ರಾಜಕೀಯ ಸುದ್ದಿಗಳು

ನುಡಿದಂತೆ ನಡೆದ ಸರ್ಕಾರ ನಮ್ಮದು-ಸಿಎಂ ಸಿದ್ದರಾಮಯ್ಯ

ಸುದ್ದಿಲೈವ್/ಶಿವಮೊಗ್ಗ

ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷದ ಐದು ಗ್ಯಾರೆಂಟಿಗಳನ್ನ ಘೋಷಿಸಲಾಗಿತ್ತು. ಅಧಿಕಾರಕ್ಕೆ ಬಂದ ತಕ್ಷಣನೇ ಪ್ರನಾಳಿಕೆಯಲ್ಲಿ ಪ್ರಕಟಿಸಿರುವುದನ್ನ ಭರವಸೆ ನೀಡಿರಲಿಲ್ಲ. ಆದರೆ ಗ್ಯಾರೆಂಟಿಯನ್ನ ಕೊಡ್ತೀವಿ ಎಂದಿದ್ವಿ ಕೊಟ್ಟಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಶಿವಮೊಗ್ಗದ ಫ್ರೀಡಂ ಪಾರ್ಕ್ ನಲ್ಲಿ ಸರ್ಕಾರದ ಮಹಾತ್ವಾಕಾಂಕ್ಷೆ ಗ್ಯಾರೆಂಟಿಯಲ್ಲಿ ಒಂದಾಗಿರುವ ಯುವನಿಧಿ ಕಾರ್ಯಕ್ರಮವನ್ನ ಉದ್ಘಾಟಿಸಿ ಮಾತನಾಡಿದರು.

ಕೊಂಡುಕೊಳ್ಳುವ ಶಕ್ತಿ ಹೆಚ್ಚಿಸಲು ಪ್ರನಾಳಿಕೆ ಮೂಲಕ ಗ್ಯಾರೆಂಟಿಯನ್ನ ನೀಡ್ತಾಇದ್ದೇವೆ. ಕೊಟ್ಟ ಮಾತಿನಂತೆ ನಡೆದಿದ್ದೇವೆ. ಭರವಸೆಯ ವೇಳೆ 2022-23 ರಲ್ಲಿ ಪದವೀಧರರಿಗೆ ಮತ್ತುಡಿಪ್ಲೋಮಾ ಪದವೀಧರರಿಗೆ 6 ತಿಂಗಳಲ್ಲಿ ಕೆಲಸ ಸಿಗದಿದ್ದರೆ ಹಣ ಹಾಕುವುದಾಗಿ ಭರವಸೆ ನೀಡಿದ್ವಿ.

