ರಾಜಕೀಯ ಸುದ್ದಿಗಳು

ಸಾಧು ಸಂತರಿಗೆ ಬೆದರಿಕೆ ಹಾಕಿರುವ ಬಗ್ಗೆ ಸಾಭೀತು ಪಡಿಸುವೆ-ಈಶ್ವರಪ್ಪ ಸವಾಲು

ಸುದ್ದಿಲೈವ್/ಶಿವಮೊಗ್ಗ

ನಾನು ಶಿವಮೊಗ್ಗ ಲೋಕಸಭಾ ಚುನಾವಣ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದೇನೆ. ಅನೇಕರು ಬೆಂಬಲಿಸುತ್ತಿದ್ದಾರೆ ಎಂದು ಮಾಜಿ ಡಿಸಿಎಂ‌ ಈಶ್ವರಪ್ಪ ತಿಳಿಸಿದರು.

ಕಾರ್ಯಾಲಯದ ಕಚೇರಿ ಉದ್ಘಾಟನೆ ನಂತರ ಕಾರ್ಯಾಲಯ ಆರಂಭಿಸಿದ ನಂತರ ಮಾಧ್ಯಮಗಳಿಗೆ ಮಾತನಾಡಿದ ಈಶ್ವರಪ್ಪ ಜೆಡಿಎಸ್ ಕಮ್ಯೈನಿಸ್ಟ್ ಎಲ್ಲರೂ ಸೇರಿ, ಸಾಮಾಜಿಕ ಕಾರ್ಯಕರ್ತರ ಅಡಿ ನನ್ನ‌ನ್ನ ಬೆಂಬಲಿಸುತ್ತಿದ್ದಾರೆ. ಆರಂಭದಿಂದ ಲೋಕಸಭಾ ಚುನಾವಣೆ ಸ್ಪರ್ಧಿಸುತ್ತಿರುವುದಾಗಿ ಗೊತ್ತಾದಾಗ ಹಿಂದೆ ಸರಿ ಬೇಡಿ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ಹೋಗದೆ ಇದ್ದಾಗ ಅನೇಕರಿಗೆ ಗೊತ್ತಾಯಿತು. ಸ್ಪರ್ಧಿಸುವುದು ಸ್ಪಷ್ಟವಾಗಿದೆ. ವಿಜೇಂದ್ರ, ಮೋದಿ ರಾಘವೇಂದ್ರ ಅವರು ವಾಪಾಸಾಗ್ತಾರೆ ಎನ್ನುತ್ತಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ನಾನು ಸ್ಪರ್ಧೆಯಿಂದ ಹಿಂದೆ ಸರಿಯಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸುತ್ತಿದ್ದಾರೆ.

ಬಿಎಸ್ ವೈ ಬೆಂಬಲಿಗ ರಘುನಾಯ್ಡು ನಮ್ಮ ಗುಂಪಿಗೆ ಬರ್ತಾರೆ. 10 ಜನಕ್ಕೆ ಕಾರ್ಪರೇಟರ್ ಮಾಡುವುದಾಗಿ ಬಿಎಸ್ ವೈ ಸುಳ್ಳು ಹೇಳ್ತಾರೆ. ನಂತರ ಯಾರಿಗೂ ಏನೂ ಸ್ಥಾನಮಾನ ಕೊಡಿಸೊಲ್ಲ. ಅವರವರೆ ಕಚ್ಚಾಡುವಂತೆ ಮಾಡ್ತಾರೆ. ನಾನು ಭೇಟಿಯಾದ ಸಾಧು ಸಂತರಿಗೆ ಹೆದರಿಸಿಲ್ಲ ಎಂದು ಬಿಎಸ್ ವೈ ಮತ್ತು ಪುತ್ರರು ಹೇಳುತ್ತಿದ್ದಾರೆ. ನನ್ನ ಜೊತೆ ಬನ್ನಿ‌ಅವರು ಹೆದರಿಸಿರುವುದು ತೋರಿಸುವೆ. ಬೆದರಿಕೆಗೆ ಒಳಗಾದ ಸಾಧುಸಂತರು ಕಣ್ಣೀರು ಹಾಕಿದ್ದಾರೆ. ಹೀಗೆಲ್ಲ ಆಗುತ್ತೆ ಅಂತ ಗೊತ್ತಿದ್ದರೆ ನಾನು ಸಾಧು ಸಂತರನ್ನ ಭೇಟಿ ಆಗುತ್ತಿರಲಿಲ್ಲ ಎಂದರು.

ವರುಣದಲ್ಲಿ ಸಿದ್ದರಾಮಯ್ಯನವರು ತಮ್ಮ‌ಮಗ ಸೋಲುತ್ತಾನೆ ಎಂಬ ಕಾರಣಕ್ಕೆ ವಿಧಾನ ಸಭೆ ಚುನಾವಣೆಯಿಂದೆ ಹಿಂದೆ ಸರಿದರು. ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯನವರ ಸ್ಥಿತಿ ಹೀಗಿದೆ. ಬಿಜೆಪಿಯಲ್ಲಿ ಬಿಎಸ್ ವೈ ನಿಂದ ಮುಕ್ತಿಯಾಗಬೇಕಿದೆ ಎಂದರು.

ಇದನ್ನೂ ಓದಿ-https://suddilive.in/archives/11637

Related Articles

Leave a Reply

Your email address will not be published. Required fields are marked *

Back to top button