ಶೈಕ್ಷಣಿಕ ಸುದ್ದಿಗಳು

ಪ್ರತಿಭೆಯನ್ನು ಬೆಳಕಿಗೆ ತರುವ ಕೆಲಸ ಅಗತ್ಯ ವಿಜ್ಞಾನ ವಸ್ತುಪ್ರದರ್ಶನದ ಸಮಾರೋಪದಲ್ಲಿ ಸಚಿವ ಮಧು ಹೇಳಿಕೆ

ಸುದ್ದಿಲೈವ್/ಶಿವಮೊಗ್ಗ

ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಎಲ್ಲ ರೀತಿಯ ಸೌಲಭ್ಯ ಕಲ್ಪಿಸುವುದರ ಜೊತೆಗೆ ಅವರ ಪ್ರತಿಭೆಯನ್ನು ಬೆಳಕಿಗೆ ತರುವ ಕೆಲಸ ಅಗತ್ಯವಾಗಿ ನಡೆಯಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.

ಇಲ್ಲಿನ ಅರ್ ಎಂಎಲ್ ನಗರದ ಇಖ್ಲಾಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ಎರಡು ದಿನಗಳ ಕಾಲದ ವಿಜ್ಞಾನ ವಸ್ತು ಪ್ರದರ್ಶನದ ಸಮಾರೋಪದಲ್ಲಿ ಬಹುಮಾನ ವಿತರಿಸಿ ಅವರು ಮಾತನಾಡಿದರು.

ಮಕ್ಕಳಿಗೆ ಪ್ರತಿಭೆಯೇ ಆಸ್ತಿ. ಇದಕ್ಕೆ ಎಲ್ಲೆಡೆ ಗೌರವವಿದೆ. ಶಿಕ್ಷಕರು ಇದನ್ನು ನೀರೆರೆದು ಪ್ರೋತ್ಸಾಹಿಸಬೇಕು. ಇಂದಿನ ದಿನಗಳಲ್ಲಿ ಶಿಕ್ಷಣ ಕೊಡುವುದು ಜವಾಬ್ದಾರಿಯ ಕೆಲಸವಾಗಿದೆ. ಆದರೆ ಯಾವ ರೀತಿಯ ಶಿಕ್ಷಣ ಬೇಕೆನ್ನುವುದನ್ನು ವಿದ್ಯಾರ್ಥಿಗಳನ್ನಾಧರಿಸಿ ಅರಿಯಬೇಕು. ಇಂತಹ ಮಹತ್ತರ ಕಾರ್ಯದಲ್ಲಿ ಶಿಕ್ಷಕರ ಪಾತ್ರ ಅತಿ ಮಹತ್ವದ್ದು ಎಂದರು.

ರಾಜ್ಯ ಶಿಕ್ಷಣ ಇಲಾಖೆಯು ಬರುವ ಜನವರಿ ೧ರಿಂದ ಡಿ. ೩೧ರೊಳಗೆ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಮಕ್ಕಳು ನೆಲದ ಮೇಲೆ ಕುಳಿತುಕೊಳ್ಳದಂತೆ ಡೆಸ್ಕ್ಗಳನ್ನು ದಾನಿಗಳ ನೆರವಿನಿಂದ ಕೊಡಿಸುವ ಯೋಜನೆ ಹಮ್ಮಿಕೊಂಡಿದೆ. ಆಡಳಿತ ಮಂಡಳಿಗಳಿಗೆ ಈ ಬಗ್ಗೆ ಸೂಚನೆ ಕೊಡಲಾಗಿದೆ ಎಂದರು.

