ರಾಜಕೀಯ ಸುದ್ದಿಗಳು

ನಾನು ರಾಮಭಕ್ತ ನನ್ನ ಬಂಧಿಸಿ-ಹಿಂಜಾವೇ ವಿನೂತನ ಪ್ರತಿಭಟನೆ

ಸುದ್ದಿಲೈವ್/ಭದ್ರಾವತಿ

ಹುಬ್ಬಳ್ಳಿಯಲ್ಲಿ 30 ವರ್ಷದ ಹಿಂದೆ ನಡೆದ ಕೋಮುಗಲಭೆ ಪ್ರಕರಣದಲ್ಲಿ ಉಲ್ಲೇಖಿತರಾಗಿದ್ದ ಕರಸೇವಕರನ್ನ ಬಂಧಿಸಿರುವುದನ್ನ ಖಂಡಿಸಿ ರಾಜ್ಯಾದ್ಯಂತ ಹಿಂದೂ ಜಾಗರಣ ವೇದಿಕೆ ವಿನೂತನ ಪ್ರತಿಭಟನೆಗೆ ಮುಂದಾಗಿದೆ.

‘ನಾನು ರಾಮಭಕ್ತ ನನ್ನನ್ನ ಬಂಧಿಸಿ’ ಎಂಬ ಶೀರ್ಷಿಕೆ ಅಡಿಯಲ್ಲಿ ರಾಜ್ಯದ ಎಲ್ಲಾ ಡಿವೈಎಸ್ಪಿ ಕಚೇರಿಯ ಮುಂದೆ ಹಿಂದೂ ಜಾಗರಣ ವೇದಿಕೆ ಮುಂದಾಗಿದೆ. ಅದರಂತೆ ಇಂದು ಶಿವಮೊಗ್ಗ, ಭದ್ರಾವತಿ, ಶಿಕಾರಿಪುರ ಮತ್ತು ಸಾಗರದಲ್ಲಿ ಪ್ರತಿಭಟನೆ ನಡೆದಿದೆ.

ಭದ್ರಾವತಿಯ ಹಿಂದೂ ಜಾಗರಣಾ ವೇದಿಕೆಯ ಸಂಚಾಲಕ ದೇವರಾಜ್ ಅರಳಿಹಳ್ಳಿ ನೇತೃತ್ವದಲ್ಲಿ ಡಿವೈಎಸ್ಪಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದೆ. ಈ ಸಂದರ್ಭದಲ್ಲಿ ಮಾತನಾಡಿದ ದೇವರಾಜ್ ಅರಳಹಳ್ಳಿ 30 ವರ್ಷದ ಹಿಂದೆ ಕರಸೇವಕರ ಕೇಸ್ ನ್‌ ರೀ ಒಪನ್ ಮಾಡಲಾಗಿದೆ.

30 ವರ್ಷದ ಹಿಂದೆ 13 ಜನ ಕರಸೇವಕರ ಹೆಸರನ್ನ ಪಟ್ಟಿಯಲ್ಲಿ ಸೇರಿಸಲಾಗಿತ್ತು. ಇದರಲ್ಲಿ 5 ಜನರ ವಿರುದ್ಧ ಪ್ರಕರಣ ಖುಲಾಸೆಯಾಗಿದೆ.  5 ಜನರು ಮರಣ ಹೊಂದಿದ್ದಾರೆ. ಉಳಿದ ಇಬ್ಬರುಗಳಾದ ಶ್ರೀಕಾಂತ್ ಪೂಜಾರಿ, ರಾಜು ಧರ್ಮದಾಸ್ ಇವರಿಗೆ 75 ವರ್ಷಗಳು ಅಗಿವೆ. ಇವರನ್ನ‌ ಬಂಧಿಸಲಾಗಿದೆ.‌ ಇದು ರಾಮ ವಿರೋಧಿ ಹಾಗೂ ಹಿಂದೂ ವಿರೋಧಿ ಸರ್ಕಾರ ಎಂದು ದೂರಿದರು.

