ಕ್ರೈಂ ನ್ಯೂಸ್
ಚಾನೆಲ್ ನಲ್ಲಿ ತೇಲಿ ಬಂದ ಶವ

ಸುದ್ದಿಲೈವ್/ಶಿವಮೊಗ್ಗ

ನೂರು ಅಡಿ ರಸ್ತೆ ನಿರ್ಮಲ ಆಸ್ಪತ್ರೆ ಬಳಿ ಚಾನೆಲ್ ನಲ್ಲಿ ಅಪರಿಚಿತ ಶವವೊಂದು ತೇಲಿಬಂದಿದ್ದು ಮೆಗ್ಗಾನ್ ಮರಣೋತ್ತರ ಪರೀಕ್ಷೆಗೆ ಸಾಗಿಸಲಾಗಿದೆ.
ಹಳೆಯ ಲಕ್ಷ್ಮೀ ಚಲನ ಚಿತ್ರ ಮಂದಿರದ ಬಳಿಯ ಚಾನೆಲ್ ನಲ್ಲಿ ಅಪರಿಚಿತ ಶವವೊಂದು ತೇಲಿ ಬಂದಿದೆ. ಶವ ತೇಲಿ ಬಂದಿರುವುದನ್ನ ಸಾರ್ವಜನಿಕರು ನೋಡಿ ಜಯನಗರ ಪೊಲೀಸ್ ಠಾಣೆಗೆ ತಿಳಿಸಿದ್ದಾರೆ.
ಸ್ಥಳಕ್ಕೆ ಬಂದ ಪೊಲೀಸರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ತಿಳಿಸಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಚಾನೆಲ್ ನಲ್ಲಿದ್ದ ಶವವನ್ನ ಹೊರಗೆ ತೆಗೆದು ಮೆಗ್ಗಾನ್ ಶವ ಪರೀಕ್ಷೆಗೆ ರವಾನಿಸಲಾಗಿದೆ. ಸಧ್ಯಕ್ಕೆ ಶವದ ಪತ್ತೆಯಾಗಿಲ್ಲ. ಶವದ ಮೇಲೆ ಯಾವುದೇ ಗಾಯಗಳು ಸಧ್ಯಕ್ಕೆ ಕಂಡು ಬಂದಿಲ್ಲ.
ಚಾನೆಲ್ ನಲ್ಲಿ ಯಾಕೆ ತೇಲಿ ಬಂತು, ಇದು ಆತ್ಮಹತ್ಯೆನಾ ಅಥವಾ ಬೇರೆ ರೀತಿಯ ಸಾವಾಗಿದೆಯಾ ಎಂಬುದಕ್ಕೆ ಪೊಲೀಸರ ತನಿಖೆಯಿಂದಲೇ ತಿಳಿದು ಬರಬೇಕಿದೆ.
ಇದನ್ನೂ ಓದಿ-https://suddilive.in/archives/1317