ಮೇ20 ರಂದು ಸರ್ಕಾರ ಅಧಿಕಾರಕ್ಕೆ ಬಂತು ಜೂನ್ 11 ಕ್ಕೆ ಶಕ್ತಿಯೋಜನೆಗೆ ಚಾಲನೆಗೆ ಚಾಲನೆ ನೀಡಲಾಯಿತು. 130 ಕೋಟಿ 28 ಲಕ್ಷ ಮಹಿಳೆಯರು ಉಚಿತವಾಗಿ ಸರ್ಕಾರಿ ಬಸ್ ನಲ್ಲಿ ಪ್ರಯಾಣ ಮಾಡಿದ್ದಾರೆ. ಹಿಂದೆ ಯಾವ ಕಾಲದಲ್ಲೂ ಮಾಡಿರಲಿಲ್ಲ. 50% ಜನ ದೇವಸ್ಥಾನ ಕಚೇರಿಗೆ ಹೋಗುವವರಿಗೆ ಉಚಿತವಾಗಿ ನೀಡಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಗೃಹಜ್ಯೋತಿಯನ್ನ ಗುಲ್ಬರ್ಗದಲ್ಲಿ ಲೋಕಾರ್ಪಣೆ ಮಾಡಿ 1.65 ಕೋಟಿ ಕುಟುಂಬಕ್ಕೆ 200 ಯುನಿಟ್ ವರೆಗೆ ಬಿಲ್ ಕಟ್ಟದಂತೆ ಉಚಿತವಾಗಿ ನೀಡಲಾಗಿದೆ. ಅನ್ನಭಾಗ್ಯದಲ್ಲಿ 5 ಕೆಜಿ ಜೊತೆಗೆ ರಾಜ್ಯ ಸರ್ಕಾರ 5 ಕೆಜಿ ಕೊಡುವುದಾಗಿ ಭರವಸೆ ನೀಡುದ್ವಿ ಅಕ್ಕಿ ಸಿಗಲಿಲ್ಲ. ಯಾರಿಗೆ ಬಿಪಿಎಲ್ ಕಾರ್ಡ್ ಇದೆಯೋ ಅವರಿಗೆ 5 ಕೆಜಿ‌ ಅಕ್ಕಿ ಬದಲು 170 ರೂ ನೀಡುದ್ವಿ. ಗೃಹಲಕ್ಷ್ಮಿಯನ್ನ ಮೈಸೂರಿನಲ್ಲಿ ಲೋಕಾರ್ಪಣೆ ಮಾಡುದ್ವಿ ಆಗಸ್ಟ್ ನಲ್ಲಿ 1.17 ಕೋಟಿ ಹಣ ಮಹಿಳೆಯರ ಬ್ಯಾಂಕ್ ಅಕೌಂಟ್ ಗೆ  ಪ್ರತಿತಿಂಗಳು 2000 ರೂ. ಹೋಗುವಂತೆ ಮಾಡಲಾಗಿದೆ ಎಂದು ತಿಳಿಸಿದರು.‌

ಇವತ್ತು ಯುವನಿಧಿಗೆ ಚಾಲನೆ ನೀಡಿದ್ದೇವೆ. ಹಣ ನೀಡುವ ಮೂಲಕ ಯುವಕರಿಗೆ ಕೌಶಲ್ಯದ ತರಬೇತಿ ನೀಡಲಾಗುವುದು. ನಿರುದ್ಯೋಗ ಸಮಸ್ಯೆ ಬಗೆಹರಿಸಲು ಯತ್ನಿಸಲಾಗಿದೆ. ಸ್ವಾಮಿವಿವೇಕಾನಂದರ ಜನ್ಮದಿನದಂದು ಚಾಲನೆ ನೀಡಲಾಗುತ್ತಿದೆ.‌4.20 ಲಕ್ಷ ಯುವಕರಲ್ಲಿ 3.90 ಲಕ್ಷ ಜನ ಪದವೀಧರರು 18 ಡಿಪ್ಲೊಮಾದವರಿಗೆ ಸರ್ಕಾರ ಮಾಸಾಶನವನ್ನ ನೀಡಲಾಗುತ್ತದೆ ಎಂದರು.

ಸಚಿವ ಡಾ.ಶರಣಪ್ರಕಾಶ್ ಪಾಟೀಲ್

ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಮಾತನಾಡಿ, 70 ಸಾವಿರ ಜನ ನೋಂದಣಿ ಆಗಿದೆ. ಪದವಿಧರರಿಗೆ 3 ಸಾವಿರ ಮತ್ತು ಡಿಪ್ಲೊಮಾದವರಿಗೆ 1500 ಹಣ ನೀಡಲಾಗುತ್ತಿದೆ. ಎರಡು ವರ್ಷ ಪ್ರತಿ ತಿಂಗಳು ನೀಡಲಾಗುವುದು ಸೇವಾಸಿಂಧುವಿನಲ್ಲಿ ಹೆಸರು ನೋಙದಾಯಿಸಿದರೆ ಅವರಿಗೆ ಯಾವ ಕ್ಷೇತ್ರದಲ್ಲಿ ಪರಿಣಿತಿ ಹೊಂದಿರುತ್ತಾರೋ ಅವರಿಗೆ ತರಬೇತಿ ನೀಡಲಾಗುವುದು ಎಂದರು.

