ನಗರ‌ ಸುದ್ದಿಗಳು

ಯೋಧರಿಗೆ ತಿಲಕವಿಟ್ಟು ಬರಮಾಡಿಕೊಡ ಗ್ರಾಮಸ್ಥರು

ಸುದ್ದಿಲೈವ್/ಶಿಕಾರಿಪುರ

ದೇಶದ ಸಂಸ್ಕೃತಿನೇ ಹಾಗೆ, ರೈತ, ಯೋಧನನ್ನ ಕಂಡರೆ ಪೂಜಿಸಿ, ಸೆಲ್ಯೂಟ್ ಮಾಡುವಂತಹ ಸಂಸ್ಕೃತಿ ನಮ್ಮದು. ಅಂತಹ ಉದಾಹರಣೆಗೆ ಸಾಕ್ಚಿಯಾಗಿದ್ದು ಇಂದು ಮತದಾನದ ಹಿನ್ನೆಲೆಯಲ್ಲಿ ನಡೆದ ಮಾರ್ಚ್ ಫಾಸ್ಟ್!

ಈ ದಿನ ಬೆಳಗ್ಗೆ 10 ಗಂಟೆ ಸಮಯದಲ್ಲಿ ಪ್ಯಾರ ಮಿಲ್ಟ್ರಿ ಮತ್ತು ಪೊಲೀಸರು ಶಿಕಾರಿಪುರ ತಾಲೂಕಿನ ಪುಣೆದಹಳ್ಳಿ ಗ್ರಾಮದಲ್ಲಿ ಊರಿನ ಪ್ರಮುಖ ಬೀದಿಗಳಲ್ಲಿ ಪಥಸಂಚಲನ ಮಾಡುವ ಸಮಯದಲ್ಲಿ ಊರಿನ ಮಹಿಳೆಯರು ಗ್ರಾಮಸ್ಥರು ಹಾಗೂ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರ ಎಲ್ಲರು ಸೇರಿ ಆರತಿ ಬೆಳಗುವ ಮುಖಾಂತರ ದೇಶದ ಯೋಧರಿಗೆ ಸ್ವಾಗತವನ್ನು ಕೋರಿದ್ದಾರೆ.

ಮತದಾನದ ಜಾಗೃತಿಗಾಗಿ ಇಂದು ಮಾರ್ಚ್ ಫಾಸ್ಟ್ ಹಮ್ಮಿಕೊಳ್ಳಲಾಗಿತ್ತು. ಯೋಧರು ರಸ್ತೆಯಲ್ಲಿ ಸಾಗುವಾಗ ಮಹಿಳೆಯರು ಆರತಿ ಬೆಳಗಿದ್ದಾರೆ. ಯೋಧರ ಹಣೆಗೆ ತಿಲಕವಿಟ್ಟಿದ್ದಾರೆ. ಬಂದಂತ ಮಹಿಳಾ ಯೋಧರಿಗೆ ತಂಪು ಪಾನೀಯ ಮತ್ತು ಹಣ್ಣು ಹಂಪಲುಗಳನ್ನು ನೀಡಿ ಗೌರವಿಸಿದರು.

ಈ ಸಮಯದಲ್ಲಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರಾದ ಪ್ರದೀಪ್ ಲೋಕೇಶ್ ಸತೀಶ ಹೆಗಡೆ ಪ್ರಶಾಂತ್ ರಾಮಚಂದ್ರ ಮತ್ತು ಮುಂತಾದ ಕಾರ್ಯಕರ್ತರು ಊರಿನ ಹಿರಿಯರು ಉಪಸಿತರಿದ್ದರು.

ಇದನ್ನೂ ಓದಿ-https://suddilive.in/archives/12093

Related Articles

Leave a Reply

Your email address will not be published. Required fields are marked *

Back to top button