ರಾಜಕೀಯ ಸುದ್ದಿಗಳು

25 ಸಾವಿರ ಜನ ಕಾರ್ಯಕರ್ತರೊಂದಿಗೆ ಏ.12 ರಂದು ನಾಮಪತ್ರ ಸಲ್ಲಿಸುವುದಾಗಿ ಈಶ್ವರಪ್ಪ ಘೋಷಣೆ

ಸುದ್ದಿಲೈವ್/ಶಿವಮೊಗ್ಗ

ರಾಜ್ಯದಲ್ಲಿ ಬಿಜೆಪಿ ಹಾಳಾಗುತ್ತಿರುವುದರಿಂದ ನಾನು ಸ್ಪರ್ಧಿಸುತ್ತಿರುವುದಾಗಿ ಮಾಜಿ ಡಿಸಿಎಂ ಈಶ್ವರಪ್ಪ ತಿಳಿಸಿದರು.

ನಗರದ ಶುಭಮಂಗಳದಲ್ಲಿ ರಾಷ್ಟ್ರಭಕ್ತರ ಬಳಗದ ವತಿಯಿಂದ ನಗರ ಮತ್ತು ಗ್ರಾಮಾಂತರ ಮಟ್ಟದ ಬೂತ್ ಕಾರ್ಯಕರ್ತರ ಸಮಾವೇಶವನ್ನ ಉದ್ಘಾಟಿಸಿ ಮಾತನಾಡಿದರು.

ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನ ಸೇರಿಸಲು ನಡೆದ ಕಾರ್ಯಕ್ರಮ ಇದಾಗಿದೆ. ಕಾರ್ಯಕ್ರಮ ಮುಗಿಸಿ ನೀವು ಮನೆಗೆ ಹೋದ ಕೂಡಲೆ ನಿಮ್ಮ ಮೊಬೈಲ್ ಗೆ ಕರೆ ಬರಲಿದೆ. ಹಾಗಾದರೆ ನೀವು ಮೋದಿ ಕಟ್ಟಾಳು ಅಲ್ವಾ ಎಂದು ಭಾವನಾತ್ಮಕವಾಗಿ ತಿಳಿಸಿದರು.

ಕಾಂಗ್ರೆಸ್ ಕಾರ್ಯಕರ್ತರೂ ನಮ್ಮೊಂದಿಗೆ ಓಡಾಡುತ್ತಿದ್ದರು. ಅವರಿಗೂ ಕರೆ ಬಂದಿದೆ. ಇದು ಆಶ್ಚರ್ಯವೆನಿಸುತ್ತದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕೆಂದು 108 ಸ್ಥಾನ ಗಳಿಸಲಾಯಿತು ಬೊಮ್ಮಾಯಿ, ಸದಾನಂದ ಗೌಡರು, ಜಗದೀಶ್ ಶೆಟ್ಟರ್ ಸಿಎಂ ಆದರು. ಆದರೆ 108 ನಿಂದ 66 ಸ್ಥಾನಕ್ಕೆ ಕುಸಿದಿದ್ದು ಕಾರ್ಯಕರ್ತರಿಂದ ಅಲ್ಲ ಎಂದು ರಾಜ್ಯ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ನೂರಾರು ಕಾರ್ಯಕರ್ತರು ಇವತ್ತೂ ಕಣ್ಣೀರು ಹಾಕ್ತಾರೆ. ಶಿಸ್ತಲ್ಲಿ ಬೆಳೆದ ನನಗೆ ಪಕ್ಷದಿಂದ ಸ್ಪರ್ಧಿಸದಂತೆ ಸೂಚಿಸಲಾಯಿತು. ಮೂರೇ ನಿಮಿಷದಲ್ಲಿ ಕೇಂದ್ರಕ್ಕೆ ಪತ್ರ ಬರೆದು ಚುನಾವಣೆ ರಾಜಕೀಯದಿಂದ ನಿವೃತ್ತಿ ಘೋಷಿಸಿದರು.

