ರಾಜಕೀಯ ಸುದ್ದಿಗಳು

ಸಂಸದ ರಾಘವೇಂದ್ರರನ್ನ ಶಾಸಕ ಬೇಳೂರು ಬಸ್ ಸ್ಟ್ಯಾಂಡ್ ರಾಘು ಎಂದು ವಾಗ್ದಾಳಿ

ಸುದ್ದಿಲೈವ್/ಶಿವಮೊಗ್ಗ

ಭದ್ರಾವತಿಯಿಂದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಪತಿ ಡಾ.ಶಿವರಾಜ್ ಕುಮಾರ್ ಅವರು ಶಿವಮೊಗ್ಗ ನಗರಕ್ಕೆ ಎಂಟ್ರಿಯಾಗಿದ್ದಾರೆ.

ಮಾಚೇನಹಳ್ಳಿ, ಮಲವಗೊಪ್ಪ, ಹರಿಗೆ ಎಂಆರ್ ಎಸ್ ವಿದ್ಯಾನಗರದ ಗಣೇಶ್ ಕ್ಯಾಂಟೀನ್ ಬೆಕ್ಕಿನ ಕಲ್ಮಠದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಭರ್ಜರಿ ಸ್ವಾಗತ ಕೋರಲಾಗಿದೆ. ಬೆಕ್ಕಿನಕಲ್ಮಠದಲ್ಲಿ ಮೂಸುಂಬೆ ಹಣ್ಣಿನ ಹಾರ ಹಾಕಲಾಗಿದೆ.

ನಂತರ ಬೈಲ್ ರ್ಯಾಲಿ ಮೂಲಕ ಲಗಾನ್ ಕಲ್ಯಾಣ ಮಂದಿರದಲ್ಲಿ ಚುನಾವಣ ಭಾಷಣ ನಡೆಸಲಾಯಿತು.ಬೆಳಿಗ್ಗೆ 11-30 ಕ್ಕೆ ಬರಬೇಕಿದ್ದ ಅಭ್ಯರ್ಥಿ 2-45 ಕ್ಕೆ ಆಗಮಿಸಿ ಮೂರು ಗಂಟೆಗಳ ತಡವಾಗಿ ಆಗಮಿಸಿದ್ದಾರೆ.

ಗೋಪಾಲ ಕೃಷ್ಣ ಬೇಳೂರು

ಲಗಾನ್ ಕಲ್ಯಾಣ ಮಂದಿರದಲ್ಲಿ ನಡೆದ ಸಭೆಯಲ್ಲಿ ಶಾಸಕ ಗೋಪಾಲ ಕೃಷ್ಣ ಬೇಳೂರು ಮಾತನಾಡಿ, ಕೇಧರದ ನಾಯಕರು ಸಮರ್ಥ ಅಭ್ಯರ್ಥಿಯನ್ನ ನೀಡಿದ್ದಾರೆ. ನಿಮ್ಮ ವೈಯುಕ್ತಿಕ ಗಲಾಟೆಯನ್ನ‌ಅಭ್ಯರ್ಥಿಗಳ ಸೋಲಿಗೆ ಕಾರಣ ಆಗಬಾರದು ಎಂದು ಕರೆ ನೀಡಿದರು.

ಸಂಸದ ರಾಘವೇಂದ್ರವರ ತಂದೆ ಸಿಎಂ ಆಗುವ ಮುಂಚೆ ಏನು ಮಾಡುದ್ರು, ಏನೂ ಮಾಡಿಲ್ಲ‌ ನಮಗೆ ಅಧಿಕಾರ ಕೊಡಿ ನಾವು ಕೆಲಸ ಮಾಡಿ ತೋರಿಸುವುದಾಗಿ ಗುಡುಗಿದರು.‌

ಬಸ್ ಸ್ಟ್ಯಾಂಡ್ ರಾಘುವಿನಿಂದ ಏನೂ ಅಭಿವೃದ್ಧಿ ಆಗಿಲ್ಲ. 80 ಕೋಟಿ ಜೋಗ ಅಭಿವೃದ್ಧಿ ಮಾಡಿರುವುದಾಗಿ ಹೇಳಿದರು. 20 ಕೋಟಿ ಅಭಿವೃದ್ಧಿ ಆಗಿಲ್ಲ. ಶಿವಮೊಗ್ಗ ತುಮಕೂರು ಹೈವೆಯನ್‌ನ ಪೂರ್ಣಗೊಳಿಸಲು 18 ವರ್ಷ ಕಳೆದರೂ ಆಗಿಲ್ಲ ನಿಮಗೆ. ಹಾಗಾಗಿ ಕಾಂಗ್ರೆಸ್ ಅಭ್ಯರ್ಥಿಯನ್ನ ಗೆಲ್ಲಿಸಿ. ಅಭಿವೃದ್ಧಿಗ ಮಾಡುವುದಾಗಿ ಹೇಳಿದರು.

