ರಾಜಕೀಯ ಸುದ್ದಿಗಳು

ಈಶ್ವರಪ್ಪನವರ ಬಗ್ಗೆ ರಾಘಣ್ಣ ಏನಂದ್ರು?

ಸುದ್ದಿಲೈವ್/ಶಿವಮೊಗ್ಗ

ಮಾಜಿ ಡಿಸಿಎಂ ಈಶ್ವರಪ್ಪನರು ಬಿಎಸ್ ವೈ ಮತ್ತು ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುತ್ತಿದ್ದು ಈ ಬಗ್ಗೆ ಸಂಸದ ರಾಘವೇಂದ್ರ ತಾಳ್ಮೆಯಿಂದ ಕಾಯುತ್ತಿರುವುದಾಗಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅತಾಳ್ಮೆಯಿಂದ ಈಶ್ವರಪ್ಪನವರು ಪಕ್ಷಕ್ಕೆ ವಾಪಾಸಾಗುವ ಬಗ್ಗೆ ಕಾಯ್ತಾ ಇದ್ದೇವೆ. ಅವರ ಸ್ಪರ್ಧೆಯ ಬಗ್ಗೆ ಹೈಕಮಾಂಡ್ ತೀರ್ಮಾನಿಸಲಿದೆ. ಈಶ್ವರಪ್ಪ ಜಿಲ್ಲೆ ಹಾಳಾಗಿದೆ ಎಂದಿದ್ದಾರೆ. ಜನ ಇದಕ್ಕೆಲ್ಲಾ ಉತ್ತರ ಕೊಟ್ಟಿದ್ದಾರೆ ಎಂದರು.

ಈಶ್ವರಪ್ಪನವರ ಬಗ್ಗೆ ಗೌರವವಿದೆ. ಎಬಿವಿಪಿ ಮತ್ತು ಆರ್ ಎಸ್ ಎಸ್ ನ ಸಂಸ್ಕೃತಿ ನಮಗೂ ಇದೆ. ಹಿಂದುತ್ವಕ್ಕಾಗಿ ಬಿಎಸ್ ವೈ ಕೊಡುಗೆ ಏನು ಇಲ್ಲಾ ಎಂದು ಈಶ್ವರಪ್ಪ ಆರೋಪಿಸಿದ್ದಾರೆ.

ಈದ್ಗಾ ಮೈದಾನ, ಲಾಲ್ ಚೌಕ್ ನಲ್ಲಿ ರಾಷ್ಟ್ರಧ್ವಜ ಹಾರಿಸುವುದು, ರಾಮಮಂದಿರ ವಿಷಯದಲ್ಲಿ ಬಿಎಸ್ ವೈ ಏನು ಮಾಡಿದ್ದಾರೆ ಎಂಬುದು ಗೊತ್ತಿದೆ. ಮೋದಿಜಿಗಿಂತ ಹಿಂದುತ್ವ ಬೇಕಾ ಎಂದು ಪ್ರಶ್ನಿಸಿದರು.

ಹಿಂದುತ್ವ ಮತ್ತು ಕುಟುಂಬದ ಬಗ್ಗೆ ಈಶ್ವರಪ್ಪನವರು ಮಾತನಾಡಿದ್ದಕ್ಕೆ ಬೇಜಾರಾಗಿದೆ. ಆದಷ್ಟು ಬೇಗ ಒಳ್ಳೆಯ ದಿನ ಬರುತ್ತೆ. ದಾವಣಗೆರೆ, ಬೆಳಗಾವಿಯಲ್ಲಿ ಭಿನ್ನಮತ ಶಮನವಾಗಿದೆ. ಶಿವಮೊಗ್ಗದಲ್ಲಿ ಒಳ್ಳೆಯ ದಿನ‌ಬರಲಿದೆ ಎಙದರು.

ನಾವು ಜಿಲ್ಲೆಗೆ ಭಾರನೋ ಅಥವಾ ಜಿಲ್ಲೆಯ ಅಭಿವೃದ್ಧಿಗೆ ಟೊಂಕಕಟ್ಟಿದ್ದೇವೋ ಎಂಬುದರ ಬಗ್ಗೆ ಆಯಾ ಚುನಾವಣೆಗಳ ಫಲಿತಾಂಶ ಸಾಕ್ಷಿಯಾಗಿದೆ ಎಂದರು.

ಇದನ್ನೂ ಓದಿ-https://suddilive.in/archives/11606

Related Articles

Leave a Reply

Your email address will not be published. Required fields are marked *

Back to top button