ಸಡಗರ ಸಂಭ್ರಮದದಿಂದ ನಡೆದ ಆಯುಧ ಪೂಜೆ-ಪೂಜೆಯಲ್ಲಿ ಎಸ್ಪಿ, ಅಡಿಷನಲ್ ಎಸ್ಪಿ ಭಾಗಿ

ಸುದ್ದಿಲೈವ್/ಶಿವಮೊಗ್ಗ

ಆಯುಧ ಪೂಜಾ ಹಿನ್ನಲೆಯಲ್ಲಿ ನಗರದಲ್ಲಿ ಸಡಗರ ಮತ್ತು ಸಂಭ್ರಮದಿಂದ ನಡೆದಿದೆ. ಸರ್ಕಾರಿ ವಾಹನಗಳು, ಖಾಸಗಿ ವಾಹನಗಳಿಗೆ ಪೂಜೆ ಸಲ್ಲಿಸಿ ಸಂಭ್ರಮದಿಂದ ಹಬ್ಬ ಆಚರಿಸಲಾಗುತ್ತಿದೆ.
ಖಾಸಗಿ ಬಸ್ ಗಳು, ದ್ವಿಚಕ್ರ ವಾಹನ, ತ್ರಿಚಕ್ರ ವಾಹನ, ಸರ್ಕಾರಿ ಇಲಾಖಾ ವಾಹನಗಳಿಗೆ ಪೂಜೆ ಸಲ್ಲಿಸಿ ವಾಹನಗಳಿಗೆ ಹೂವಿನ ಅಲಂಕಾರ ನೆರವೇರಿಸಲಾಗುತ್ತಿದೆ. ನಗರದ 9 ಪೊಲೀಸ್ ಠಾಣೆಗಳಲ್ಲಿ ವಾಹನಗಳಿಗೆ ಪೂಜೆ ಸಲ್ಲಿಸಲಾಗಿದೆ. ಮೊದಲು ದೇವಸ್ಥಾನದಲ್ಲಿ ಪೂಜೆ ಸಲ್ಲಿ ನಂತರ ಠಾಣೆಗೆ ತಂದು ಪೂಜೆ ಸಲ್ಲಿಸಲಾಗುತ್ತಿದೆ.
ಕೆಲ ಠಾಣೆಗಳಲ್ಲಿ ಬಂದೂಕು ಮತ್ತು ರಿವಾಲ್ವರ್ ಗಳಿಗೆ ಪೂಜೆ ಸಲ್ಲಿಸಲಾಗಿದೆ. ಇಲಾಖೆ ವಾಹನಗಳಿಗೆ ಕುಂಬಳಕಾಯಿಯನ್ನ ಒಡೆದು ಪೂಜೆ ನೆರವೇರಿಸಲಾಗಿದೆ. ತುಂಗನಗರ, ದೊಡ್ಡಪೇಟೆ, ಶಿವಮೊಗ್ಗ ಗ್ರಾಮಾಂತರ, ಮಹಿಳಾ ಪೊಲೀಸ್ ಠಾಣೆ, ಜಯನಗರ, ವಿನೋಬ ನಗರ, ಕೋಟೆ ಎರಡು ಸಂಚಾರಿ ಇಲಾಖೆಗಳಲ್ಲಿ ಆಯುಧ ಪೂಜೆಯನ್ನ ನೆರವೇರಿಸಲಾಗಿದೆ.
ನರದ ಪೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿ ತಾಯಿ ಚಾಮುಂಡೇಶ್ವರಿ ದೇವಿಯನ್ನ ಪ್ರತಿಷ್ಠಾಪಿಸಿ ಪೂಜೆ ನಡೆಸಲಾಗಿದೆ. ಈ ಪೂಜೆಯಲ್ಲಿ ಎಸ್ಪಿ ಮಿಥುನ್ ಕುಮಾರ್, ಅಡಿಷನಲ್ ಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ, ಡಿವೈಎಸ್ಪಿ ಬಾಲರಾಜ್, ಪಿಐ ಸಂತೋಷ್ ಕುಮಾರ್, ಪಿಎಸ್ ಐ ತಿರುಮಲೇಶ್ ಮೊದಲಾದ ಸಿಬ್ಬಂದಿಗಳು ಭಾಗಿಯಾಗಿದ್ದಾರೆ.
ಮನೆಗಳಲ್ಲಿನ ದ್ವಿಚಕ್ರ ಮತ್ತು ಕಾರುಗಳಿಗೆ, ಗೂಡ್ಸ್ ವಾಹನಗಳಿಗೆ ಪೂಜೆ ಸಲ್ಲಿಸಿ ಭಕ್ತಿ ಭಾವ ಮೆರಯಲಾಗಿದೆ. ಅನೇಕ ಜನರ ಮನೆಗಳಿಗೆ ಈ ವಾಹನಗಳೇ ಅನ್ನ ಹಾಕುವ ಕೈಗಳಾಗಿವೆ. ದೀಪಾವಳಿ ಮತ್ತು ಆಯುಧ ಪೂಜೆಯ ವೇಳೆಗೆ ತಮ್ಮ ನೆಚ್ಚಿನ ವಾಹನಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ಅದರಂರೆ ಇಂದು ದಸರಾ ಆಯುಧ ಪೂಜೆಯಲ್ಲಿ ವಾಹನಗಳನ್ನ ಪೂಜೆ ಸಲ್ಲಿಸಲಾಗಿದೆ.
ಇದನ್ನೂ ಓದಿ-https://suddilive.in/archives/1690