ವಿಜೇಂದ್ರನಿಗೂ ಸಚಿವ ಸ್ಥಾನದ ಬೇಡಿಕೆ ಇಡಲಾಗಿತ್ತು

ನನಗೆ ಕ್ಲೀನ್ ಚೀಟ್ ನೀಡಿದ ಮೇಲೆ ಸಚಿವ ಸ್ಥಾನ ನೀಡಲಾಗುತ್ತದೆ ಎಂದು ಭರವಸೆ ನೀಡಾಯಿತು. ಆದರೆ ಬೇರೆ ಸರ್ಕಾರದ ವರೆಗೂ ಸಚಿವ ಸ್ಥಾನ ಸಿಗಲಿಲ್ಲ. ಈಶ್ರಪ್ಪನವರಿಗೆ ಸಚಿವ ಸ್ಥಾನ‌ಕೊಡಬೇಕಾದರೆ ನನ್ನ ಮಗ ವಿಜೇಂದ್ರನಿಗೂ ಸಚಿವ ಸ್ಥಾನ ಕೊಡಬೇಕೆಂದು ಬೆಸರಿಸಿದ್ದರು ಎಂದು ಬಿಎಸ್ ವೈ ಹೆಸರು ಹೇಳದೆ ದಾಳಿ ನಡೆಸಿದರು.

ಲೋಕಸಭಾ ಚುನಾವಣೆಗೆ ಮಗನಿಗೆ ಟಿಕೇ್ ಎಂದು ಹೇಳಿ ಕೈಕೊಡಲಾಯಿತು. ಟಿಕೇಟ್ ಕೊಡದೆ ಇರಲು ಕಾರಣ ಹಿಂದುಳಿದ ನಾಯಕರನ್ನ ಬೆಳೆಸದಿರುವ ಹುನ್ನಾರ ನಡೆಸಿ ನನ್ನ‌ ಮಗನಿಗೆ ಟಿಕೆಟ್ ನಿರಾಕರಿಸಲಾಗಿದೆ ಎಂದು ಸತ್ಯಾಂಶವನ್ನ ಹೊರಗಿಟ್ಟರು.

ಪ್ರತಾಪ್ ಸಿಂಹ, ಅನಂತ ಕುಮಾರ್ ಹೆಗಡೆ, ಮೊದಲಾದರಿಗೆ ಟಿಕೇಟ್ ನಿರಾಕರಿಸಲಾಗಿದೆ. ನಾನು ಕುರುಬ ನಾಯಕ ಎಂದು ನೀವು ಬಂದಿಲ್ಲ. ನಾನು ಹಿಂದೂ ನಾಯಕ ಎಂದು ನೀವು ಸಭೆಗೆ ಬಂದಿದ್ದೀರಿ ಎಂದು ಹೇಳಿದರು.

ಹೊಂದಾಣಿಕೆ ರಾಜಕಾರಣ

ಹೊಂದಾಣಿಕೆ ರಾಜಕಾರಣದ ಹಿನ್ನಲೆಯಲ್ಲಿ ಸಾಧು ಲಿಂಗಾಯಿತನನ್ನ ಸೋಲಿಸಲಾಯಿತು. ಹಿಂದುತ್ವ ದ ಬಗ್ಗೆ ಮಾತನಾಡದೆ, ಜಾತಿ ದುರ್ಬಳಕೆ ಮಾಡಿಕೊಂಡು ಮಕ್ಕಳಿಗೆ ಪಕ್ಷದಲ್ಲಿ ಸ್ಥಾನಮಾನ ನೀಡಲಾಗುತ್ತಿದೆ. ಹಾಗಾಗಿ ನಾನು ಪಕ್ಷವನ್ನ ಒಬ್ಬರ ಕಪಿಮುಷ್ಠಿಯಿಂದ ಬಿಡಿಸಬೇಕಿದೆ ಎಂದು ಕರೆ ನೀಡಿದರು.

ಜಿಲ್ಲೆ ಪ್ರವಾಸ ಮಾಡಿರುವೆ. ರಾಜ್ಯದ ಅಧ್ಯಕ್ಷ ನಾದಾಗ ಬೈಂದೂರಿಗೆ ಹೋಗಿದ್ದು ನಂತರ ಹೋಗಿರಲಿಲ್ಲ. ಇಡೀ ಬೈಂದೂರಿನಲ್ಲಿ ರಾಘವೇಂದ್ರನ ಬಗ್ಗೆ ಸಿಟ್ಟಿದೆ. ಹಿಂದುತ್ವಕ್ಕೆ ದ್ರೋಹ ಮಾಡಿದ್ದಾರೆ ಎಂದು ಕಾರ್ಯಕರ್ತರು ತಿಳಿಸಿದ್ದಾರೆ. ಹೋದಕಡೆಯೆಲ್ಲಾ ವಿರೋಧ ವ್ಯಕ್ತವಾಗುತ್ತಿದೆ. ನನ್ನನ್ನ ಗೆಲ್ಲುಸುವ ಮಾತನಾಡುತ್ತಿದ್ದಾರೆ ಎಂದರು.

