಣ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ-https://suddilive.in/archives/9582

Related Articles

Leave a Reply

Your email address will not be published. Required fields are marked *

Back to top button