ರಾಜಕೀಯ ಸುದ್ದಿಗಳು

ಮೂರು ನಾಲ್ಕು ದಿನಗಳಲ್ಲಿ ನಿಗಮ ಮಂಡಳಿಗೆ ಅಧ್ಯಕ್ಷರ ನೇಮಕ-ಶಾಸಕ ಬೇಳುರು

ಸುದ್ದಿಲೈವ್/ಶಿವಮೊಗ್ಗ

ನಿಗಮ‌ ಮಂಡಳಿಗಳಿಗೆ ಶಾಸಕರು ಕಾರ್ಯಕರ್ತರಿಗೆ ಕೊಡುವ ಬಗ್ಗೆ ತೀರ್ಮಾನ ಆಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದ್ದಾರೆ.

ಅವರು ಮಾಧ್ಯಮಗಳಿಗೆ ಮಾತನಾಡಿ,  ಕಾರ್ಯಕರ್ತರು ಮುಖಂಡರು ಶಾಸಕರು ಎಲ್ಲರಿಗು ಕೊಡಬೇಕು ಎಂಬ ಬೇಡಿಜೆಯನ್ನ ಮುಖಂಡರ ಮುಂದೆ ಇಡಾಗಿದೆ. ಸಿಎಂ ಡಿಸಿಎಂ ದೆಹಲಿಗೆ ಹೋಗಿದ್ದಾರೆಇನ್ನು ಎರಡು ಮೂರು ದಿನದಲ್ಲಿ ನೇಮಕ ಆಗಬಹುದು . ನಾನು ನನಗೆ ನಿಗಮ ಮಂಡಳಿ ಕೊಡಿ‌ ಅಂತಾ ಕೇಳಿಲ್ಲ ಎಂದು ಸ್ಪಷ್ಟಪಡಿಸಿದರು.

ಲೋಕಸಭೆ ಸ್ಪರ್ಧೆ ವಿಚಾರ

ಲೋಕಸಭೆ ಸ್ಥಾನಕ್ಕೆ ತಾನು ಸ್ಪರ್ಧಿಸುವುದಾಗಿ ಈ ಹಿಂದೆ ಗೋಪಾಲ ಕೃಷ್ಣ ಬೇಳೂರು ಹೇಳಿದ್ದರು. ಆದರೆ ಇಂದು ಮಾಧ್ಯಮಗಳಿಗೆ ಪಕ್ಷದಲ್ಲಿ  ಹಲವರು ಆಕಾಂಕ್ಷಿ‌ ಇದ್ದಾರೆ ಎನ್ನುವ ಮೂಲಕ ಒಂದು ಹೆಜ್ಜೆ ಹಿಂದಿಟ್ಟುರುವ ಬಗ್ಗೆ ಅನುಮಾನ ಮೂಡಿಸಿದೆ.

ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಶಾಸಕ ಸಂಗಮೇಶ್ವರ ಹಾಗು ಬೇಳೂರು ಗೋಪಾಲಕೃಷ್ಣ ಮೂವರು ಕುಳಿತು ಚರ್ಚಿಸುವಂತೆ ಮುಖಂಡರು ಹೇಳಿದ್ದಾರೆ. ಮೂರು‌ ಜನ ಕುಳಿತು ಚರ್ಚೆ ಮಾಡಿ ಪಟ್ಟಿ ಕೊಡಿ ಅಂದಿದ್ದಾರೆ. ಹಾಗೆ ಮಾಡಲಿದ್ದೇವೆ ಎಂದರು.

ಬಿಜೆಪಿ ಪ್ರತಿಭಟನೆ ವಿಚಾರ

ಬಿಜೆಪಿ ವಿಪಕ್ಷವಾಗಿ ಪ್ರತಿಭಟನೆ ಮಾಡುವುದರಲ್ಲಿ ತಪ್ಪಿಲ್ಲ. ಆದರೆ ಅವರು ಎಲ್ಲದಕ್ಕೂ‌ ಪ್ರತಿಭಟನೆ ಮಾಡ್ತಾರೆ. ರಾಮ ಮಂದಿರ ಉದ್ಘಾಟನೆಗೆ ಸಿಎಂಗೆ ಆಹ್ವಾನ ಇಲ್ಲದ ವಿಚಾರದ ಬಗ್ಗೆಯೂ ಪ್ರಸ್ತಾಪಿಸಿದ ಶಾಸಕರುಆಹ್ವಾನ ಕೊಡದಿದ್ದರೆ ಬೇಜಾರಿಲ್ಲ ಎಂದಿದ್ದಾರೆ.

ನಾವು ರಾಮನ ಭಕ್ತರೇ
ಇಲ್ಲಿಯೇ ನಿಂತುಕೊಂಡು ಶ್ರೀರಾಮ ಅಂತಾ ಕೈ ಮುಗಿಯುತ್ತೇವೆ.ದೇವರು ಎಲ್ಲರಿಗು ದೇವರೆ ಅವರು ಕೈ ಮುಗಿಯುತ್ತಾರೆ‌ ನಾವು ಕೈ ಮುಗಿಯುತ್ತೇವೆ ಎಂದು ತಿಳಿಸಿದರು.

ಗೂಂಡಾ ರಾಜ್ಯ ಆಗ್ತಿದೆ ಬಿಜೆಪಿ ಶಾಸಕರ ಆರೋಪ ವಿಚಾರದ ಬಗ್ಗೆಯೂ ಮಾತನಾಡಿದ ಅವರು, ನಮ್ಮ ಕಾಲದಲ್ಲಿ ಗೂಂಡಾ ರಾಜ್ಯ ಆಗಿತ್ತಾ, ಯಾರು ಕಾಲದಲ್ಲಿ ಗೂಂಡಾ ರಾಜ್ಯ ಆಗಿತ್ತು. ಗೂಂಡಾ ರಾಜ್ಯ ಆಗಿದ್ದಕ್ಕೆ ಜನ 65 ಕ್ಕೆ‌ ಕೂರಿಸಿದರು ಎಂದು ಟಾಂಗ್ ಕೊಟ್ಟರು.

ಮಧು ಬಂಗಾರಪ್ಪ ಚೆಕ್ ಬೌನ್ಸ್ ಪ್ರಕರಣ ವಿಚಾರ

ಸಚಿವ ಮಧು ಬಂಗಾರಪ್ಪ ನವರ ಚೆಕ್ ಬೌನ್ಸ್ ವಿಚಾರದಲ್ಲಿ  ಕೋರ್ಟ್ ನಲ್ಲಿ ತೀರ್ಮಾನ ಆದಾಗ ಆಪಾದನೆ ಬರುತ್ತವೆ. ಈ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ ಈ ಬಗ್ಗೆ ನಾನು ಏನು ಮಾತನಾಡಲ್ಲ ಎಂದರು.

40 ಸಾವಿರ‌ ಕೋಟಿ ಹಗರಣ ಆಗಿದೆ ಅಂತಾ ಯತ್ನಾಳ್ ಹೇಳಿದ್ದಾರೆ. ಅದರ ಬಗ್ಗೆ ತನಿಖೆ ನಡೆಸಿ. ಪಿಎಸ್ ಐ ಹಗರಣದಲ್ಲಿ‌ ವಿಜಯೇಂದ್ರ ಹೆಸರು ಕೇಳಿ ಬಂದಿದೆ. ಈ ಬಗ್ಗೆ ತನಿಖೆ ನಡೆಸಲಿ ಎಂದರು.

ಇದನ್ಬೂ ಓದಿ-https://suddilive.in/archives/6099

Related Articles

Leave a Reply

Your email address will not be published. Required fields are marked *

Back to top button