ರಾಜಕೀಯ ಸುದ್ದಿಗಳು

ಸವಳಂಗ ರಸ್ತೆಯ ರೈಲ್ವೆ ಮೇಲ್ಸೇತುವೆ ಲೋಕಾರ್ಪಣೆ

ಸುದ್ದಿಲೈವ್/ಶಿವಮೊಗ್ಗ

ಕಳೆದ ಎರಡು ವರ್ಷದಿಂದ ನಡೆಯುತ್ತಿದ್ದ ಸವಳಂಗ ರಸ್ತೆ ರೈಲ್ವೆ ಮೇಲು ಸೇತುವೆ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕ ಬಳಕೆಗೆ ಅವಕಾಶ ಮಾಡಿಕೊಡಲಾಗಿದೆ. ವಾಹನಗಳ ಸಂಚಾರಕ್ಕೂ ಮೊದಲು ಈ ಮೇಲುಸೇತುವೆಯ ಮೇಲೆ ಸಂಸದ ರಾಘವೇಂದ್ರ ಫ್ಲೆಕ್ಸ್ ರಾರಾಜಿಸಿವೆ. ಆದರೆ ಇದನ್ನ‌ ಹೆಚ್ಚಿನ ಪ್ರಚಾರ ಪಡೆಯದೆ ಲೋಕಾರ್ಪಣೆಗೊಂಡಿರುವುದು ಕುತೂಹಲ ಮೂಡಿಸಿದೆ.

ದಿಡೀರ್ ಬೆಳವಣಿಗೆಯಲ್ಲಿ ವಿದ್ಯಾನಗರದ ರೈಲ್ವೆ ಮೇಲುಸೇತುವೆಯ ಬಳಕೆಯ ಬದಲು ಸವಳಂಗ ರಸ್ತೆಯ ಮೇಲು ಸೇತುವೆ ಬಳಕೆಗೆ ಮಾಡಿಕೊಡಲಾಗಿದೆ. ಇಂದು ಸಂಜೆಯ ನಂತರ ವಾಹನ ಸಂಚಾರಕ್ಕೆ ಬಿಡುತ್ತಿದ್ದಂತೆ ಒದ್ದಾಡಿಕೊಂಡು ಹೋಗುತ್ತಿದ್ದ ಸವಾರರು ಖುಷಿಯಾಗಿ ಮೇಲ್ಸೇತುವೆಯಲ್ಲಿ ಸಂಚರಿಸಿದ್ದಾರೆ.

ರೈಲ್ವೆ ಗೇಟು ಹಾಕಿದ ವೇಳೆ ಪರದಾಡುವಂತಾಗುತ್ತಿದ್ದ ಈ ಮಾರ್ಗ ಅನುಕೂಲವಾದರೂ ಉಷ ನರ್ಸಿಂಗ್ ಹೋಂ ಬಳಿ ವೃತ್ತ ನಿರ್ಮಾಣವಾಗುವುದು ತಡವಾದರೆ ಇಲ್ಲಿ ಮತ್ತೊಂದು ದುರಂತ ಸಂಭವಿಸುವ ಸಾಧ್ಯತೆ ಹೆಚ್ಚಿದೆ.

ಶಿವಮೊಗ್ಗದ ಸವಳಂಗ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟ ಬೆನ್ನಲ್ ಸಂಸದ ರಾಘವೇಂದ್ರ ಫೇಸ್ ಬುಕ್ ನಲ್ಲಿ ಹೀಗೆ ಬರೆದುಕೊಂಡಿದ್ದಾರೆ.  ಎಲ್.ಸಿ ನಂ 49 ರಲ್ಲಿ ಸುಮಾರು 51 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾದ ಸುಸಜ್ಜಿತ ರೈಲ್ವೇ ಮೇಲ್ಸೇತುವೆ ಮತ್ತು ರೈಲ್ವೇ ಕೆಳ ಸೇತುವೆಯ ಕಾಮಗಾರಿ ಪೂರ್ಣಗೊಂಡಿದ್ದು, ಸಾರ್ವಜನಿಕರು ಬಳಕೆಗೆ ಅವಕಾಶ ನೀಡಲಾಗಿದೆ.

ಈ ಒಂದು ಮೇಲ್ಸೇತುವೆ ಕಾಮಗಾರಿಯನ್ನು 2022ರ ಫೆಬ್ರವರಿಯಂದು ಚಾಲನೆ ನೀಡಲಾಗಿತ್ತು. ಅವಧಿಗೂ ಮುನ್ನ ಕಾಮಗಾರಿ ಮುಕ್ತಾಯವಾಗಿ ಸಾರ್ವಜನಿಕ ಬಳಕೆಗೆ ಲೋಕಾರ್ಪಣೆ ಮಾಡುತ್ತಿರುವುದು ಸಂತಸದ ಸಂಗತಿಯಾಗಿದೆ. ಈ ಕಾಮಗಾರಿ ಪೂರ್ಣಗೊಳಿಸಲು ಸಹಕರಿಸಿದ ಪ್ರಧಾನಮಂತ್ರಿ ಶ್ರೀ Narendra Modi  ಜೀ‌, ಶ್ರೀ Piyush Goyal  ji, ಶ್ರೀ BS Yediyurappa ಹಾಗೂ ರೈಲ್ವೆ ಸಚಿವರಾದ ಶ್ರೀ Ashwini Vaishnaw  ಅವರಿಗೆ ಧನ್ಯವಾದಗಳನ್ನ ತಿಳಿಸಿದ್ದಾರೆ.

ಕೆಲವು ದಿನಗಳ ಕಾಲ ಸೇತುವೆ ಮೇಲೆ ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳ ಓಡಾಟಕ್ಕೆ ಮಾತ್ರ ಅವಕಾಶ ಇರಲಿದ್ದು, ಇನ್ನ ಕೆಲವೇ ದಿನಗಳಲ್ಲಿ ಲಘು ಮತ್ತು ಭಾರಿ ವಾಹನಗಳ ಓಡಾಟಕ್ಕೆ ಅವಕಾಶ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ-https://suddilive.in/archives/7793

Related Articles

Leave a Reply

Your email address will not be published. Required fields are marked *

Back to top button