ನಗರ‌ ಸುದ್ದಿಗಳು

ಹೆಚ್ ಒಡಿ ಯಾರಾಗಬೇಕೆಂಬ ಎಂಬ ವಿಷಯದಲ್ಲಿ ಡಾ.ಶ್ರೀಧರ್ ಗೆ ಗೆಲವು

ಸುದ್ದಿಲೈವ್/ಶಿವಮೊಗ್ಗ

ಇ ಅಂಡ್ ಟಿ ಮುಖ್ಯಸ್ಥರು ಯಾರು ಆಗಬೇಕು ಎಂಬ ಜಟಾಪಟಿಯಲ್ಲಿ ಡಾ.ಶ್ರೀಧರ್ ಗೆ ಹೈಕೋರ್ಟ್ ನಲ್ಲಿ ನ್ಯಾಯ ದೊರೆತಿದೆ. ಮೆಗ್ಗಾನ್ ಆಸ್ಪತ್ರೆಯ ಇ ಅಂಡ್ ಟಿ ವಿಭಾಗದಲ್ಲಿ ಮುಖ್ಯಸ್ಥರು ಯಾರು ಆಗಬೇಕು ಎಂಬುದಕ್ಕೆ ನ್ಯಾಯಾಲಯ ಸೂಕ್ತ ನಿರ್ದೇಶನ ನೀಡಿ ಆದೇಶಿಸಿದೆ.‌

ಇ ಅಂಡ್ ಟಿ ವಿಭಾಗದ ಮುಖ್ಯಸ್ಥರಾಗಿದ್ದ ಡಾ.ಗಂಗಾಧರ್ ನಿವೃತ್ತರಾಗಿದ್ದರು. ಈ ವರ್ಷದ ಜ.31 ಕ್ಕೆ ಡಾ. ಗಂಗಾಧರ್ ಇ ಅಂಡ್ ಟಿ ಮುಖ್ಯಸ್ಥರಾಗಿ ನಿವೃತ್ತಿಗೊಂಡ ಬೆನ್ನಲ್ಲೇ ಯಾರು ಈ ವಿಭಾಗದ ಮುಖ್ಯಸ್ಥರಾಗ್ತಾರೆ ಎಂಬ ಪ್ರಶ್ನೆಯೂ ಉದ್ಭವಿಸಿತ್ತು. ಸೀನಿಯಾರಿಟಿ ಮೇಲೆ ದೊರೆಯುವ ಮುಖ್ಯಸ್ಥ ಸ್ಥಾನಕ್ಕೆ ಮೆಗ್ಗಾನ್ ಅಧೀಕ್ಷರಾಗಿದ್ದ ಡಾ.ತಿಮ್ಮಪ್ಪ ತಮಗೆ ಇ ಅಂಡ್ ಟಿ ಸ್ಥಾನ ನೀಡಿ ನಿರ್ದೇಶಕರು ಆದೇಶಿಸಿದ್ದರು.

ಆದರೆ ಡಾ.ಶ್ರೀಧರ್ ಒಬ್ಬರಿಗೆ ಒಂದೇ ಸ್ಥಾನ ಸಿಗಬೇಕು ಎಂಬ ಆಧಾರದ ಮೇಲೆ ಹೈಕೋರ್ಟ್ ನ ಮೊರೆ ಹೋಗಿದ್ದರು. ಡಾ.ಶ್ರೀಧರ್ ಸಹ ಮೆಗ್ಗಾನ್ ಆಸ್ಪತ್ರೆಯ ಅಧೀಕ್ಷಕರಾಗಿದ್ದರು. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಡಾ.ತಿಮ್ಮಪ್ಪನವರನ್ನ‌ ಅಧೀಕ್ಷಕರನ್ನಾಗಿ ನೇಮಿಸಿ ಆದೇಶಿಸಿತ್ತು.

ಡಾ.ತಿಮ್ಮಪ್ಪ ಮತ್ತು ಡಾ.ಶ್ರೀಧರ್ ಇಬ್ಬರೂ ಸಹ ಇ ಅಂಡ್ ಟಿ ವಿಭಾಗದವರೇ ಆದುದರಿಂದ ಯಾರು ಹೆಚ್ ಒಡಿ ಆಗಬೇಕು ಎಂಬ ವಿಷಯವನ್ನ  ಕಾನೂನಿನ ಮೊರೆ ಹೋಗಿದ್ದರಿಂದ ಡಾ.ಶ್ರೀಧರ್ ನ್ಯಾಯಾಲಯದಲ್ಲಿ ಹೋರಾಟ ನಡೆಸಿದ್ದರು. ಸಿಮ್ಸ್ ನಿರ್ದೇಶಕರಿಂದ ನೇಮಕಗೊಳ್ಳುವ ಹೆಚ್ ಒಡಿ ಸ್ಥಾನ ಅಂತಹದ್ದೇನು ದೊಡ್ಡ ಹುದ್ದೆ ಅನಿಸಿಕೊಳ್ಳದಿದ್ದರೂ ಸಾರ್ವಜನಿಕ ಆಸ್ಪತ್ರೆಯಾದುದರಿಂದ ಇದುಒಂದು ಸುದ್ದಿನೇ.

ಸೀನಿಯಾರಿಟಿ ಮೇರೆಗೆ ನಿರ್ದೇಶಕರು ಅಧೀಕ್ಷರಾಗಿರುವ ಡಾ.ತಿಮ್ಮಪ್ಪನವರನ್ನ ಹೆಚ್ ಒಡಿಯನ್ನಾಗಿ ನೇಮಿಸಿದ್ದಾರೆ. ಇದರ ವಿರುದ್ಧ ಡಾ.ಶ್ರೀಧರ್ ಹೈಕೋರ್ಟ್ ಗೆ ಹೋಗಿದ್ದರಿಂದ ಕೋರ್ಟ್ ಅಧೀಕ್ಷಕರಾದ ಡಾ.ತಿಮ್ಮಪ್ಪನವರಿಗೆ ಹೆಚ್ ಒಡಿ ಸ್ಥಾನ ಕೊಡುವುದನ್ನ ರದ್ದು ಮಾಡಿ ಬದಲಿಗೆ ಬೇರೆಯವರನ್ನ ನೇಮಿಸಲು ಸೂಚಿಸಿದೆ. ಡಾ.ಶ್ರೀಧರ್ ಈ ವಿಷಯದಲ್ಲಿ ನ್ಯಾಯಾಲಯದಲ್ಲಿ ಗೆಲುವಾಗಿದೆ.

ಇದನ್ನೂ ಓದಿ-https://suddilive.in/archives/11669

Related Articles

Leave a Reply

Your email address will not be published. Required fields are marked *

Back to top button