ರಾಜಕೀಯ ಸುದ್ದಿಗಳು

ಎಂಪಿ ಸ್ಥಾನಕ್ಕೆ ಸ್ಪರ್ಧೆ ಗ್ಯಾರೆಂಟಿ-ಸುಂದರೇಶ್

ಸುದ್ದಿಲೈವ್/ಶಿವಮೊಗ್ಗ

ಕೇಂದ್ರದ ವಿತ್ತ ಸಚಿವೆ ನಿರ್ಮಲ ಸೀತಾರಾಮ್ 6 ನೇ ಬಜೆಟ್ ಮಂಡಿಸಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಅವರು ಮಂಡಿರುವ ಮಧ್ಯಾಂತರ‌ ಬಜೆಟ್‌ ವೇಸ್ಟ್ ಬಜೆಟ್ ಎಂದು ಕಾಂಗ್ರೆಸ್ ಅಧ್ಯಕ್ಷ‌ ಸುಂದರೇಶ್ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಹಿಂದೆ 5 ಕೋಟಿ ವಸತಿ ಯೋಜನೆ ಮಂಡಿಸಲಾಗಿತ್ತು, ಮಹಿಳೆಯರಿಗೆ, ಹೈವೆ, ರೈಲ್ವೆ ಯೋಜನೆಗಳಿಗೆ ಒತ್ತು ನೀಡಲಾಗಿತ್ತು. ಅವೆಲ್ಲಾ ಏನಾದವು ಇದುವರೆಗೂ‌ ಅವುಗಳು ಅನುಷ್ಠಾನವಾಗಿಲ್ಲ. ರಕ್ಷಣ‌ ಖಾತೆಯಲ್ಲಿ 6½ ಲಕ್ಷ ಕೋಟಿ ಹಣ ತೆಗೆದಿಡಲಾಗಿದೆ ಆದರೆ ಯೋಧರಿಗೆ ಯಾವ ಸವಲತ್ತು ನೀಡಲಾಗುತ್ತಿದೆ.‌ ಯಾವ ಉಪಕರಣಗಳು ಖರೀದಿ ಮಾಡಾಗುತ್ತಿದೆ ಎಂದು ಗೊತ್ತಾಗೊಲ್ಲ. ಸತ್ತ ಯೋಧರಿಗೆ ಹೂವಿನ ಹಾರ ಹಾಕುವುದನ್ನ‌ಬಿಟ್ಟು ಯಾವುದೇ ಖರೀದಿ ಬಗ್ಗೆ ಗೊತ್ತೇ ಆಗುತ್ತಿಲ್ಲ ಎಂದು ದೂರಿದರು.

11 ಲಕ್ಷ ಕೋಟಿ ಬಡ್ಡಿ ಕಟ್ಟಲಾಗುತ್ತಿದೆ

ಯಾವ ಯೋಜನೆಗಳಿಗೆ ಒಂದು ರೂ.ತೆಗೆದಿಟ್ಟಿಲ್ಲ. ಹಳೆಯ ಯೋಜನೆಗಳು ಇನ್ಬೂ ಅನುಷ್ಠಾನವಾಗಿಲ್ಲ. ನಿರುದ್ಯೋಗಕ್ಕೆ ಸ್ಕೀಮ್ ಗಳಿಲ್ಲ ಕಾರ್ಮಿಕರು ಬೀದಿಗೆ ಬಂದಿದ್ದಾರೆ. ಇದು ಎಲೆಕ್ಷನ್ ಬಜೆಟ್ ಅಗಿದೆ. ಅಂಬಾನಿ ಅದಾನಿಗಾಗಿ ಪ್ರವಾಸೋದ್ಯಮಕ್ಕೆ ಒತ್ತುಕೊಡಲಾಗಿದೆ ಎಂದು ದೂರಿದರು.

ವಿಮಾನ ನಿಲ್ದಾಣ ಹೆಚ್ಚು ನಿರ್ಮಿಸಲಾಗುತ್ತಿದೆ ಎಂದು ಹೇಳಿಕೊಳ್ಳಲಾಗುತ್ತಿದೆ. ಒಂದೊಂದೇ ವಿಮಾನ ನಿಲ್ದಾಣಗಳು ಬಾಗಿಲು ಹಾಕಲಾಗುತ್ತಿದೆ. ಹೆಚ್ಚಿನ‌ಸವಲತ್ತುಗಳು ಕಲ್ಪಿಸುವುದಿಲ್ಕ.‌ 47 ಲಕ್ಷ‌ಕೋಟಿಯ ಬಜೆಟ್ ಮಂಡಿಸಲಾಗಿದೆ. ಆದರೆ 11 ಲಕ್ಷ ಕೋಟಿ ರೂ ವರ್ಷಕ್ಕೆ ಮಾಡಿರುವ ಸಾಲದ ಬಡ್ಡಿ ಕಟ್ಟಲಾಗುತ್ತಿದೆ. ಆರ್ ಬಿ ಐಗೆ ಎತ್ತಿಟ್ಟ ಮೀಸಲು ಫಂಡ್ ನಲ್ಲಿ 3 ಲಕ್ಷ ಕೋಟಿ ಹಣ ಬಳಸಿಕೊಳ್ಳಲಾಗುತ್ತಿದೆ. ಹಾಗಾಗಿ ಆರ್ ಬಿ‌ಐ ಗವರ್ನರ್ ಗಳು ಹೆಚ್ಚು ಕಾಲ ಕೆಲಸ ಮಾಡಲು ಆಗದೆ ರಾಜೀನಾಮೆ ನೀಡುತ್ತಿದ್ದಾರೆ ಎಂದು ದೂರಿದರು.

