ರಾಜಕೀಯ ಸುದ್ದಿಗಳು

ಹಣಗರೆ ಕಟ್ಟೆಯಲ್ಲಿ ಪ್ರತಿಭಟನೆ

ಸುದ್ದಿಲೈವ್/ಶಿವಮೊಗ್ಗ

ಭೂತರಾಯ ಚೌಡೇಶ್ವರಿ ದೇವಾಲಯ, ಹಜರತ್ ಸೈಯದ್ ಸಾದತ್ ದರ್ಗಾದ ಹುಂಡಿ ಹಣ ಎಣಿಕೆ ಮಾಡದಂತೆ ಕನ್ನಂಗಿ ಗ್ರಾಮ ಪಂಚಾಯಿತಿ ಅಧ್ಯಕ್ಷರಿಂದ ಪ್ರತಿಭಟನೆ ನಡೆದಿದೆ.

ಮೂರು ತಿಂಗಳಿಗೊಮ್ಮೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಹಣಗೆರೆ ಕಟ್ಟೆಯ ಭೂತರಾಯ ಚೌಡೇಶ್ವರಿ ದೇವಾಲಯ  ಹಜರತ್ ಸೈಯದ್ ಸಾದತ್ ದರ್ಗಾದ ಹುಂಡಿ ಒಡೆದು ಎಣಿಕೆ ನಡೆಯುತ್ತದೆ. ಆದರೆ ಇವತ್ತು ಎಣಿಕೆ ಮಾಡಲು ಬಂದ ಇಲಾಖೆ ಸಿಬ್ಬಂದಿಗಳಿಗೆ, ಕನ್ನಂಗಿ ಗ್ರಾಮ‌‌ ಪಂಚಾಯ್ತಿ ಅಧ್ಯಕ್ಷರಿಂದ ಪ್ರತಿಭಟನೆ ನಡೆದಿದೆ.

ಮುಜರಾಯಿ‌ ಇಲಾಖೆ ವ್ಯಾಪ್ತಿಗೆ ಸೇರಿರುವ ದೇವಸ್ಥಾನ ಹಾಗು ದರ್ಗಾ ಎರಡೂ ಒಟ್ಟಿಗೆ ಇದೆ. ಈ ದೇವಸ್ಥಾನ ಭಾವೈಕ್ಯತೆಯ ಸಂಕೇತವೂ ಹೌದು. ಆದರೆ ರಾಘವೇಂದ್ರರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಹಲವು  ಬೇಡಿಕೆಗಳನ್ನ ಇಡಲಾಗಿದೆ.‌ ದೇವಸ್ಥಾನ ಆವರಣದಲ್ಲಿ ಸ್ವಚ್ಛತಾ ಕಾರ್ಯ ಇಲ್ಲ.‌ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಇಲ್ಲ.‌ ದೇವಸ್ಥಾನ – ದರ್ಗಾ ಬಳಿ ಬಸ್ ನಿಲ್ದಾಣ ಇಲ್ಲ ಎಂಬುದು ಅವರ ಬೇಡಿಕೆಗಳಾಗಿವೆ.

ಇನ್ನೊಂದು ಬೇಡಿಕೆ ಏನೆಂದರೆ,  ದೇವಸ್ಥಾನದ ಬ್ಯಾಂಕ್ ಅಕೌಂಟ್ ಅನ್ನು ಕನ್ನಂಗಿಯ ಖಾಸಗಿ ಬ್ಯಾಂಕ್ ನಲ್ಲಿ ವ್ಯವಹಾರ ನಡೆದಿದ್ದು ಅದನ್ನ ಸರ್ಕಾರ ಮುಜರಾಯಿ ಇಲಾಖೆಯನ್ನ ರಾಷ್ಡ್ರೀಯ ಬ್ಯಾಂಕ್ ನಲ್ಲಿ ಇರುವುದರಿಂದ ಕನ್ನಂಗಿಯಿಂದ ತೀರ್ಥಹಳ್ಳಿಗೆ ಬ್ಯಾಂಕ್ ಅಕೌಟ್ ಸಿಪ್ಟ್ ಆಗಿದೆ. ಈ ಅಕೌಂಟ್ ಕನ್ನಂಗಿಯಲ್ಲೇ ಇರಬೇಕು ಎಂಬುದು ಪ್ರತಿಭ.  ಗ್ರಾಮೀಣ ಬ್ಯಾಂಕ್ ನಿಂದ ತೀರ್ಥಹಳ್ಳಿ ಬ್ಯಾಂಕ್ ಗೆ ವರ್ಗಾವಣೆ ಮಾಡಲಾಗಿದೆ

ಬ್ಯಾಂಕ್ ಅಕೌಂಟನ್ನ ತೀರ್ಥಹಳ್ಳಿಗೆ ವರ್ಗಾಯಿಸದೆ  ಕನ್ನಂಗಿಯಲ್ಲಿಯೇ ಉಳಿಯಬೇಕು ಎಂಬುದು ಪ್ರಮುಖ ಬೇಡಿಕೆಯಾಗಿದೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಬರುವಂತೆ ಪ್ರತಿಭಟನಾಕಾರರ ಆಗ್ರಹಿಸಲಾಗಿದೆ. ಸ್ಥಳಕ್ಕೆ ಮುಜರಾಯಿ ತಹಶೀಲ್ದಾರ್ ಪ್ರದೀಪ್, ತೀರ್ಥಹಳ್ಳಿ ಡಿವೈಎಸ್ ಪಿ ಭೇಟಿ ನೀಡಿದ ನಂತರ ಪ್ರತಿಭಟನಾಕಾರರು ಪ್ರತಿಭಟನೆಯನ್ನ ಹಿಂಪಡೆಯಲಾಗಿದೆ.

ಇದನ್ನೂ ಓದಿ-https://suddilive.in/archives/7048

Related Articles

Leave a Reply

Your email address will not be published. Required fields are marked *

Back to top button