ರಾಜಕೀಯ ಸುದ್ದಿಗಳು

ಹಿಂದುಳಿದ ವರ್ಗಗಳ ಬೃಹತ್ ಸಮಾವೇಶದಲ್ಲಿ ಈಶ್ವರಪ್ಪನವರ ರಾಜೀನಾಮೆ ಮಾತು?!

ಸುದ್ದಿಲೈವ್/ಶಿವಮೊಗ್ಗ

ಕೇವಲ ರಾಘಣ್ಣನಿಗೆ ಮತ ಹಾಕುತ್ತಿದ್ದೇವೆ ಎಂಬ ಮನಸ್ಥಿತಿಯಿಂದ ಮತಹಾಕಬೇಡಿ. ಧರ್ಮ ಉಳಿಸುತ್ತಿದ್ದೇವೆ ಹಾಗೂ ದೇಶವನ್ನ ಉಳಿಸುವುದಕ್ಕಾಗಿ ಬಿಜೆಪಿಗೆ ಮತಹಾಕಬೇಕುವಂತೆ ಮಾಜಿ ಸಚಿವ ಈಶ್ವರಪ್ಪ ಕರೆ ನೀಡಿದರು.

ಅವರು ಶಿಕಾರಿಪುರದ ಮಾರಿಕಾಂಬ ಬಯಲು ಮಂದಿರದ ಮೈದಾನದಲ್ಲಿ ತಾಲೂಕು ಬಿಜೆಪಿಯ ಹಿಂದುಳಿದ ವರ್ಗಗಳ ಬೃಹತ್  ಸಮಾವೇಶವನ್ನ ಉದ್ಘಾಟಿಸಿ ಮಾತನಾಡಿ, ನೀವು ಬಿಜೆಪಿಯ ಸಂಸದ ರಾಘವೇಂದ್ರರನ್ನ ಗೆಲ್ಲಿಸುವ ಮೂಲಕ ಪ್ರಧಾನಿ ಮೋದಿಯನ್ನ ಗೆಲ್ಲಿಸುವಂತೆ ಕೋರಿದರು.‌

ಬಿ.ವೈ‌.ರಾಘವೇಂದ್ರ ಸಂಸದರಾದ ಮೇಲೆ ಅತಿಹೆಚ್ಚು ಯೋಜನೆಯನ್ನ ಶಿವಮೊಗ್ಗ ಜಿಲ್ಲೆಗೆ ತಂದಿದ್ದಾರೆ. ಇದನ್ನೂ ಕಾಂಗ್ರೆಸ್ ಪಕ್ಷದ ನಾಯಕರೂ ಒಪ್ಪಿಕೊಳ್ಳುತ್ತಾರೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಯಾವುದೇ ಸಮುದಾಯದವರಿಗೆ ಅನುದಾನದಿಂದ ವಂಚಿತರಾಗಿಲ್ಲ  ಎಂದು ಮಾಜಿ ಸಚಿವ ಈಶ್ವರಪ್ಪ ತಿಳಿಸಿದರು.

27% ಮೀಸಲಾತಿಯನ್ನ ಶಿಕ್ಷಣದಲ್ಲಿ ನೀಡಿದ ಮೊದಲ ಪ್ರಧಾನಿ ನರೇಂದ್ರ ಮೋದಿಯವರಾಗಿದ್ದಾರೆ. ಕೇಂದ್ರದಲ್ಲಿ ಮತ್ತೆ ಬಿಜೆಪಿ ಬರಬೇಕೆಂದರೆ ಜನರಿಗೆ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಏನೇನು ಕೊಡುಗೆ ನೀಡಿದೆ ಎಂಬುದನ್ನ ಮನವರಿಕೆ ಮಾಡಿಕೊಡಬೇಕಿದೆ. ಕಾಂಗ್ರೆಸ್ 60 ವರ್ಷದಲ್ಲಿ ಏನು ಮಾಡಿದೆ ಎಂಬುದನ್ನೂ ನಮ್ಮ ಕಾರ್ಯಕರ್ತರು ಮನವರಿಕೆ ಮಾಡಿಸಬೇಕು. ಅದರ ಮೂಲಕ ಮತಗಳನ್ನಾಗಿ ಪರಿವರ್ತಿಸಬೇಕು ಎಂದರು.

