ನಗರ‌ ಸುದ್ದಿಗಳು

ಮೆಗ್ಗಾನ್ ಅಧೀಕ್ಷಕರ ಹುಟ್ಟುಹಬ್ಬಕ್ಕೆ ಸಂಘಟನೆಯಿಂದ‌ ಅಡ್ಡಿ-ವಿಡಿಯೋ ವೈರಲ್

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಅಧೀಕ್ಷಕರ ಹುಟ್ಟು ಹಬ್ಬ ಆಚರಣೆಗೆ ಸಂಘಟನೆಯೊಂದು ಅಡ್ಡಿಪಡಿಸಿದ್ದು, ಜನ ಸಾಯ್ತಾ ಇದ್ದಾರೆ ನೀವು ಕೆಲಸದ ವೇಳೆ ಹುಟ್ಟುಹಬ್ಬ ಆಚರಿಸಿಕೊಳ್ತೀರ ಎಂದು ಆಗ್ರಹಿಸಿ ಸಂಘಟನೆ ಪ್ರತಿಭಟನೆಗೆ ಮುಂದಾಗಿರುವ ಘಟನೆ ನಡೆದಿದೆ.

ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಅಧೀಕ್ಷಕರ ಹುಟ್ಟು ಹಬ್ಬಕ್ಕಾಗಿ ಅವರ ಚೇಂಬರ್ ನಲ್ಲಿ ಸಿಬ್ಬಂದಿಗಳು ಕೇಕ್ ಕಟ್ ಮಾಡಲು ಮುಂದಾಗಿದ್ದಾರೆ. ಆದರೆ ಕೆಆರ್ ಎಸ್ ಸಂಘಟನೆ ಅವರ ಚೇಂಬರ್ ಒಳಗೆ ನುಗ್ಗಿ ಕೆಲಸ ವೇಳೆ ಹುಟ್ಟು ಹಬ್ಬ ಅಚರಿಸಿಕೊಳ್ತೀರ ಎಂದು ಅಡ್ಡಿಪಡಿಸಿದ್ದಾರೆ.

ಹುಟ್ಟುಹಬ್ಬ ಆಚರಣೆಗೆ ಯಾವುದೇ ಅಭ್ಯಂತರವಿಲ್ಲವಾದರೂ ಕೆಲಸದ ವೇಳೆ ಕೇಕ್ ಕಟ್ ಮಾಡಿಕೊಂಳ್ಳುತ್ತಿರುವುದು ಸಂಘಟನೆಯ ಕೆಂಗಣ್ಣಿಗೆ ಗುರಿಯಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ, ವಿಡಿಯೋದಲ್ಲಿ ಇಬ್ಬರು ಮಹಿಳೆಯರು ಸಹ ಕಣ್ಣೀರು ಹಾಕುತ್ತಿದ್ದಾರೆ. ನಂತರ ಮಹಿಳೆಯರ ಕಷ್ಣವನ್ನ ಅಧೀಕ್ಷಕರು ಆಲಿಸಿ ಸ್ಪಂಧಿಸಿದ್ದಾರೆ.

ವಿಡಿಯೋ ನೋಡಲು ಈ ಕೆಳಗಿನ‌ಫೇಸ್ ಬುಕ್ ಲಿಂಕ್ ಒತ್ತಿ https://www.facebook.com/share/v/XwwLnbJKrKs26sty/?mibextid=WC7FNe

ಇದನ್ನೂ ಓದಿ-https://suddilive.in/archives/10059

Related Articles

Leave a Reply

Your email address will not be published. Required fields are marked *

Back to top button