ರಾಜಕೀಯ ಸುದ್ದಿಗಳು

ಜಾತಿ ಗಣತಿ ಇತರರ ಬದುಕಿಗೂ ಆಸರೆಯಾಗಬೇಕು-ಆರಗ ಜ್ಞಾನೇಂದ್ರ

ಸುದ್ದಿಲೈವ್/ಶಿವಮೊಗ್ಗ

ಜಾತಿಗಣತಿ ವರದಿ ವರದಿ ಬಗ್ಗೆ ಒಕ್ಜಲಿಗ ಸಮುದಾಯದಿಂದ ಯಾವುದೇ ತಕರಾರಿಲ್ಲ. ಆದರೆ ವರದಿ ಅವೈಜ್ಞಾನಿಕವಾಗಿರುವುದರಿಂದ ಮತ್ತೊಮ್ಮೆ ಗಣತಿ ಆಗಲಿ ಎಂಬುದು ನಮ್ಮ ಅಪೇಕ್ಷೆ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

ಅವರು ತೀರ್ಥಹಳ್ಳಿ ತಾಲೂಕಿನಲ್ಲಿ  ಒಕ್ಕಲಿಗರ ಸಂಘದ ಷೇರುದಾರರ ಸಂಘದಲ್ಲಿ ನಡೆದ  ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಜಾತಿ ಜನಗಣತಿ‌ ವರದಿ ಬಗ್ಗೆ ಬೆಂಗಳೂರಿನಲ್ಲಿ ಒಕ್ಕಲಿಗರ ಸಂಘದ ವತಿಯಿಂದ ಒಕ್ಕಲಿಗ ಶಾಸಕರ ಸಭೆ ಕರೆದಿದ್ದರುಈ ಸಭೆಯಲ್ಲಿ ನಾನು ಸಹ ಭಾಗವಹಿಸಿದ್ದೆ. ಇನ್ನೊಂದು ವರ್ಗಕ್ಕೆ ಏನು ಸಿಗಬಾರದು‌ ಎಂಬ ಚಿಂತನೆ ಇಲ್ಲ. ಆದರೆ ಆ ವರದಿ‌ ಅವೈಜ್ಞಾನಿಕ. ‌ಯಾವುದೇ ಮನೆ ಬಾಗಿಲಿಗೆ ಹೋಗಿ ತಯಾರಿಸಿದ ವರದಿ‌ ಅಲ್ಲ ಎಂದು ಹೇಳಿದರು.

ಯಾವುದು ಯಾವುದೋ ಕಂಪನಿಗೆ ಕೊಟ್ಟು, ಏನೇನೋ ಮಾಡಿ ಆ ವರದಿ ತಯಾರು ಮಾಡಿದ್ದಾರೆ. ಆ ವರದಿ ತಯಾರಾಗಿ ಎಂಟು ವರ್ಷ ಆಗಿದೆ. 2017 ರ ಕೊನೆಯಲ್ಲಿ ಆ ವರದಿ ತಯಾರಾಗಿದೆ. ಅಂದಿನ ಮುಖ್ಯಮಂತ್ರಿ ಆ ವರದಿಯನ್ನು ಸ್ವೀಕಾರ ಮಾಡಿರಲಿಲ್ಲ ಎಂದರು.

ಇವತ್ತು ಅದೇ ಮುಖ್ಯಮಂತ್ರಿ ಸ್ವೀಕಾರ ಮಾಡ್ತೀನಿ‌ ಅಂತಿದ್ದಾರೆ. ನಾನು ಸ್ವೀಕರಿಸುತ್ತೇನೆ. ಆ ವರದಿ ಬರಲಿ ಆಮೇಲೆ ನೋಡೋಣ ಅಂತಾರೆ. ಹೌದಪ್ಪ ನೀವು ಆವತ್ತು ಅಧಿಕಾರದಲ್ಲಿ ಇದ್ದಾಗ ಏಕೆ ತೆಗೆದುಕೊಳ್ಳಲಿಲ್ಲ. ನಿಮಗೆ ಅದರೊಳಗೆ ಏನೋ ಇದೆ ಅಂತಾ ಗೊತ್ತಿದೆ. ನಮ್ಮ ಎಲ್ಲಾ ಸಮುದಾಯದ ಶೈಕ್ಷಣಿಕ, ಆರ್ಥಿಕ‌ ಸ್ಥಿತಿಗತಿಗೆ ಸರಿ ಹೋಗುವುದಾದರೆ ಆ ವರದಿ‌ ಬರಲಿ ಎಂದರು.

