ಸ್ಥಳೀಯ ಸುದ್ದಿಗಳು

ಬಟ್ಟೆ ದೇವರ ಕೊಡುಗೆ-ಸ್ಯೆಯದ್ ಮುಜೀಬುಲ್ಲಾಹ್ ಖಾಸ್ಮಿ

ಸುದ್ದಿಲೈವ್/ಶಿವಮೊಗ್ಗ

ಬಟ್ಟೆ ದೇವರ ಕೊಡುಗೆ , ಅದನ್ನು ಸರಿಯಾಗಿ ಬಳಸಿ, ಟೈಲರಿಂಗ್ ಕೌಶಲ್ಯವನ್ನು ಜನಪ್ರಿಯಗೊಳಿಸಲು ಸಫಾ ಬೈತುಲ್ ಮಾಲ್ ಅವರು ಕೈಗೊಂಡಿರುವ ಕ್ರಮವು ಶ್ಲಾಘನೀಯವಾಗಿದೆ ಎಂದು ಮದರೆಸಾ ಮಝ್ಹಾರುಲ್ ಉಲೂಮ್ ನ ಪ್ರಿನ್ಸಿಪಾಲ್ ಮುಫ್ತಿ ಸ್ಯೆಯದ್ ಮುಜೀಬುಲ್ಲಾಹ್ ಖಾಸ್ಮಿ ತಿಳಿಸಿದ್ದಾರೆ.

ಅವರು ಇಂದು ಸಫಾ ಬೈತುಲ್ ಮಾಲ್ ವತಿಂದ ಟೈಲರಿಂಗ್ ತರಬೇತಿ ಪಡೆದ 80 ಕ್ಕೂ ಹೆಚ್ಚು ಮಹಿಳೆಯರಿಗೆ ಪ್ರಮಾಣಪತ್ರಗಳನ್ನು ವಿತರಿಸುವ ಸಂಧರ್ಭದಲ್ಲಿ ಮಾತನಾಡುತ್ತ . ಸಫಾ ಬೈತುಲ್ ಮಾಲ್ ವತಿಯಿಂದ ನಡೆಯುತ್ತಿರುವ ಈ ಕೆಲಸ ಶ್ಲಾಘನೀಯ ಕೆಲ್ಸವಾಗಿದೆ, ಇಂದು ಜನರು ಒಳ್ಳೆ ಬಟ್ಟೆಗಳನ್ನು ಧರಿಸಲು ಆಸಕ್ತಿ ಹೊಂದಿದ್ದಾರೆ, ಅಂತಹ ತರಬೇತಿ ಪಡೆದ ಮಹಿಳೆಯರು ಉತ್ತಮ ಬಟ್ಟೆಗಳನ್ನು ತಯಾರಿಸುವ ಮೂಲಕ ಜನರನ್ನು ಒಳಿತಿನ ಕಡೆಗೆ ಕೊಂಡೊಯ್ಯಬಹುದು ಎಂದು ಹೇಳಿದರು.

ಮಹಿಳಾ ಟೈಲರಿಂಗ್ ತರಬೇತಿ ತನ್ನದೇ ಆದ ಕೆಲಸವನ್ನು ಪಡೆಯುತ್ತಿದ್ದಾರೆ, ಇದು ಸಂತೋಷದ ವಿಷಯ.ಈ ಸಂದರ್ಭದಲ್ಲಿ ಸೋನಾಗ್ರೂಪ್ಸ್ ಎಂಡಿ ಇಕ್ಬಾಲ್ ಹಬೀಬ್ ಸೇಠ್ ಅವರು ತರಬೇತಿ ಪಡೆದು ಸ್ವಂತ ಉದ್ಯೋಗ ಪಡೆಯಲು ಬಯಸುವ ಮಹಿಳೆಯರಿಗೆ ನಮ್ಮ ಗುಡ್ ವಿಲ್ ಸಹಕಾರಿ ಸಂಘದಿಂದ ಬಡ್ಡಿ ರಹಿತ ಸಾಲ ನೀಡಲಾಗುವುದು ಎಂದು ಘೋಷಿಸಿದರು.

ಮುಫ್ತಿ ಇಫ್ತಿಕಾರ್ ಅಹಮದ್ ಖಾಸ್ಮಿ ಅವರ ಪ್ರಾರ್ಥನೆಯೊಂದಿಗೆ ಸಭೆ ಮುಕ್ತಾಯವಾಯಿತು. ಈ ಸಂಧರ್ಭದಲ್ಲಿ ಸಫಾ ಸಂಘದ ಮೌಲಾನ ಉಸ್ಮಾನ್ ರಿಷಾದಿ, ಮೌಲಾನ ಫಾರೂಕ್ ರಿಷಾದಿ, ಹಾಜಿ ಜಾಹಿರ್, ಮೌಲಾನ ಸಾಲಿಮ್, ಹಾಫಿಜ್ ಇನಾಯತುಲ್ಲಾಹ್, ಹಾಫಿಜ್ ಬಷೀರ್ ಇದ್ದರು.

ಇದನ್ನೂ ಓದಿ-https://suddilive.in/archives/4364

Related Articles

Leave a Reply

Your email address will not be published. Required fields are marked *

Back to top button