ರಾಜಕೀಯ ಸುದ್ದಿಗಳು

ಸೋಲಾದ ನಂತರ ಚಿಂತಿಸದಂತೆ ಬಿವೈಆರ್ ಕರೆ

ಸುದ್ದಿಲೈವ್/ಶಿವಮೊಗ್ಗ

ಸೋಲಿನ ಬಗ್ಗೆ ಎಚ್ಚರದಿಂದ ಇರಲು‌ ಸಂಸದ ಬಿ.ವೈ. ರಾಘವೇಧ್ರ ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಅವರು ನಗರದ ದೈವಜ್ಞ ಕಲ್ಯಾಣ ಮಂದಿರದಲ್ಲಿ ಬಿಜೆಪಿಯ ವಿವಿಧ ಮೋರ್ಚಾಗಳ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ಬ ಉದ್ಘಾಟಿಸಿ ಮಾತನಾಡಿದರು.

ವಿಧಾನ ಸಭೆಯ ವೇಳೆ ಆದಂತ ಪ್ರಮಾದದಿಂದ‌ ಎಚ್ಚತ್ತುಕೊಂಡ ಸಂಸದರು ನಾಳೆ ನಮಗೆ ಆಗದ ಯಾವುದೇ ಕಾರ್ಯಕರ್ತರಿಂದ ಬಿಜೆಪಿಗೆ ಮತ ಬೀಳದಂತೆ ಎಚ್ಚರ ವಹಿಸಲು ಕರೆ ನೀಡಿದರು. ಇದರಿಂದ ಬಿಜೆಪಿಯಲ್ಲಿರುವ ಸಣ್ಣ ಬಿರುಕು ಹೊರಬೀಳುತ್ತಿರುವುದು ಘೋಚರಿಸುತ್ತಿದೆ.

ಮೋದಿ ಬೇಕು ರಾಘು ಸರಿಯಿಲ್ಲ ಎಂಬ ನಿರ್ಣಯಕ್ಕೆ ಮತದಾರ ಬಾರದಂತೆ, ರಾಘು ಸರಿಇದ್ದಾನೆ ನಮ್ಮ ತಾಲೂಕು ಅಧ್ಯಕ್ಷ ಸರಿಯಿಲ್ಲ ಎಂಬ ನಿರ್ಣಯಕ್ಕೆ ಮತದಾರ ಬರಬಾರದು. ಇದರಿಂದ ಎಚ್ಚರಿಕೆಯಿಂದ ಇರಬೇಕು. ನಂತರ ವಿಧಾನ ಸಭೆ ಚುನಾವಣೆಯಲ್ಲಿ ನಡೆದಂತೆ ನಡೆಯದಂತೆ ಎಚ್ಚರ ವಹಿಸಲು ಕಾರ್ಯಕರ್ತರಿಗೆ ಕರೆ ನೀಡಿದರು.

ಕಾಂಗ್ರೆಸ್ ಪಕ್ಷ ಜನರ ಜೇಬಿನಿಂದ ದುಪ್ಪಟ್ಟು ದುಡ್ಡನ್ನ ತೆಗೆದು ದು ಅವರ ಜೇಬಿ ಇಡುವ ಕೆಲಸ ಮಾಡ್ತಾಇದೆ. ಆದರೆ ಬಿಜೆಪಿಯ ನಾರಿಶಕ್ತಿ ವಂದನಾ ಕಾರ್ಯಕ್ರಮಗಳು ಸೇರಿದಂತೆ ಕೇಂದ್ರದ ವಿವಿಧ ಕಾರ್ಯಕ್ರಮಗಳು ಜನರ ಆರ್ಥಿಕ ಸ್ಥಿತಯನ್ನ ಹೆಚ್ಚಿಸಿದೆ. ಅದನ್ನ ಕಾರ್ಯಕರ್ತರು ಮತದಾರರಿಗೆ ತಿಳಿಸುವಂತೆ ಮನವಿ ಮಾಡಿಕೊಂಡರು.

ನಾಳೆ ನಡೆಯುವ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಮನವಿ

120 ಕೋಟಿಯಲ್ಲಿ ಶಿವಮೊಗ್ಗ, ಸಾಗರ, ತಾಳಗುಪ್ಪ, ಅರಸಾಳು ರೈಲ್ವೆ ನಿಲ್ದಾಣವನ್ನ ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಶಿವಮೊಗ್ಗದ ರೈಲ್ವೆ ನಿಲ್ದಾಣದಲ್ಲಿ ಈ ಎಲ್ಲಾ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಕರೆತರುವಂತೆ ಕರೆ ನೀಡೀಡಿದರು.

ಇದನ್ನೂ ಓದಿ-https://suddilive.in/archives/9570

Related Articles

Leave a Reply

Your email address will not be published. Required fields are marked *

Back to top button