ಬರೋದೇ ಆಗಿದ್ದರೆ ಐದು ವರ್ಷದ ಹಿಂದೆಯೇ ಬರುತ್ತಿತ್ತು. ಅದೊಂದು ರಾಜಕಾರಣದ ಆಟ ಆಗಬಾರದು. ಈ ವರದಿಯಲ್ಲಿ ತಪ್ಪು ತಪ್ಪು ಅಂಕಿ‌ ಅಂಶಗಳು ಇದ್ದಾವೆ. ಯಾರಿಗೋ ಈ ವರದಿ ಏಟು ಆಗ್ತದೆ.‌ ಯಾವುದೋ ಒಂದು ಸಮುದಾಯಕ್ಕೆ ಏಟು ಆಗ್ತದೆ. ಅದರ ಕಾರ್ಯದರ್ಶಿ ಅದಕ್ಕೆ ಸಹಿ ಹಾಕಿಲ್ಲ ಎಂದರು.

ಮನೆಮನೆಗೆ ಹೋಗಿ ಸರಿಯಾದ ರೀತಿಯಲ್ಲಿ ಸರ್ವೇ ಮಾಡಿಲ್ಲ. ಅಂತಹ ವರದಿ‌ ಕೈ ಸೇರಿದರೆ, ಅಂತಹ ವರದಿಯನ್ನು ಅಧಿಕಾರಕ್ಕಾಗಿ ಜಾರಿಗೊಳಿಸಿದರೆ ನಮ್ಮಂತಹ ಸಮುದಾಯಕ್ಕೆ ಹೊಡೆತ ಬೀಳುತ್ತದೆ. ನಮ್ಮ ಸಮುದಾಯದಲ್ಲಿ ಎಲ್ಲರೂ ಶ್ರೀಮಂತರಾಗಿಲ್ಲ. ಎಲ್ಲರೂ ಅನುಕೂಲಸ್ಥರಾಗಿಲ್ಲ. ಇವತ್ತಿಗು ಯಾರು ಯಾರದ್ದೋ ತೋಟ ಕಾಯುವವರಿದ್ದಾರೆ. ಅವರ ಮಕ್ಕಳಿಗೆ ಶಿಕ್ಷಣ ಇಲ್ಲ. ಅವರ ಬದುಕು ಇನ್ನೂ ನೆಟ್ಟಗಾಗಿಲ್ಲ ಎಂದು ತಿಳಿಸಿದರು.

ಅಂತಹವರು ಇವತ್ತು ಮೇಲೆ ಬರಬೇಕು ಅಂದರೆ ಆ ವರದಿಯಿಂದ ಅಂತಹವರ ಬದುಕಿಗು ಶಕ್ತಿ ಬರಬೇಕು. ಈ ನಿಟ್ಟಿನಲ್ಲಿ ವರದಿಯನ್ನು ನಮ್ಮ ಒಕ್ಕಲಿಗರ ಸಂಘ ರಾಜ್ಯ ಮಟ್ಟದಲ್ಲಿ ವಿರೋಧ ಮಾಡ್ತಿದೆ. ವೈಜ್ಞಾನಿಕವಾಗಿ ವರದಿ ತಯಾರಿಸಿ ಎಲ್ಲರಿಗೂ ಒಳ್ಳೆಯದು ಆಗಲಿ ಎಂದರು.

ಇದನ್ನೂ ಓದಿ-

Related Articles

Leave a Reply

Your email address will not be published. Required fields are marked *

Back to top button