ರಾಜಕೀಯ ಸುದ್ದಿಗಳು

ಮೋದಿ ಸರ್ಕಾರದಲ್ಲಿ 25 ಕೋಟಿಗೂ ಹೆಚ್ಚು ಜನ‌ಬಡತನ ರೇಖೆಯಿಂದ ಹೊರಬಂದಿದ್ದಾರೆ-ಜೋಶಿ

ಸುದ್ದಿಲೈವ್/ಶಿವಮೊಗ್ಗ

ನಾಳೆ ಮತ್ತೆ ದೆಹಲಿಗೆ ಹೋಗುತ್ತಿದ್ದೇವೆ. ಬಿಎಸ್ ಯಿಊರಪ್ಪನವರ ಮಾರ್ಗದರ್ಶನದಲ್ಲಿ ಬಿವೈ ರಾಘವೇಂದ್ರ ಸಾಗುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದರು.

ಅವರು ನಗರದ ಗಾಯಿತ್ರಿ ಮಾಂಗಲ್ಯ ಮಂದಿರದಲ್ಲಿ ವಿಪ್ರ ಸ್ನೇಹ‌ಬಳಗದ ವತಿಯಿಂದ ಬಿಎದ್ ಯಡಿಯೂರಪ್ಪನವರಿಗೆ ಮತ್ತು ಪುತ್ರನಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು.‌

ಪುನರ್ ಜನ್ಮ ಪಡೆದು ಎದ್ದುಬಂದ ಯಡಿಯೂರಪ್ಪ ಬಿಜೆಪಿಯನ್ನ ರಾಜ್ಯದಲ್ಲಿ ಉನ್ನತಸ್ಥಾನಕ್ಕೆ ಕರೆದೊಯ್ದಿದ್ದಾರೆ. ಬಿಎಸ್ ವೈ ಶೀಘ್ರ ಕೋಪಿ ಆದರೆ ದ್ವೇಷಿ ಅಲ್ಲ.‌ ರಾಜ್ಯದ ಅಭಿವೃದ್ಧಿ ವಿಷಯದಲ್ಲಿ ಅವರು ಕೋಪ ಮಾಡಿಕೊಳ್ಳುತ್ತಿದ್ದರು. ವಿಧಾನ ಸಭೆ ಚುನಾವಣೆಯಲ್ಲಿ ಸೋತ ಬಿಜೆಪಿಗೆ ಒಂದು ವರ್ಷದಲ್ಲಿ ಬರುವ‌ ಲೋಕಸಭಾ‌ ಚುನಾವಣೆಯಲ್ಲಿ ಬಿಜೆಪಿಯನ್ನ ಮತ್ತೆ ಗೆಲ್ಲಿಸುವೆ ಎಂದು 80 ವರ್ಷದ ವಯಸ್ಸಿನ ಯಡಿಯೂರಪ್ಪ ಶಪಥ ಮಾಡಿದ್ರು ಎಂದರು.

ಒಂದು ಎಲಸವನ್ನ ಮಾಡಬೇಕು ಎಂಬುದನ್ನ ನಿರ್ಧರಿಸಿದರೆ ಬಿಎಸ್ ವೈ ಹಿಂದೆ ಹೆಜ್ಜೆ ಇಡುವ ಪ್ರಶ್ನೆಯೇ ಇಲ್ಲ. ಈ ಹಿಂದೆಯೂ ಶಿವಮೊಗ್ಗಕ್ಕೆ ಬಂದಿರುವೆ. ಆಗಿನ ಶಿವಮೊಗ್ಗಕ್ಕೂ ಈಗಿನ ಯಡಿಯೂರಪ್ಪನವರ ಶಿವಮೊಗ್ಗಕ್ಕೂ ಅಜಗಜಾಂತರ ವ್ಯತ್ಯಾಸವಿದೆ ಎಂದರು.

ಯಡಿಯೂರಪ್ಪ ಗುಡುಗಿದರೆ ವಿಧಾನ ಸೌಧ ನಡುಗುವುದು ಎಂಬ ಘೋಷಣೆಯನ್ನ ನಾವು ಮಾಡ್ತಾ ಇದ್ವಿ. ರಾಘವೇಂದ್ರ ಸಹ ಒಳ್ಳೆ ಕೆಲಸ ಮಾಡಿದ್ದಾರೆ. ಆದರೆ ಕೆಲಸ ಮಾಡಿದ್ದರೆ ಅವರನ್ನ ಬಿಎಸ್ ವೈ ಮನೆಗೆ ಬಿಟ್ಟುಕೊ ಬೆಕಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿದರು.