ಯಡಿಯೂರಪ್ಪ ಹಡಬೆ‌ ದುಡ್ಡು ಇಟಗಟುಕೊಂಡಿದ್ದಾರೆ. ಈಶ್ವರಪ್ಪನವರನ್ನ ತೆಗೆದರು. ಈಶ್ವರಪ್ಪನವರ ವಿರುದ್ಧವೂ ಮಾತನಾಡಿದ ಅವರು‌ ಈಶ್ವರಪ್ಪ ನವರು ಕೇವಲ ಹಿಂದುತ್ವ ಎಂದು ಮಾತನಾಡಿದ್ದಕ್ಜೆ ಈ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಜೆಪಿ ಕಟ್ಟಟಿದಾಗ ಯಾರು ಆಕ್ಷೇಪಿಸಿದರೋ ಅಂತಹ ಬಿಜೆಪಿ ನಾಯಕರನ್ನ ಬಿಎಸ್ ವೈ ತುಳಿದದ್ದಾರೆ. ನನ್ನನ್ನೂ ತುಳಿದರು.

ನಾನು ಎದ್ದುಬಂದಿದ್ದೇನೆ. ನಿಮ್ಮ ಸಹಕಾರವಿದ್ದರೆ ಮತ್ತೆ ಅವರನ್ನ ರಾಜಕೀಯವಾಗಿ ಬಡಿದು ಹಾಕುವುದಾಗಿ ಗುಡುಗಿದರು.

ಮಧು ಬಂಗಾರಪ್ಪ ಮಾತು

ಸಚಿವ ಮಧು ಬಂಗಾರಪ್ಪ ಮಾತನಾಡಿ, ನಾನು ಉಸ್ತುವಾರಿ ತೆಗೆದುಕೊಳ್ಳಲ್ಲ ತಂದೆ ಸ್ಥಾನದಲ್ಲಿರುವ ಕಾರ್ಯರ್ತರೇ ಉಸ್ತುವಾರಿಯಾಗಿದ್ದಾರೆ. ಗೀತಾ ನನ್ನ ಅಕ್ಕ ಇರಬಹುದು ಆದರೆ ಮೀಡಿಯೇಟರ್ ಅಲ್ಲ. ಬಂಗಾರಪ್ಪ ನಂತಹ ಕೆಲಸವನ್ನ ಗೀತಾ ಶಿವರಾಜ್ ಕುಮಾರ್ ನಿಮ್ಮ‌ ಕೆಲಸ ಮಾಡಿಕೊಡತ್ತಾರೆ ಎಂದರು.

ಬಿವೈಆರ್ ನೀವು ಕಡಿದುಹಾಕಿದ್ದು ಏನು? ನಿಮ್ಮ ತಂದೆ ಭ್ರಷ್ಠಾಚಾರದಲ್ಲಿಎಂಪಿ ಆದರಿ. ನಿಮ್ಮ ತಂದೆ ಸಿಎಂ ಆಗಿದ್ದು 2008ರಲ್ಲಿ, ನಮ್ಮ ತಂದೆ 1990 ರಲ್ಲೇ ಆದವರು. ಆಗಲೇ ನಮಗೆ ಮುಖ್ಯಮಂತ್ರಿಗಳ ಮಕ್ಕಳಾಗಿದ್ದೆವು ಚೋಟಾ ಸಹಿ ಹಾಕಿ ನಾವು ಅಧಿಕಾರಕ್ಜೆ ಬಂದಿಲ್ಲವೆಂದು ಬಿವೈಆರ್ ವಿರುದ್ಧ ಮಾತನಾಡಿದರು.‌

ಬಂಗಾರಪ್ಪ ಸೋತಾಗ ಸೋತು ರಾಜಕಾರಣ ಮಾಡಿದವರು. ಎಂದು ಹೆದರಲಿಲ್ಲ. ಆಶ್ರಯ, ಆರಾಧನ, ಗ್ರಾಮೀಣ ಕೃಪಾಂಕದಲ್ಲಿ ಬಂಗಾರಪ್ಪನವರನ್ನ ಕಾಣುತ್ತೇವೆ. ಪಂಪ್ ಸೆಟ್ ಗೆ ಉಚಿತ ವಿದ್ಯುತ್ ನೀಡಿದ ಕಾರ್ಯಕ್ರಮವನ್ನ ಮರೆಯಲಾಗುವುದಿಲ್ಲ ಎಂದರು.

ಶರಾವತಿ ಸಂತ್ರಸ್ತರ 13 ಸಭೆ ನಡೆಸಿದ್ದೇವೆ ಕೇಂದ್ರದ ಮೊರೆ ಹೋಗಬೇಕಿದೆ. ಬಿಜೆಪಿ ಅವರು ಹೈವೆ, ಸೇತುವೆ, ಮೊದಲಾದ ಬ್ಯಾರ್ ಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದರು. ಆದರೆ ಶರಾವತಿ ಸಂತ್ರಸ್ಥರ ಬಗ್ಗೆ ಏನೂ ಕ್ರಮ ಕೈಗೊಂಡಿಲ್ಲ. ಈ ಬಾರಿ ಬಿಜೆಪಿ ಇರುವ ಎಂಪಿ ಸ್ಥಾನವನ್ನ ಕಳೆದುಕೊಳ್ಳಲಿದೆ ಎಂದು ದೂರಿದರು.

ಇದನ್ಬೂ ಓದಿ-https://suddilive.in/archives/11117

Related Articles

Leave a Reply

Your email address will not be published. Required fields are marked *

Back to top button