ಕ್ರೈಂ ನ್ಯೂಸ್

ಯೂಟ್ಯೂಬ್ ನಲ್ಲಿ ಜ್ಯೋತಿಷ್ಯ ಜಾಹೀರಾತು ನೋಡಿ ಲಕ್ಷಾನುಗಟ್ಟಲೆ ಹಣ ಕಳೆದುಕೊಂಡ ಮಹಿಳೆ

ಸುದ್ದಿಲೈವ್/ಶಿವಮೊಗ್ಗ

ಜ್ಯೋತಿಷ್ಯ ಜಾಹೀರಾತು ನೋಡಿ ಜ್ಯೋತಿಷ್ಯರಿಗೆ ಕರೆ ಮಾಡಲು ಹೋದ ಮಹಿಳೆಗೆ ಶಾಕ್ ಆಗಿದೆ.ಸ್ವಾಮೀಜಿ ನಿರ್ದೇಶನದಂತೆ ಸಾಗಿದ ಮಹಿಳೆ 9,44, 850 ರೂ. ಕಳೆದುಕೊಂಡಿದ್ದಾರೆ.

35 ವರ್ಷದ ಮಹಿಳೆ ತನ್ನ ಓಪೊ ಕಂಪನಿಯ ಮೊಬೈಲ್ ನಲ್ಲಿ ಯೂ ಟೂಬ್ ನೋಡುತ್ತಿರುವಾಗ ಜ್ಯೋತಿಷ್ಯ ಹೇಳುವ ಬಗ್ಗೆ, ಜಾಹೀರಾತು ಬಂದಿದ್ದು, ಆ ಜಾಹೀರಾತಿನಲ್ಲಿ, ಮೊಬೈಲ್ ನಂಬರ್ ಇದ್ದು, ಮಹಿಳೆ ವೈಯಕ್ತಿವಾಗಿ ಸಮಸ್ಯೆಗಳಿದ್ದುದ್ದರಿಂದ ಜ್ಯೋತಿಷ್ಯ ಕೇಳೋಣವೆಂದು ಮೊಬೈಲ್ ನಂಬರಿಗೆ ಕರೆ ಮಾಡಿದ್ದಾರೆ.

ಕರೆ ಸ್ವೀಕರಿಸಿದ ವ್ಯಕ್ತಿ ಮಾತನಾಡಿದಾಗ  ತನ್ನ ಸಮಸ್ಯೆಗಳನ್ನು ಹೇಳಿಕೊಂಡಿರುತ್ತಾರೆ, ಅದಕ್ಕೆ ಅವರು ನಿಮ್ಮ ಸಮಸ್ಯೆ ಬಗೆಹರಿಸಲು ಪೂಜೆ ಮಾಡಿಸಬೇಕೆಂದು ಹೇಳಿ  ಮೊಬೈಲ್ ನಂಬರಿಗೆ 251/- ರೂ ಗೂಗಲ್ ಪೇ ಮಾಡಲು ತಿಳಿಸಿರುತ್ತಾರೆ.  ನಂತರ ಪಿರ್ಯಾದಿ ಮಾರನೇ ದಿನ ಪೋನ್ ಮಾಡಿದಾಗ ನಿನ್ನ ಹೆಸರಿನಲ್ಲಿ ದೇವರಿಗೆ ಅಲಂಕಾರ ಮಾಡಬೇಕೆಂದು ಅದೇ ಮೊಬೈಲ್ ನಂಬರಿಗೆ 1,000/- ಗೂಗಲ್ ಪೇ ಮಾಡಲು ತಿಳಿಸಿದ್ದು, ಮಹಿಳೆ ಗೂಗಲ್ ಪೇ ಮಾಡಿರುತ್ತಾರೆ.