ಗೆದ್ದು ನಿಮ್ಮ ಋಣ ತೀರಿಸುವೆ. ಯಾವುದೇ ಕಾರಣಕ್ಕೆ ಹೆದರ ಬೇಡಿ, ಈಗ ತಾನೇ ನನ್ನ ಮಗನಿಗೆ ಮೊಬೈಲ್ ಗೆ ಕರೆ ಬಂದಿದೆ. ವಿಷಯನ್ನ ಆಮೇಲೆ ತಿಳಿಸುವುದಾಗಿ ವೇದಿಕೆ ಮೇಲೆ ಮಾತನಾಡಿದ ಈಶ್ವರಪ್ಪ, ಯಾರ ಕರೆ ಬಙದರೂ, ಮನೆಗೆ ಬಂದರು ಪಕ್ಷೇತರವಾಗಿ ನಾನು ಲೋಕಸಭಾ ಚುನಾವಣೆ ಸ್ಪರ್ಧಿಸುವುದಾಗಿ ಘೋಷಿಸಿದರು.

ತಿಣಕಿ ತಿಣಕಿ ವಿಧಾನ ಸಭೆ ಗೆದ್ದಿದ್ದಾರೆ

ಅಪ್ಪಮಕ್ಕಳು ವಿಚಿತ್ರ ರಾಜಕಾರಣ ಮಾಡುವರು ಎಂದು ಕಾಂಗ್ರೆಸ್ ಕಾರ್ಯಕರ್ತರು ಹೇಳ್ತಿದ್ದಾರೆ. ನನಗೆ ಓಟ್ ಹಾಕ್ತೀರ ಎಂದಾಗ ಅವರ ಮಗೆ ತಿಣಕಿ‌ತಿಣಕಿ ವಿಧಾನ ಸಭೆ ಚುನಾವಣೆ ಗೆದ್ದಿದ್ದಾರೆ. ಈ ಬಾರಿ ನಿಮ್ಮನ್ನ ಸೋಲಿಸುವುದಾಗಿ ಹೇಳುತ್ತಿದ್ದಾರೆ ಎಂದು ಹೇಳಿದರು.

ಶಿಕಾರಿಪುರದಲ್ಲಿ ನಡೆದ ಬೈಕ್ ರ್ಯಾಲಿಯಲ್ಲಿ ಗಿಡ್ಡಪ್ಪ ದೇವಸ್ಥಾನದಲ್ಲಿ ಬೆಂಬಲಿಗರು ಬೆಂಬಲ ಸೂಚಿಸಿ ಅಪ್ಪಮಕ್ಕಳ ಮೋಸದಿಂದ ಬೇಸತ್ತಿರುವುದು ಕಂಡು ಬರುತ್ತಿದೆ. ಹೋದಕಡೆಯೆಲ್ಲಾ ನಿಮ್ಮನ್ನ ಗೆಲ್ಲಿಸುವುದಾಗಿ ಹೇಳ್ತಿದ್ದಾರೆ, ಬ್ರಾಹ್ಮಣ ಈಡಿಗ, ಲಂಬಾಣಿ ಮೊದಲಾದವರು ಈಶ್ವರಪ್ಪನವರು ನನಗೆ ಗೆಲ್ಲಿಸುವುದಾಗಿ ಹೇಳ್ತಿದ್ದಾರೆ.

ಯಾರಿಗಾದರೂ ಹಣಕೊಟ್ಟು ಸಭೆಗೆ ಕರೆದಿಲ್ಲ. ಬೂತ್ ಗಳಲ್ಲಿ ನೀವೇ ಬೂತ್ ನಾಯಕರು. ಬೂತ್ ನಲ್ಲಿ ಮಹಿಳೆಯರೊಂದಿಗೆ ಮನೆಗೆ ಹೋಗಿ ಕಾಂಗ್ರೆಸ್ ಸಂಸ್ಕೃತಿ ಬಿಜೆಪಿಗೆ ಬಂದಿದೆ. ಹಾಗಾಗಿ ಈಶ್ವರಪ್ಪನವರನ್ನ‌ ಗೆಲ್ಲಿಸಿ ಎಂದರು.