ಭದ್ರ ಎಡದಂಡೆ ನಾಲೆಯ ಕಥೆ ಏನಾಗಿದೆ?

ಭದ್ರಾ ಬಲದಂಡೆ ಯೋಜನೆಗೆ 5300 ಕೋಟಿ ಹಣ ತೆಗೆದಿಡಲಾಗಿತ್ತು. ಆದರೆ ಒಂದು ರೂ. ಹಣ ತೆಗೆದಿಡಲಾಗಲಿಲ್ಲ. ಈ ಬಜೆಟ್ ನಲ್ಲಿ ಯಾವುದೂ ಪ್ರಸ್ತಾವನೆ ಇಲ್ಲ. 1.9% ಗಾತ್ರದ ಬಡ್ಡಿ ಕಟ್ಟಲಾಗುತ್ತಿದೆ. ಬಜೆಟ್ ನಲ್ಲಿ ಬೆಲೆ ಏರಿಕೆ ಬಗ್ಗೆ ಕೇಂದ್ರ ಸರ್ಕಾರ ತುಟಿ ಬಿಚ್ಚೊಲ್ಲ. ಚುನಾವಣೆಯನ್ನ ಅಯೋಧ್ಯ ಮತ್ತು ಇವಿಎಂ ಮೇಲೆ ಬಿಜೆಪಿ ಎದುರಿಸುತ್ತಿದೆ ಎಂದು ದೂರಿದರು.

ಅಯೋದ್ಯದಲ್ಲಿ ರಾಮ ಮಂದಿರ ಕಟ್ಟಿ ಕಾರ್ಪೋರೇಟ್ ಕಂಪನಿಗಳಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ. ಯಾವುದೇ ಕೈಗಾರಿಕೆ ಬಗ್ಗೆ ಒತ್ತುಕೊಡಲಿಲ್ಲ. ಡಿಕೆಸು ಹೇಳಿಕೆಗೆ ಮಾಧ್ಯಮದಲ್ಲಿ ತಿರುಚಲಾಗಿದೆ ನಾರ್ಥ್ ಈಸ್ಟ್ ಗೆ ಹಣ ಸೌಕರ್ಯ ಕೊಡ್ತೀರ. ಕರ್ನಾಟಕ ರಾಜ್ಯಕ್ಕೆ ಕೊಡೋದಿಲ್ಲ.‌ ರಾಜ್ಯದಲ್ಲಿ ಬರ ಸಮೀಕ್ಷೆ ಆಗಿ ತಿಂಗಳುಗಳೆ ಕಳೆದಿವೆ ಹಣ ಬಿಡುಗಡೆ ಮಾಡಿಲ್ಕ. ಹಾಗಾಗಿ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಹೇಳಿದ್ದಾರೆ. ಇದಕ್ಕೆ ಬೇರೆ ಅರ್ಥ ಕಲ್ಪಿಸಬಾರದು ಎಂದರು.

‘ಲೋಕ’ ಸಮರಕ್ಕೆ ಸಿದ್ದ

ನಿಗಮ ಮಂಡಳಿ ಸ್ಥಾನಕ್ಕೆ ನಿಮ್ಮ ಹೆಸರು ಕೇಳಿ ಬರುತ್ತಿದೆ. ಹಾಗಾದರೆ ನಿಗಮ‌ಮಂಡಳಿ ಸ್ಥಾನ ಸಿಕ್ಕರೆ ಎಂಪಿ ಸ್ಥಾನಕ್ಕೆ ಸ್ಪರ್ಧಿಸುತ್ತೀರಾ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪಕ್ಷದ ಜಿಲ್ಲಾಧ್ಯಕ್ಷ ಸುಂದರೇಶ್ ಲೋಕಸಭಾ ಚುನಾವಣೆಗೆ ತಮ್ಮ ಹೆಸರನ್ನ ಕೆಪಿಸಿಸಿ ಅಧ್ಯಕ್ಷರಿಂದ ಕಾಂಗ್ರೆಸ್ ಹೈಕಮಾಂಡ್ ಗೆ ಹೋಗಿದೆ.ಪಕ್ಷ ಸೂಚಿಸಿದರೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದು ಗ್ಯಾರೆಂಟಿ ಎಂದರು.

ಸಂಸದ ರಾಘವೇಂದ್ರರ ಅಭಿವೃದ್ಧಿ ಕಾಮಗಾರಿಯನ್ನ ನೋಡಿ ಹೊಗಳಿರುವ ಶಾಮನೂರು ವಿರುದ್ಧ ಕೆಪಿಸಿಸಿ ಅಧ್ಯಕ್ಷರಿಗೆ ಜಿಲ್ಲಾ ಕಾಂಗ್ರೆಸ್ ನಿಂದ ದೂರು ನೀಡಲಾಗಿದೆ. ಶಾಮನೂರು ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಕಾಂಗ್ರೆಸ್ ಗೆ ನೇರವಾಗಿ ಸಾಧ್ಯವಿಲ್ಲ ಎಂದರು.

Related Articles

Leave a Reply

Your email address will not be published. Required fields are marked *

Back to top button