ರಾಜಕೀಯ ಸುದ್ದಿಗಳು

ಹಿಜಬ್ ಕುರಿತು ಮಧು ಬಂಗಾರಪ್ಪ ಹೇಳಿದ್ದೇನು?

ಸುದ್ದಿಲೈವ್/ಶಿವಮೊಗ್ಗ

ಸರಕಾರದ ವತಿಯಿಂದ ಐದನೇ ಗ್ಯಾರಂಟಿ ಡಿ 26 ರಂದು ನೋಂದಣಿ ಆರಂಭವಾಗಲಿದೆ. ಯುವನಿಧಿ ಗ್ಯಾರಂಟಿ 26 ರಿಂದ ನೋಂದಣಿ ಆರಂಭವಾಗಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಶಿಕ್ಷಣ ಸಚಿವ  ನಿರುದ್ಯೋಗಿ ಪದವೀಧರರು ಹೆಸರು ನೋಂದಣಿ ಮಾಡಿಕೊಳ್ಳಬೇಕು. ಯುವನಿಧಿ ಜಾರಿ ಕಾರ್ಯಕ್ರಮ ಜ.12 ರಂದು ಶಿವಮೊಗ್ಗದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ ಎಂದರು.

ವಿವೇಕಾನಂದ ಅವರ ಜನ್ಮ ಜಯಂತಿಯ ದಿನದಂದು ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಶಿವಮೊಗ್ಗದ ಫ್ರೀಡಂ ಪಾರ್ಕ್ ಆವರಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ.

ರಾಜ್ಯ ಮಟ್ಟದ ನಾಯಕರು ಭಾಗವಹಿಸುತ್ತಾರೆ. ವಿಧಾನಸಭೆ 2023 ರ ಚುನಾವಣೆಯ ವೇಳೆ  ಪ್ರಣಾಳಿಕೆ ಉಪಾಧ್ಯಕ್ಷನಾಗಿದ್ದೆ. ಈಗಾಗಿ ನಮ್ಮ ಜಿಲ್ಲೆಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಯುವಕರು ಅರ್ಜಿ ಹಾಕಿ ಯೋಜನೆಯ ಸಹಕಾರ ಪಡೆಯಲಿ ಎಂದರು.

ಶಾಲೆಗಳಲ್ಲಿ ಡಿ ದರ್ಜೆ ನೌಕರರ ನೇಮಕ ಮಾಡಿಕೊಳ್ಳುವ ಬಗ್ಗೆ ಸಿಎಂ ಹೇಳಿದ್ದಾರೆ. ಈ ಬಗ್ಗೆ ಸಿಎಂ ಜೊತೆ ಈ ಬಗ್ಗೆ ಚರ್ಚೆ ಮಾಡುತ್ತೇನೆ. ಮುಂದಿನ ವರ್ಷದಿಂದ ಎಲ್ಲಾ ಶಾಲೆಗಳಲ್ಲು ಮಕ್ಕಳನ್ನು ನೆಲದ ಮೇಲೆ ಕುಳಿತುಕೊಂಡು ಪಾಠ ಕಲಿಯಬಾರದು. ಎಲ್ಲಾ ಮಕ್ಕಳು ಡೆಸ್ಕ್ ಮೇಲೆ ಕುಳಿತುಕೊಂಡು ‌ಪಾಠ ಕಲಿಯಬೇಕು ಹಾಗಾಗಿ ಹಲವು ಕ್ರಮ ಕೈಗೊಂಡಿದ್ದೇವೆ.

ಹಿಜಬ್ ವಿಷಯದಲ್ಲಿ ಕಾನೂನು ತಜ್ಞರ ಜೊತೆ ಸಿಎಂ ಚರ್ಚೆ ಮಾಡ್ತಾರೆ. ಕಾನೊನು ಸಲಗೆಗಾರರ ಸಲಹೆ ಪಡೆದು ಮುಂದಿನ ಹೆಜ್ಜೆ ಇಡಬೇಕು. ಈ ವಿಷಯದಲ್ಲಿ ಮುಖ್ಯಮಂತ್ರಿ ಅವರ ನಿರ್ಧಾರ ಫೈನಲ್ ಎಂದರು.

ಇದನ್ನೂ ಓದಿ-https://suddilive.in/archives/5386

Related Articles

Leave a Reply

Your email address will not be published. Required fields are marked *

Back to top button