ನಗರ‌ ಸುದ್ದಿಗಳು

ಪತ್ರಕರ್ತರ ಆರೋಗ್ಯ ತಪಾಸಣೆ ಶಿಬಿರದಲ್ಲಿ ಡಿಸಿ ಕಳವಳ

ಸುದ್ದಿಲೈವ್/ಶಿವಮೊಗ್ವ

ನಗರದ ಶಿವಮೂರ್ತಿ ವೃತ್ತದ ಬಳಿಯಿರುವ ನಾರಾಯಣ ಹೃದಯಾಲಯದ ಆಸ್ಪತ್ರೆಯಲ್ಲಿ ಪ್ರತ್ರಕರ್ತರಿಗೆ ಉಚಿತ ಆರೋಗ್ಯ ತಪಾಸಣ ಶಿಬಿರ ನಡೆಯಿತು.

ಕಾರ್ಯಕ್ರಮವನ್ನ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಪತ್ರಕರ್ತರನ್ನ ಪ್ರಜಾಪ್ರಭುತ್ವದ ಅಂಗ ಎಂದು ಕರೆಯುತ್ತೇವೆ. ಆದರೆ ಅವರಿಗೆ ಇಲ್ಲಿಯವರೆಗೆ ಸೌಕರ್ಯಗಳನ್ನ ಕಲ್ಪಿಸಲು ಸಾಧ್ಯವಾಗಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಇದರ ಮೂಲಕ ಈ ಪತ್ರಿಕಾರಂಗವನ್ನ ಗೊಂದಲದಲ್ಲಿರಿಸಲಾಗಿದೆ. ಪತ್ರಿಕಾ ಕ್ಷೇತ್ರ ಸ್ಕಿಲ್ಡ್ ಜಾಬ್ ಆಗಿದ್ದು, ಇವರಿಗೆ ಸೇವಾ ಭದ್ರತೆ, ಪಿಂಚಣಿ, ಆರ್ಥಿಕ ಭದ್ರತೆ, ಸೌಕರ್ಯ ಸಿಗಬೇಕಿದೆ ಎಂದು ತಿಳಿಸಿದರು.

ಅಧಿಕಾರಿಗಳು ಬ್ಯೂಸಿಇದ್ದರು ಶೆಡ್ಯೂಲ್ಡ್ ಪ್ರಕಾರ ಸಮಯಕ್ಕೆ ತಕ್ಕಂತೆ ಕೆಲಸ ಮಾಡ್ತೀವಿ. ಅದರೆ ಪತ್ರಕರ್ತರು ಬದುಕಿನಲ್ಲಿ ಆರೋಗ್ಯದ ಕಡೆ ಗಮನ ಹರಿಸಲು ಸಮಯ ಸಿಗದ ಕಾರಣ ಸಾಧ್ಯವಾಗುವುದಿಲ್ಲ ಎಂದರು.

ಪತ್ರಿಕಾರಂಗದಲ್ಲಿ ದೊಡ್ಡದೊಡ್ಡ ಮಾಲೀಕರು ಇರ್ತಾರೆ. ಆದರೆ ಅವರ ಸಂಸ್ಥೆಯಲ್ಲಿನ ಪತ್ರಕರ್ತರಿಗೆ ಲೇಬರ್ ಆಕ್ಟ್ ಪ್ರಕಾರ ಸರಿಯಾದ ಸಂಬಳವು ದೊರೆಯದ ಸ್ಥಿತಿಯಲ್ಲಿರುತ್ತಾರೆ. ಸೇವಭದ್ರತೆ, ಪಿಂಚಣಿ ಮೊದಲಾದ ಸೌಲಭ್ಯ ಸಿಕ್ಕರೆ ಇನ್ನೂ ಹೆಚ್ಚಿನ ಯುವಕರನ್ನ ಈ ಕ್ಷೇತ್ರಕ್ಕೆ ಕರೆತರಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನ ಕೆ.ವಿ.ಶಿವಕುಮಾರ್ ವಹಿಸಿದ್ದರು. ರಾಜ್ಯ ನಿರ್ದೇಶಕ ಟೆಲಕ್ಸ್ ರವಿ, ಪ್ರಧಾನ ಕಾರ್ಯದರ್ಶಿ ಅರುಣ್, ಡಾ.ಶೈಲೇಶ್ ಡಾ.ಅಭಿಲಾಷ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 90 ಜನ ಪತ್ರಕರ್ತರು ಈ ಆರೋಗ್ಯ ಶಿಬಿರದ ಸದುಪಯೋಗ ಪಡೆದುಕೊಂಡರು.

ಇದನ್ನೂ ಓದಿ-https://suddilive.in/archives/12274

Related Articles

Leave a Reply

Your email address will not be published. Required fields are marked *

Back to top button