ದೇಶದ ಟಾಪ್ 10 ಎಂಪಿಗಳಲ್ಲಿ ರಾಘವೇಂದ್ರ ಇದ್ದಾರೆ. ರೈಲ್ವೆಯ ಬಹುತೇಕ ಕೆಲಸಗಳನ್ನ ದೆಹಲಿಯ ನನ್ನ ಇಲಾಖೆಯ ಚೇಂಬರ್ ನಲ್ಲೇ ಮಾತುಕತೆ ಆಗಿದೆ. ಆದರೆ ಒಮ್ನೆಯೂ ಇಲ್ಲಿಗೆ ಮು್ತಾಯವಾಯಿತು ಎಂದು ಹೇಳಲಿಲ್ಲ. ಕೆಲಸ ಮಾಡಿಸಿಕೊಂಡೇ ಹೋಗುತ್ತಿದ್ದರು ಎಂದು ನೆನಪಿಸಿಕೊಂಡರು.

200 ವರ್ಷಗಳ ಕಾಲ ಆಡಳಿತ ನಡೆಸಿದ ಬ್ರಿಟೀಶರನ್ನ ಹಿಂದಿಕ್ಕಿ ಆರ್ಥಿಕ ಸ್ಥಿತಿಯಲ್ಲಿ ಭಾರತವನ್ನ ಮೋದಿ ಐದನೇ ಸ್ಥಾನಕ್ಕೆ ತಂದರು. ವಿಶ್ವಾಸಾರ್ಹತೆಯನ್ನ ಸಂಪೂರ್ಣವಾಗಿ ದೂರು ಮಾಡು‌ವ ಮೂಲಕ ದೇಶವನ್ನ ಐದನೇ ಆರ್ಥಿಕ‌ ಶಕ್ತಿಯನ್ನಾಗಿ ರೂಪಿಸಿದ್ದಾರೆ. ಅಮೇರಿಕಾದ ನೆಲೆದಲ್ಲಿ ನಿಂತ ರಕ್ಷಣ ಸಚಿವ ಗುಡುಗಿದ್ದರು. 1919 ರ ಭಾರತ ಅಲ್ಲ‌ಇದು 2019 ರ ಮೋದಿ ಭಾರತವಾಗಿದೆ.

25 ಕೋಟಿ ಜನ ಬಡತನ ರೇಖೆಯಿಂದ ಹೊರಬಂದಿದ್ದಾರೆ ಇದನ್ನ ಐಎಂಎಫ್ ಸಹ‌ಒಪ್ಪುತ್ತದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಲಾಭ ರಿಲೆಯನ್ಸ್ ಗಿಂತ ಹೆಚ್ಚಾಗಿದೆ.‌ 1 ಲಕ್ಷದ 45 ಸಾವಿರ ಕೋಟಿ‌ ಹಣ ಲಾಭವಾಗಿದೆ. ವಿದ್ಯುತ್ ಕೊರತೆ ಇಲ್ಲ. ಬೇರೆ ದೇಶಕ್ಕೆ ವಿದ್ಯುತ್ ನೀಡಲು ಭಾರತ ಬೆಳೆದಿದೆ.  ಬೇಕಾದ ವಸ್ತುಗಳನ್ನ ಉತ್ಪಾದಿಸುವ ದೇಶ ಭಾರತವಾಗಲಿದೆ. 20ನೇ ಶತಮಾನ‌ಅಮೇರಿಕಾದ್ದಾದರೆ, 21 ನೇ ಶತಮಾನ ಭಾರತ ದೇಶದ್ದು ಎಂದು‌ ಹೇಳಿದರು.

ಬೇಕಾದಲ್ಲಿ‌ಬಾಂಬ್ ಸ್ಪೋಟವಾಗಿ‌ಆರಾಮಾಗಿ ಓಡಾಡುತ್ತಿದ್ದಾರೆ. ಮೊದಲು ಮನೆಯಲ್ಲಿ‌ಕುಳಿತು ಜನ‌ ಬಾಂಬ್ ಸ್ಪೋಟಿಸಿದಾಗ‌ ಅಳುತ್ತಿದ್ದ ಈಗ ಮೋದಿ ಸರ್ಕಾರ ಬಂದನಂತರ ಬಾಂಬ್ ಸಿಡಿಸಿದವರ ಮನೆಯ ಒಳಗೆ ಹೋಗಿ ಒದ್ದು ತರಲಾಗುತ್ತಿದೆ ಎಂದರು.‌

ಇದನ್ನೂ ಓದಿ-https://suddilive.in/archives/10397

Related Articles

Leave a Reply

Your email address will not be published. Required fields are marked *

Back to top button