ರಾಜಕೀಯ ಸುದ್ದಿಗಳು

ಸರ್ಕಾರಿ ಎಫ್ ಎಸ್ ಎಲ್ ವರದಿಯು ಬರಲಿದೆ-ಮಧು ಬಂಗಾರಪ್ಪ

ಸುದ್ದಿಲೈವ್/ಶಿವಮೊಗ್ಗ

ವಿಧಾನ ಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ ಬಗ್ಗೆ ಖಾಸಗಿ ಸಂಸ್ಥೆಯಿಂದ ಎಫ್ ಎಸ್ ಎಲ್ ವರದಿ ಬಂದಿದ್ದು ಸರ್ಕಾರದ ವರದಿಯು ಬರಲಿದೆ. ಬಂದ ತಕ್ಷಣ ಕ್ರಮ ಜರುಗಲಿದೆ ಅದರಲ್ಲಿ ಹಿಂದೆ ಮುಂದೆ ನೋಡುವ ಪ್ರಶ್ನೇಯೇ ಇಲ್ಲ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಅವರು ಮಾಧ್ಯಮಗಳ ಜೊತೆ ಮಾತನಾಡಿ, ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟ ವಿಚಾರದಲ್ಲಿ ಬಿಜೆಪಿ ಸರ್ಕಾರ ಕೇವಲ ಗೊಂದಲ ಉಂಟು ಮಾಡುತ್ತಿದೆ. ಸರ್ಕಾರದ ವಿರುದ್ದ ಆರೋಪ ಮಾಡುತ್ತಿದೆ. ಪುಲ್ವಾಮಾದಲ್ಲಿ ಸೇನೆಯ ಮೇಲೆ ಬಾಂಬ್ ಸ್ಪೋಟಗೊಂಡಿದ್ದು ಯಾವಾಗ? ಮಣಿಪುರ ಘಟನೆ ನಡೆದಿದ್ದು ಯಾರಿದ್ದಾಗ? ರೈತರ ಮೇಲೆ ಟಿಯರ್ ಗ್ಯಾಸ್ ಸಿಡಿಸಿದ್ದು ಯಾರಿದ್ದಾಗ? ಪ್ರಧಾನಿ ಮೋದಿ ಇದ್ದಾಗಲೇ ನಡೆದಿದ್ದು ಅಲ್ವಾ ಎಂದು ಪ್ರಶ್ನಿಸಿದರು.

ಎಲೆಕ್ಷನ್ ಬಂದ ವೇಳೆ ಬಿಜೆಪಿಯಿಂದ ಈ ರೀತಿ ಹಳೇಚಾಳಿಗಳು ಆರಂಭವಾಗುತ್ತದೆ. ಈ ಬಾರಿ ಚುನಾವಣೆಯಲ್ಲಿ ಮೋದಿ ಗ್ಯಾರೆಂಟಿನಾ ಅಥವಾ ಸಿದ್ದರಾಮಯ್ಯನವರ ಗ್ಯಾರೆಂಟಿ ಗೆಲ್ಲುತ್ತಾ ಎಂದು ಕಾದು ನೋಡಬೇಕಿದೆ. ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯನವರ ಗ್ಯಾರೆಂಟಿ ಗೆದ್ದಿದೆ. ಮೋದಿ ಗ್ಯಾರೆಂಟಿ ಕೇವಲ ಟಿವಿ ಮಾಧ್ಯಮಗಳಲ್ಲಿ ಪ್ರಚಾರ ಪಡೆದುಕೊಂಡು ಜನರ ಭಾವನೆಯನ್ನ ಗೆಲ್ಲಲು ಸಾಧ್ಯವಾಗಿಲ್ಲ. ನಮ್ಮ ಗ್ಯಾರೆಂಟಿ ಜನರ ಮನಗೆದ್ದಿದೆ ಎಂದರು.

ಕಾಂತರಾಜು ವರದಿಯನ್ನ ಸ್ವೀಕರಿಸುವುದು ಸೂಕ್ತವಲ್ಲ ಎಂದು ಮಠಾಧೀಶರು ಮತ್ತು ಇತರರು ಆಕ್ಷೇಪಿಸಿದ್ದಾರೆ. ಶಾಸಕ ಶಾಮನೂರು ಶಿವಶಂಕರಪ್ಪ ಅವರೇ ಆಕ್ಷೇಪಿಸಿದ್ದಾರೆ ಎಂಬ ಮಾಧ್ಯಮದ ಪ್ರಶ್ನೆಗೆ ಗರಂ ಆದ ಸಚಿವರು. ಯಾರಬೇಕಾದರೂ ಆಕ್ಷೇಪಿಸಬಹುದು. ಆಕ್ಷೇಪಣೆಗೆ ವಿರೋಧವಿಲ್ಲ. ನಾನು ಅಕ್ಷೇಪಿಸುವೆ. ನನ್ನ ಮನಸ್ಸಿನಲ್ಲೂ ಇದೆ ಎಂದುದೂರಿದರು.

ಬಿಜೆಪಿ ಮೊದಲಪಟ್ಟಿ ಬಿಡುಗಡೆಯಾಗಿದೆ ಕಾಂಗ್ರೆಸ್ ನ ಪಟ್ಟಿ ಬಿಡುಗಡೆ ಯಾವಾಗ ಎಂಬ ಪ್ರಶ್ನೆಗೆ ಉತ್ತರಿಸಿದವರು‌ ಅದು ಪಕ್ಷದಹೈಕಮಾಂಡ್ ತೀರ್ಮಾನಿಸಲಿದೆ ಎಂದರು. ಗ್ರಾಮಪಂಚಾಯಿತಿಗೆ ಅನುದಾನ ಇಲ್ಲ ಎಂದು ವರದಿ ಬಂದಿರುವ ಬಗ್ಗೆನೂ ಮಾತನಾಡಿದ ಸಚಿವರು ಅದು ಕೇಂದ್ರದ 15 ನೇ ಹಣಕಾಸು ಬಿಡುಗಡೆ ಮಾಡಲಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಇದನ್ಬೂ ಓದಿ-https://suddilive.in/archives/10007

Related Articles

Leave a Reply

Your email address will not be published. Required fields are marked *

Back to top button