ವಿದ್ಯಾರ್ಥಿಗಳಾದ ದರ್ಶನ್, ರಚನಾ ಹನುಮಂತೇಗೌಡ, ಪೂಜಾ ಎನ್,ಮೈಲಾರ್ಮುಲ್ಲಾ ಮೊದಲಾದವರಿಗೆ ಸಾಂಕೇತಿಕವಾಗಿ ಯುವನಿಧಿಯ ಚೆಕ್ ನ್ನ ಸಿಎಂ ಸಿದ್ದರಾಮಯ್ಯನವರು ನೀಡಿದರು.

ಸಂಸದ ರಾಘವೇಂದ್ರ

ಸಂಸದ ರಾಘವೇಂದ್ರ ಮಾತನಾಡಿ ಬಂಗಾರಪ್ಪನವರ ಸಮಯದಲ್ಲಿ , ಕೃಷಿ ಕಾಲೇಜು ಆರಂಭವಾಯಿತು. ಬಿಎಸ್ ವೈ ಅಪ್ ಗ್ರೇಡ್ ಮಾಡಿದ್ದರು. ಕೃಷಿ ವಿವಿ ಆರಂಭಿಸಲು ಹಿಂದಿನ ಬಿನೆಪಿ ಸರ್ಕಾರ ಜಾಗ ನೀಡಿದೆ.ಈ ಬಾರಿ ಬಜೆಟ್ ನಲ್ಲಿ ಹಣ ತೆಗೆದಿಡುವಂತೆ ಕೋರಿದರುಲ, ವಿಮಾನಹಾರಾಟಕ್ಕೆವಿಸಿಲಿಟಿ ಸಮಸ್ಯೆ ಇದೆ. ನೈಟ್ಲ್ಯಾಂಡಿಂಗ್ ಗೆ ರಚಿಸಿಕೊಡುವಂತೆ.ಶರಾವತಿ ಮುಳುಗಡೆ ಸಂತ್ರಸ್ತರಿಗೆ ಹಕ್ಕುಪತ್ರ ನೀಡುವಂತೆ ಕೋರಿದರು. ಜೊತೆಗೆ ಯುವನಿಧಿ ಕಾರ್ಯಕ್ರಮದಲ್ಲಿ ಪಿಎಂ ವಿಶ್ವಕರ್ಮ ಕಾರ್ಯಕ್ರಮ ಬಳಸಿಕೊಳ್ಳಲು ಯುವಕರಿಗೆ ಕರೆ ನೀಡಿದರು.

ಡಿಕೆಶಿ ಮಾತು

ಉಪ ಮುಖ್ಯಮಂತ್ರಿ ಡಿಕೆಶಿ ಮಾತನಾಡಿ, ಯುವನಿಧಿ ಮತ್ತು ನಾಲ್ಕು ಗ್ಯಾರೆಂಟಿಯ ಮೂಲಕ ಜನರನ್ನ ಸಾಮಾಜಿಕ ಹಾಗೂ ಆರ್ಥಿಕ ಧೈರ್ಯ ತುಂಬುವ ಕೆಲಸ ಮಾಡಲಾಗುತ್ತಿದೆ. ಬೆಲೆ ಹೆಚ್ಚಳದ ದಿನದಂದು ಜನರಿಗೆ ಜೀವನ ಹೊರೆಯಾಗದಂತೆ ಜಾರಿ ಮಾಡಿದ್ದೇವೆ. ಯುವನಿಧಿ ಕೇವಲ ಉದ್ಯೋಗ ನೀಡುವುದಲ್ಲ.  ಹತ್ತಾರು ಜನಕ್ಕೆ ಉದ್ಯೋಗ ನೀಡುವಂತಾಗ ಬೇಕು ಎಂದು ಕರೆ ನೀಡಿದರು.

ಇದನ್ನೂ ಓದಿ-https://suddilive.in/archives/6691

Related Articles

Leave a Reply

Your email address will not be published. Required fields are marked *

Back to top button

Notice: ob_end_flush(): Failed to send buffer of zlib output compression (0) in /home/twzwscfi/suddilive.in/wp-includes/functions.php on line 5373