ಕ್ರೈಂ ನ್ಯೂಸ್

ಪೊಲೀಸರ ಭರ್ಜರಿ ಭೇಟೆ

ಸುದ್ದಿಲೈವ್/ಭದ್ರಾವತಿ

ದ್ವಿಚಕ್ರ ವಾಹನ ಕಳುವಾದ ಬೆನ್ನಲ್ಲೇ ಭದ್ರಾವತಿ ಉಪವಿಭಾಗದ ಎರಡು ಠಾಣೆಯಲ್ಲಿ ದಾಖಲಾದ ದೂರಿನ ಹಿನ್ನಲೆಯಲ್ಲಿ ಆರೋಪಿಗಳು ಮತ್ತು 14 ಬೈಕ್ ಗಳು ಪತ್ತೆ ಮಾಡಲಾಗಿದೆ.

ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮತ್ತಿಘಟ್ಟದಲ್ಲಿ ತೋಟಕ್ಕೆ ತೆರಳಿ ವಾಪಾಸ್ ಬರುವುದರೊಳಗೆ ನಂದೀಶ್ ಎಂಬುವರ  ಬೈಕ್ ಕಳವಾಗಿತ್ತು. ಅದರಂತೆ ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಮೊಹಮ್ನದ್ ಸೊಹೇಬ್ ಎಂಬುವರ ಬೈಕ್ ಕಳುವಾಗಿತ್ತು.

ಆರೋಪಿ ಮತ್ತು ಕಳುವಾದ ಬೈಕ್ ಗಳ ಪತ್ತೆಗಾಗಿ ಎಸ್ಪಿ ಮಿಥುನ್ ಕುಮಾರ್ ಜಿ. ಕೆ, ಮತ್ತು ಅಡಿಷನಲ್ ಎಸ್ಪಿ ಅನೀಲ್ ಕುಮಾರ್ ಭೂಮರೆಡ್ಡಿ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ನಾಗರಾಜ  ಮೇಲ್ವಿಚಾರಣೆಯಲ್ಲಿ ನಗರ ಸಿಪಿಐ ಶ್ರೀಶೈಲ್ ಕುಮಾರ್, ಗ್ರಾಮಾಂತರ ಪಿಐ  ಜಗದೀಶ ಹಂಚಿನಾಳ್, ಪೇಪರ್ ಟೌನ್ ನ  ಶ್ರೀಮತಿ ನಾಗಮ್ಮ,  ಹೊಳೆಹೊನ್ನೂರು ಪೊಲೀಸ್ ಠಾಣೆಯ ಪಿಐ  ಶ್ರೀ ಲಕ್ಷ್ಮಿಪತಿ,  ನೇತೃತ್ವದಲ್ಲಿ ಹೊಳೆಹೊನ್ನೂರು ಠಾಣೆಯ ಪಿಎಸ್ಐ  ಸುರೇಶ,  ರಮೇಶ, ಎಎಸ್ಐ ಚಂದ್ರಶೇಖರ್,  ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆ ಮತ್ತು ಸಿಬ್ಬಂಧಿಗಳಾದ ಹೆಚ್.ಸಿ ನವೀನ್, ನ್ಯೂಟೌನ್ ಪೊಲೀಸ್ ಠಾಣೆ, ಚನ್ನಕೇಶವ, ಭದ್ರಾವತಿ ಹಳೇನಗರ ಪೊಲೀಸ್ ಠಾಣೆ, ನಾಗರಾಜ್, ಪೇಪರ್ ಟೌನ್ ಪೊಲೀಸ್ ಠಾಣೆ, ಪಿಸಿ ಆದರ್ಶ, ಹೊಸಮನೆ ಪೊಲೀಸ್ ಠಾಣೆ ರವರನ್ನು ಒಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಲಾಗಿರುತ್ತದೆ.

ಇದರಂತೆ ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲೂ ತಂಡ ರಚಿಸಲಾಗಿತ್ತು. ನಂದೀಶ್ ರವರ ಬೈಕ್ ಪತ್ತೆಗೆ ಹೊರಟ ಪೊಲೀಸರಿಗೆ ಎರಡು ಬೈಕ್ ಪತ್ತೆಯಾಗಿದೆ. ಶಿವಮೊಗ್ಗ ರಾಗಿಗುಡ್ಡದ ಪ್ರಭು ಯಾನೆ ಕೋಳಿ ಯನ್ನ ಬಂಧಿಸಲಾಗಿದೆ.

ಸೋಹೇಬ್ ಅವರ ಬೈಕ್ ಪತ್ತೆಗೆ ಹೊರಟ ಪೊಲೀಸರ ತಂಡಕ್ಕೆ, ಭರ್ಜರಿಯ ಭೇಟೆಯೇ ದೊರಕಿದೆ.  ಆರೋಪಿಗಳಾದ 1) ಅಬ್ದುಲ್ ಕರೀಂ @ ಕರೀಂ @ ಮನ್ನಾ, 27 ವರ್ಷ, ಸಿದ್ದಾಫುರ ಹೊಸೂರು, ಭಧ್ರಾವತಿ ಮತ್ತು 2) ಅರ್ಷೀಲ್ ಪಾಷಾ @ ಹರ್ಷೀಲ್, 34 ವರ್ಷ, ಸಿದ್ದಾಫುರ ಹೊಸೂರು ಭದ್ರಾವತಿ ರವರನ್ನು ದಸ್ತಗಿರಿ ಮಾಡಲಾಗಿದೆ.

ಆರೋಪಿತರಿಂದ ನ್ಯೂಟೌನ್ ಪೊಲೀಸ್ ಠಾಣೆಯ 7, ಹೊಸಮನೆ ಪೊಲೀಸ್ ಠಾಣೆಯ 2, ಪೇಪರ್ ಟೌನ್ ಪೊಲೀಸ್ ಠಾಣೆಯ 1, ದೊಡ್ಡಪೇಟೆ ಪೊಲೀಸ್ ಠಾಣೆಯ 1, ತರೀಕೆರೆ ಪೊಲೀಸ್ ಠಾಣೆಗೆ ಸೇರಿದ 1 ಪ್ರಕರಣ ಸೇರಿ ಒಟ್ಟು 12 ದ್ವಿ ಚಕ್ರ ವಾಹನ ಕಳ್ಳತನ ಪ್ರಕರಣಗಳಿಗೆ ಸಂಬಂದಿಸಿದ 12 ಬೈಕ್ ಗಳು ಹಾಗೂ ಕೃತ್ಯಕ್ಕೆ ಬಳಸಲಾದ 2 ಬೈಕ್ ಗಳು ಸೇರಿ ಅಂದಾಜು ಮೌಲ್ಯ 5,20,000/- ರೂಗಳ, 14 ಬೈಕ್ ಗಳನ್ನು ಅಮಾನತ್ತು ಪಡಿಸಿಕೊಳ್ಳಲಾಗಿರುತ್ತದೆ.

ಇದನ್ನೂ ಓದಿ-https://suddilive.in/archives/5011

Related Articles

Leave a Reply

Your email address will not be published. Required fields are marked *

Back to top button