ಕ್ರೈಂ ನ್ಯೂಸ್

ಮೇಘಶ್ರೀಯ ಸಾವು-ಶಾಲೆಯ ಪ್ರಾಂಶುಪಾಲರು ಸೇರಿ ಎಂಟು ಜನರ ವಿರುದ್ಧ ಎಫ್ಐಆರ್

ಸುದ್ದಿಲೈವ್/ಶಿವಮೊಗ್ಗ

ನಿನ್ನೆ ಕಾಲು ಜಾರಿ ಬಿದ್ದು ಪ್ರಾಣ ಕಳೆದುಕೊಂಡ 17 ವರ್ಷದ ವಿದ್ಯಾರ್ಥಿನಿ ಮೇಘಶ್ರೀಯ ಸಾವಿಗೆ ಹೆಚ್ಚಿನ ಅಂಕಗಳಿಸಲು ಒತ್ತಡ ಹೇರುತ್ತಿದ್ದ ಶಾಲೆಯ ಪ್ರಾಂಶುಪಾಲ ಗುರುರಾಜ್ ಸೇರಿ ಎಂಟು ಜನರ ಹೆಸರು ಈಗ ಎಫ್ಐಆರ್ ನಲ್ಲಿ ದಾಖಲಾಗಿದೆ.

ಹೆಚ್ಚಿನ ಅಂಕ ಗಳಿಸದೆ ಇದ್ದರೆ ಶಾಲೆಯ ಹೆಸರು ಹಾಳಾಗಲಿದೆ ಎಂದು ಒತ್ತಡಹಾಕುತ್ತಿದ್ದ ಕಾಲೇಜಿನ ಪ್ರಾಂಶುಪಾಲ, ಶಿಕ್ಷಕ ಪ್ರಫುಲ್ಲಾ, ದಿವ್ಯಾ, ಮಧು, ಹಾಗೂ ಹಾಸ್ಟೆಲ್ ನ ವಾರ್ಡನ್ ಗಳಾದ ವಿಮ, ಪ್ರಿಯಾಂಕ, ದೀಪಕ್, ಮತ್ತು ಸುಜಯ್ ರವರ ವಿರುದ್ಧ ಮೇಘಶ್ರೀಯ ತಂದೆ ಓಂಕಾರಯ್ಯ ಎಫ್ಐಆರ್ ನಲ್ಲಿ ದೂರು ದಾಖಲಿಸಿದ್ದಾರೆ.

ಯಾವಾಗ ಮೇಘಶ್ರೀ ಕಾಲೇಜಿನ ಕಟ್ಟಡದಿಂದ ಕೆಳಗೆ ಬಿದ್ದಾಗ  ತಂದೆ ಓಂಕಾರಯ್ಯ ಚನ್ನಗಿರಿಯ ಚನ್ನಾಪುರ ಗ್ರಾಮದಲ್ಲಿರುವ ನಾಲ್ಕು ಎಕರೆ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರು. ಮಗಳು ಕಾಲೇಜಿನ ಎರಡನೇ ಮಹಡಿಯಿಂದ ಕಾಲುಜಾರಿ ಬಿದ್ದಿದ್ದಾಳೆ.  ಸ್ವಲ್ಪ ಹೊಡೆತಬಿದ್ದಿದೆ ಮೆಗ್ಗಾನ್ ಗೆ ದಾಖಲಿಸಲಾಗಿದೆ ಬನ್ನಿ ಎಂದು ಕಾಲೇಜಿನ ಕಡೆಯಿಂದ ಕರೆ ಮಾಡಿದ್ದಾರೆ.

ಆದರೆ ಸ್ಥಳಕ್ಕೆ ಬಂದು ನೋಡಿದಾಗ ಮೇಘನ ಎರಡನೇ ಮಹಡಿಯಿಂದ ಬಿದ್ದಿದ್ದಲ್ಲ ಐದನೇ‌ಮಹಡಿಯಿಂದ ಬಿದ್ದಿರುವುದು ತಿಳಿದು ಬಂದಿದೆ. ಅಲ್ಲದೆ ಮೊನ್ನೆ ಭಾನುವಾರ ಮಗಳಿಗೆ ಕರೆ ಮಾಡಿದಾಗ ಮಗಳು ಓದಿಗಾಗಿ ಜೆಚ್ಚಿನ ಒತದತಡ ಹಾಕುತ್ತಿರುವುದಾಗಿ ಪೋಷಕರಿಗೆ ತಿಳಿಸಿದ್ದಾರೆ.

ಆದರೆ ಮಗಳಿಗೆ ಧೈರ್ಯತುಂಬಿದ ಪೋಷಕರು ನಿನಗೆ ಏನೂ ಆಗೊಲ್ಲ. ನಿನ್ನೊಂದಿಗೆ ನಾವಿದ್ದೇವೆ ಎಂದು ಧೈರ್ಯತುಂಬಿದರೂ ನಿನ್ನೆಯ ವರೆಗೆ ಯಾವುದೇ ಪ್ರಯೋಜನವಾಗಿಲ್ಲ. ವಿದ್ಯಾರ್ಥಿನಿ ಜೀವ ಕಳೆದುಕೊಂಡಿದ್ದಾಳೆ.

ಓದುವುದೇ ಜೀವನ ಮಾಡಿಕೊಂಡಿರುವ ಕಾಲೇಜಿನ ವರ್ತನೆಯಿಂದ ಮಗು ಪ್ರಾಣ ಕಳೆದುಕೊಂಡಿರುವುದು ಎಫ್ಐಆರ್ ನಿಂದ ತಿಳಿದು ಬಂದಿದೆ. ಎಫ್ಐಆರ್ ದಾಖಲಾಗುತ್ತಿದ್ದಂತೆ ಇಂತಹ ಪ್ರಕರಣದಲ್ಲಿ ಈ ಎಂಟು ಜನರು ಅಂದರ್ ಆಗಬೇಕಿತ್ತು. ಆದರೆ ನಿನ್ನೆ ನಡೆದ ಎಸ್ಪಿ ನೇತೃತ್ವದ ಸಭೆಯಲ್ಲಿ ಇವೆಲ್ಲದಕ್ಕೂ ಬ್ರೇಕ್ ಬಿದ್ದಿದೆ. ಆದರೂ ಈ ಪ್ರಕರಣದ ಆರೋಪಿಗಳ ವಿರುದ್ಧ ಏನಾಗಲಿದೆ ಎಂಬ ಕುತೂಹಲ ಮುಂದುವರೆದಿದೆ. ಕಾದು ನೋಡೋಣ

ಇದನ್ನೂ ಓದಿ-https://suddilive.in/archives/4372

Related Articles

Leave a Reply

Your email address will not be published. Required fields are marked *

Back to top button