ಮನೆ ಮನೆಯಯಲ್ಲೂ ರಾಮ ಭಕ್ತರಿದ್ದಾರೆ. ಇವರನ್ನೆಲ್ಲಾ ಬಂಧಿಸಬೇಕೆಂಬ ಆಲೋಚನೆ ಸರ್ಕಾರದಲ್ಲಿದ್ದರೆ ಬಂಧಿಸಿ ಅದಕ್ಕಾಗಿ ಹೊಸ ಬಂಧಿಖಾನೆ ನಿರ್ಮಿಸಿ ಅದನ್ನೂ ರಾಮಮಯ ಮಾಡುವ ಶಕ್ತಿ ಈ ರಾಮಭಕ್ತರಿಗೆ ಇದೆ ಎಂದು ಗುಡುಗಿದರು.‌

ರಾಮ ಭಕ್ತರನ್ನ ಬೆದರಿಸುವ ಕೆಲಸ ಸಿದ್ದರಾಮಯ್ಯ ಸರ್ಕಾರ ಮಾಡ್ತಾ ಇದೆ. ಪೊಲೀಸರ ಮೂಲಕ ರಾಮಭಕ್ತರನ್ನ ಹೆದರಿಸಲಾಗುತ್ತಿದೆ. ಪಕ್ಷದ ಮುಖಂಡ ಹರಿಪ್ರಸಾದ್ ಕರ್ನಾಟಕ ಗೋದ್ರಾ ಆಗುವ ಶಂಕೆಯನ್ನ‌ ಹೊರಹಾಕಿದ್ದಾರೆ. ಗೋದ್ರಾ ಮಾಡುವ ಹುನ್ನಾರ ಯಾರದ್ದು? ಎಂದು ಪ್ರಶ್ನಿಸಿದರು.

ಅಲ್ಪಸಂಖ್ಯಾತರ ತುಷ್ಟಿ ಕರಣ ಮಾಡುತ್ತಿರುವ ಕಾಂಗ್ರೆಸ್.
ರಾಜ್ಯದಲ್ಲಿ ವಿನಾಕಾರಣ ಇಂದು ಕಾರ್ಯಕರ್ತರ ಮೇಲೆ ಕೇಸುಗಳನ್ನು ದಾಖಲಿಸುತ್ತದೆ. ಇದರಿಂದ ಹೆದರಿ ಹಿಂದೆ ಸರಿಯುವವರು ನಾವಲ್ಲ. ದೇಶಕ್ಕಾಗಿ ಧರ್ಮಕ್ಕಾಗಿ ನೇಣುಗಂಬವೆರಲು ಸಹ ಸಿದ್ದರಿದ್ದೇವೆ. ಹಿಂದುಗಳನ್ನು ಕೆಣಕಬೇಡಿ ರಾಮಭಕ್ತರನ್ನು ಕೆಣಕಬೇಡಿ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.

ಹಿಂದು ಜಾಗರಣ ವೇದಿಕೆಯ ಪ್ರಮುಖರಾದ ಶಿವಕುಮಾರ್,ಸುಧೀಂದ್ರ. ವಿನಯ್, ರಾಘಣ್ಣ. ಸದ್ಗುಣ, ಪ್ರದೀಪ್, ಮೇಘರಾಜ್. ಮನು, ಪವನ, ಗವಿಶ್, ರಾಕೇಶ್, ಮಣಿಕಂಠ, ಕೃಷ್ಣ, ಮತ್ತಿತರ ಕಾರ್ಯಕರ್ತರು ಉಪಸ್ಥಿತರಿದ್ದರು.

ಇದನ್ನೂ ಓದಿ-https://suddilive.in/archives/6117

Related Articles

Leave a Reply

Your email address will not be published. Required fields are marked *

Back to top button

Notice: ob_end_flush(): Failed to send buffer of zlib output compression (0) in /home/twzwscfi/suddilive.in/wp-includes/functions.php on line 5373