ನಂತರ ಹೀಗೆ ವಿವಿಧ ಕಾರಣಗಳನ್ನು ಹೇಳಿ  ಹಂತ ಹಂತವಾಗಿ ಜ್ಯೋತಿಷಿ ಒಟ್ಟು 6,37,850/- ರೂ ವರ್ಗಾವಣೆ ಮಾಡಿಸಿಕೊಂಡಿರುತ್ತಾರೆ,  ಅವರಿಗೆ ಪೋನ್ ಮಾಡಿ ಹಣವನ್ನು ಕೇಳಿದಾಗ ನನಗೆ ಆಕ್ಸಿಡೆಂಟ್ ಆಗಿತ್ತು. ನಾನು ಕೋಮಾದಲ್ಲಿದ್ದೆ, ಈಗ ನಾನು ಚೇತರಿಸಿಕೊಂಡಿರುತ್ತೇನೆ. ನಾನು ನಿನಗೆ ಹಣವನ್ನು ಹೊಂದಿಸಲು ಆಗುವುದಿಲ್ಲ. ನಮ್ಮ ದೇವಸ್ಥಾನದ ನನಗಿಂತ ಮೇಲಿನ ವ್ಯಕ್ತಿಯ ನಂಬರ್ ಕೊಡುತ್ತೇನೆ, ಅವರಿಗೆ ಪೋನ್ ಮಾಡಿ ಅವರು ನಿಮ್ಮ ಹಣವನ್ನು ವಾಪಸ್ ಕೊಡುತ್ತಾರೆ,

ನನ್ನ ಎಲ್ಲಾ ಜವಬ್ದಾರಿಯನ್ನು ಅವರಿಗೆ ವಹಿಸಿರುತ್ತೇನೆಂದು ಬೇರೆ ಮೊಬೈಲ್ ನಂಬರ್ ಕೊಟ್ಟಿರುತ್ತಾನೆ. ನಿಜವೆಂದು ನಂಬಿ ಈ ನಂಬರಿಗೆ ಕಾಲ್ ಮಾಡಿದ್ದು, ಆಕಡೆಯಿಂದ ಮಾತನಾಡಿದ ವ್ಯಕ್ತಿ. ಹೌದು ಅವರು ಸಾಯುವ ಸ್ಥಿತಿಯಲ್ಲಿದ್ದಾರೆ, ಎಲ್ಲಾ, ಜವಬ್ದಾರಿಯನ್ನು ನನಗೆ ವಹಿಸಿದ್ದಾರೆ, ನಿಮ್ಮ ಹಣವನ್ನು ನಾನು ಸೆಟಲ್ ಮೆಂಟ್ ಮಾಡಿ ಕೊಡುತ್ತೇನೆಂದು, ಹೇಳಿ ನಿಮ್ಮ ಎಲ್ಲಾ ಹಣವನ್ನು ನಾನು ಹೊಂದಿಸಿ ಕೊಡಬೇಕೆಂದರೆ ಸ್ವಲ್ಪ ಖರ್ಚಾಗುತ್ತದೆ ನೀವು ನನ್ನ ಮೊಬೈಲ್ ನಂಬರಿಗೆ ಹಣವನ್ನು ಹಾಕಿ ಎಂದು ತಿಳಿಸಿದರು.

ಅವರನ್ನ  ನಂಬಿ  ಮೊಬೈಲ್ ನಂಬರಿಗೆ ಹಂತ ಹಂತವಾಗಿ ನನ್ನ ಖಾತೆಯಿಂದ 1,93,000/- ಮತ್ತು ನನ್ನ ಪರಿಚಯದವರಾದ ರಾಮು ರವರ ಖಾತೆಯಿಂದ 75,000/- ನಿಸರ್ಗ ರವರ ಖಾತೆಯಿಂದ 14,000/- ಲತಾ ರವರ ಖಾತೆಯಿಂದ 25,000/- ಒಟ್ಟು 3,07,000/- ರೂ ಹಣವನ್ನು ವರ್ಗಾವಣೆ ಮಾಡಿರುತ್ತಾರೆ, ಈ ರೀತಿಯಾಗಿ ಯೂ ಟೂಬ್ ನಲ್ಲಿ, ಜ್ಯೋತಿಷ್ಯ ಹೇಳುವುದಾಗಿ ಜಾಹೀರಾತು ನೀಡಿ ನನ್ನಿಂದ ಒಟ್ಟು 9,44,850/- ರೂ ಹಣವನ್ನು ವರ್ಗಾವಣೆ ಮಾಡಿಸಿಕೊಂಡು ವಂಚಿಸಿದವರನ್ನು ಪತ್ತೆ ಮಾಡಿ,  ಹಣವನ್ನು ವಾಪಸ್ಸು ಕೊಡಿಸಬೇಕೆಂದು ದೂರು ದಾಖಲಾಗಿರುತ್ತದೆ.

ಇದನ್ನೂ‌ಓದಿ-https://suddilive.in/archives/11630

Related Articles

Leave a Reply

Your email address will not be published. Required fields are marked *

Back to top button