ನಾನು ಸೋಲುವುದಾದರೆ ನಮ್ಮ ಕಾರ್ಯಕರಿಗೆ ಕರೆಯಾಕೆ ಮಾಡ್ತೀರ

ನಮ್ಮ ಕಾರ್ಯಕರ್ತರನ್ನ ಕರೆ ಮಾಡಿ ಈಶ್ವರಪ್ಪನವರು ಸೋಲ್ತಾರೆ ಎಂದು ಹೇಳಿ ಕರೆಯಲಾಗುತ್ತಿದೆ. ಹಾಗಾದರೆ ನಮ್ಮ‌ಕಾರ್ಯಕರ್ತರನ್ನ‌ ಬೆದರಿಸುವ ಕೆಲಸ ಯಾಕೆ ಮಾಡ್ತೀರ ಎಂದು ಪ್ರಶ್ನಿಸಿದ ಈಶ್ವರಪ್ಪ, ಗೀತಾ ಶಿವರಾಜ್ ಕುಮಾರ್ ರನ್ನ ಡಮ್ಮಿ ಕ್ಯಾಂಡಿಡೇಟ್ ಎಂದು ಸಚಿವ ಮಧು ಬಂಗಾರಪ್ಪ ಸುಟ್ಟಾಗಿ ಈಶ್ವರಪ್ಪನವರಿಗೆ ಗಂಡಸುತನ ಇದ್ದರೆಬಿಜೆಪಿ ಟಿಕೇಟ್ ತರಬೇಕಿತ್ತು ಎಂದು ಕೇಳಿದ್ದಾರೆ. ನೀವು ಮತ್ತು ಶಿಕಾರಿಪುರದವರು ಹೊಂದಾಣಿಕೆ ಮಾಡಿಕೊಂಡರೆ ನಾನು ಟಿಕೇಟ್ ಹೇಗೆ ತರಲಿ ಎಂದು ಪ್ರಶ್ನಿಸಿದರು.

ಏ.12 ರಂದು ನಾಮಪತ್ರ ಸಲ್ಲಿಕೆ

ಚುನಾವಣೆಗೆ ಬಹಳ ದಿನ ಇದೆ ನನ್ನ ಗುರುತು ತೀರ್ಮಾನವಾಗಿಲ್ಲ. ಮತದಾನದ ದಿನಾಂಕ ನಿಗದಿಯಾಗಿದೆ. ಏ.12 ರಿಂದ‌ ನಾಮಪತ್ರ ಸಲ್ಲಿಕೆ ಆರಂಭವಾಗುತ್ತದೆ. 25 ಸಾವಿರ ಕಾರ್ಯಕರ್ತರೊಂದಿಗೆ ಅದೇ ದಿನಾಂಕದಂದು ನಾಮಪತ್ರ ಸಲ್ಲಿಸುತ್ತಿರುವುದಾಗಿ ಈಶ್ವರಪ್ಪ ಘೋಷಿಸಿದ್ದಾರೆ.

ಈ ರೀತಿ ಘೋಷಿಸಿದಾಗ ಯಡಿಯೂರಪ್ಪನವರ‌ ಎದೆಯಲ್ಲಿ ನಡುಕ ಆರಂಭವಾಗುತ್ತದೆ. ನನ್ನ‌ಜೊತೆ ಬರುವರು ಸ್ವಾಭಿ ಮಾನಿಗಳು, ಅವರ ಜೊತೆ ಹೋಗುವವರು ಕೂಲಿಕಾರ್ಮಿಕರು. ಏ. 12 ರಂದು ಶಕ್ತಿ ಪ್ರದರ್ಶನಕ್ಕೆ ಇಳಿಯೋಣ ಎಂದು ಕೂಗಿದರು.

ಇದನ್ನೂ ಓದಿ-https://suddilive.in/archives/11511

Related Articles

Leave a Reply

Your email address will not be published. Required fields are marked *

Back to top button