ಶಾಸಕಿ ಶಾರದಾ ಪರ‍್ಯಾ ನಾಯ್ಕ ಮಾತನಾಡಿ, ಹೆಣ್ಣುಮಕ್ಕಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಶಾಲೆ ಸೇರುತ್ತಿರುವುದು ಆರೋಗ್ಯಕರ
ಬೆಳವಣಿಗೆಯಾಗಿದೆ. ಅವರಿಗೆ ಉತ್ತಮ ಶಿಕ್ಷಣ ದೊರೆತರೆ ಸಮಾಜ ಇನ್ನಷ್ಟು ಸುಧಾರಿಸಲು ಸಾಧ್ಯ. ಪೋಷಕರು ಇದರತ್ತ ಅಗತ್ಯ ಗಮನ ಹರಿಸಬೇಕು. ಮಕ್ಕಳು ಶಾಲೆಗೆೆ ಬರುವಂತೆ ಮಾಡುವಲ್ಲಿ ಶಿಕ್ಷಕರ ಪಾತ್ರವೂ ಹೆಚ್ಚಿನದ್ದಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಮಲ್ನಾಡ್ ಎಜುಕೇಶನ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಇಬ್ರಾಹಿಂ ಮಾತನಾಡಿ, ಪ್ರಗತಿಪರ ಸಮಾಜ ಇಂದು ಸೃಷ್ಠಿಯಾಗಬೇಕಿದೆ. ಇದಕ್ಕಾಗಿ ಸಮಾಜದಲ್ಲಿ ಅಬಿವೃದ್ಧಿಶೀಲ ಚಿಂತನೆ ಅಗತ್ಯ. ಪ್ರಗತಿಶೀಲರಾಗುವ ಮನೋಭಾವವನ್ನು ಮೊದಲು
ರೂಪಿಸಿಕೊಳ್ಳಬೇಕು. ಪ್ರಗತಿಶೀಲತೆ ಇಲ್ಲದಿದ್ದರೆ ಸಮಾಜಕ್ಕೆ ಹಾನಿಯಾಗುವ ಸಾಧ್ಯತೆ ಅಧಿಕ. ಇದನ್ನು ಬೆಳೆಸಿಕೊಳ್ಳುವುದು ಕಷ್ಟದ ಕೆಲಸವಲ್ಲ. ಇದಕ್ಕೆ ತಕ್ಕ ವಾತಾವರಣ ಮತ್ತು ಸೌಲಭ್ಯವನ್ನು ಶಿಕ್ಷಣ ಸಂಸ್ಥೆ ಕಲ್ಪಿಸುತ್ತಿದೆ. ಮಕ್ಕಳು ಇದನ್ನು ಸದುಪಯೋಗ ಮಾಡಿಕೊಂಡು ಉನ್ನತ ಸಾಧಕರಾಗಬೇಕೆಂದರು.

ವೇದಿಕೆಯಲ್ಲಿ ಟ್ರಸ್ಟ್ ಚೇರ್ಮನ್ ಇಬ್ರಾಹಿಂ ಎಜಾಜ್ ಇಫ್ತೆಕಾರ್. ಉದ್ಯಮಿ ಇಕ್ಬಾಲ್ ಹಬೀಬ್ ಸೇಠ್, ಡಿಡಿಪಿಐ ಪರಮೇಶ್ವರಪ್ಪ, ಕಾಂಗ್ರೆಸ್ ಮುಖಂಡ ಕಲಗೊಡು ರತ್ನಾಕರ್, ಸುಡಾ ಮಾಜಿ ಅಧ್ಯಕ್ಷ ಎನ್. ರಮೇಶ್, ವಿಜ್ಞಾನ ವಸ್ತು ಪ್ರದರ್ಶನ ಸಮಿತಿಯ ಸದಸ್ಯರಾದ ಮೊಹಮದ್ ಲಿಯಾಖತ್, ಮುದಸ್ಸೀರ್ ಅಹಮದ್, ಎಜಾಜ್ ಅಹಮದ್ ಇಫ್ತೇಖಾರ್ ಅಹಮದ್ ಮೊದಲಾದವರು ಹಾಜರಿದ್ದರು.

ವಸ್ತುಪ್ರದರ್ಶನದಲ್ಲಿ ಮೊದಲ ಸ್ಥಾನವನ್ನುಇಖ್ಲಾಸ್ ಶಾಲೆ
50 ಸಾವಿರ ರೂ. ನಗದು, ಎರಡನೇ ಬಹುಮಾನ ಖಿದ್ವಾಯಿ ಶಾಲೆಗೆ 40000 ಮತ್ತು. ಮೂರನೇ ಬಹುಮಾನ ಅನನ್ಯ ವಿದ್ಯಾಪೀಠ 30000ನಗದು ಪ್ರಮಾಣ ಪತ್ರ ಮತ್ತು ಸ್ಮರಣಿಕೆ ಸಹಿತ ನೀಡಿದರು.

ಇದನ್ನೂಓದಿ-https://suddilive.in/archives/5609

Related Articles

Leave a Reply

Your email address will not be published. Required fields are marked *

Back to top button