ರಾಜಕೀಯ ಸುದ್ದಿಗಳು

ರಾಜ್ಯ ಬಿಜೆಪಿ ಉಪಧ್ಯಕ್ಷರಾಗಿ ಹರತಾಳು ಹಾಲಪ್ಪ, ಕಾರ್ಯದರ್ಶಿಯಾಗಿ ಡಿ.ಎಸ್.ಅರುಣ್ ನೇಮಕ

ಸುದ್ದಿಲೈವ್/ಶಿವಮೊಗ್ಗ

ಬಿಜೆಪಿಯ ರಾಜ್ಯ ಉಪಾಧ್ಯಕ್ಷ ಸ್ಥಾನಕ್ಕೆ 10 ಜನರನ್ನ ಆಯ್ಕೆ ಮಾಡಲಾಗಿದ್ದು, ಅದರಲ್ಲಿ ಅದರಲ್ಲಿ ಶಿವಮೊಗ್ಗದ ಮಾಜಿ ಸಚಿವ ಹರತಾಳು ಹಾಲಪ್ಪರಿಗೆ ಸ್ಥಾನ ದೊರೆತಿದೆ.

ಬಾಗಲಕೋಟೆಯ ಮುರುಗೇಶ್ ನಿರಾಣಿ, ಬೆಂಗಳೂರಿನ ಭೈರತಿ ಬಸವರಾಜ್, ಯಾದಗಿರಿಯ ರಾಜೂಗೌಡ ನಾಯಕ್, ಚಾಮರಾಜನಗರದ ಎನ್ ಮಹೇಶ್, ಬೆಳಗಾವಿಯ ಅನಿಲ್ ಬೆನಕೆ, ಶಿವಮೊಗ್ಗದಿಂದ ಹರತಾಳು‌ ಹಾಲಪ್ಪ,

ಉತ್ತರ ಕನ್ನಡದ ರೂಪಾಲಿ ಸಂತೋಷ ನಾಯಕ್, ಹಾವೇರಿಯ ಬಸವರಾಜ ಕೇಲಗಾರ, ಬೆಂಗಳೂರಿನ ಮಾಳವೀಕ ಅವಿನಾಶ್,ಮೈಸೂರಿನ ಎಂ ರಾಜೇಂದ್ರ ರಾಜ್ಯ ಭಾರತೀಯ ಜನತಾಪಕ್ಷದ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.

ಅದರಂತೆ ರಾಜ್ಯ ಬಿಜೆಪಿಯ ಕಾರ್ಯದರ್ಶಿಗಳಾಗಿ ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ನೇಮಕಗೊಂಡಿದ್ದಾರೆ. ಅದರಂತೆ, ರಾಜ್ಯ ಪ್ರಧಾನ ಕಾರ್ಯದರ್ಶಿ, ಖಜಾಂಚಿ, ಹಾಗೂ ಮೋರ್ಚಾಗಳ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ಇದನ್ನೂ ಓದಿ-https://suddilive.in/archives/5376

Related Articles

Leave a Reply

Your email address will not be published. Required fields are marked *

Back to top button