ಮೋದಿಯವರ ಕ್ಯಾಬಿನೇಟ್ ನಲ್ಲಿ 29 ಹಿಂದುಳಿದ ವರ್ಗದ ನಾಯಕರನ್ನ ಸಚಿವರನ್ನಾಗಿ ಮಾಡಲಾಗಿದೆ. ವಿಪಕ್ಷಗಳು ನರೇಂದ್ರ ಮೋದಿ ಯಾವ ಸಮುದಾಯ ಎಂದು ಕೇಳುತ್ತಾರೆ. ಮೋದಿಯವರು ಹಿಂದುಳಿದ ಜನಾಂಗ ಎಂದಿದ್ದರು. ಅದನ್ನ ರಾಹುಲ್ ಗಾಂಧಿ ಅವರು ಮೋದಿಯವರು ಹಿಂದುಳಿದ ಜನಾಂಗದವರು ಅಲ್ಲ ಎಂದಿದ್ದರು. ಹಾಗಾದರೆ ನಿಮ್ಮ ಜನಾಂಗ ಯಾವುದು ನಿಮ್ಮ ಅಜ್ಜ ಅಜ್ಜಿ ತಾತ, ಮುತ್ತಾತರವರ ಸಮುದಾಯ ಯಾವುದು ಎಂದು ರಾಹುಲ್ ಗಾಂಧಿಗೆ ಸವಾಲು ಎಸೆದರು.

ರಾಜೀನಾಮೆ ಮಾತು!

ಬಿಜೆಪಿ ಸರ್ಕಾರ ಬಂದ ನಂತರ ಹಿಂದುಳಿದ ಮತ್ತು ದಲಿತ ಸಮುದಾಯದ ಮಠಗಳಿಗೆ ಹೆಚ್ಚಿನ ಅನುದಾನ ನೀಡಿದ್ದೇವೆ. ನಾನು ಹಿಂದುಳಿದ ವರ್ಗಗಳ ಚಾಂಪಿಯನ್ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸವಾಲು ಎಸೆಯುತ್ತೇನೆ. ಹಿಂದುಳಿದ ವರ್ಗಗಳಿಗೆ ನೀವು ಎಷ್ಟು ಅನುದಾನ ನೀಡಿದ್ದೀರಿ. ನಾವು ಎಷ್ಟು ಅನುದಾನ ನೀಡಿದ್ದೇವೆ ಎಂಬುದಕ್ಕೆ ಚರ್ಚೆ ನಡೆಸಿದರೆ ಚರ್ಚೆಗೆ ಸಿದ್ದ ಎಂದರು.

ಒಂದು ಗುಲಗಂಜಿಯಷ್ಟು ಬಿಜೆಪಿಗಿಂತ ಹೆಚ್ಚು  ಸಾಧನೆಯನ್ನ ಕಾಂಗ್ರೆಸ್ ಮಾಡಿದರೆ ರಾಜೀನಾಮೆ ನೀಡಲು  ಸಿದ್ದ ಎಂದು ಅಚ್ಚರಿಯ ರೂಪದಲ್ಲಿ ಹೇಳಿಕೆ ನೀಡಿದರು. ಮಾಜಿ ಸಚಿವರು ಚುನಾವಣೆ ರಾಜಕೀಯದಿಂದ ದೂರ ಉಳಿದರೂ ಸಹ ರಾಜೀನಾಮೆ ಮಾತನಾಡಿರುವುದು ಅಚ್ಚರಿ ನೀಡಿದೆ. ಪಕ್ಷದಲ್ಲೂ ಅವರಿಗೆ ಸ್ಥಾನ ಮಾನ ಇಲ್ಲವಾದರೂ ರಾಜೀನಾಮೆಯ ಮಾತು ಕೇಳಿಬಂದಿದೆ.

ರಾಹುಲ್ ಗೆ ಟಾಂಗ್

ರಾಮ ಮಂದಿರ ಉದ್ಘಾಟನೆಯ ವೇಳೆ ರಾಹುಲ್ ಅವರು ದಲಿತ ಮತ್ತು ಹಿಂದುಳುದ ವರ್ಗಗಳನ್ನ ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ ಎಂದು ಜಾತಿಯ ವಿಷಬೀಜ ಬಿತ್ತಿದ್ದರು. ನಾವು ಬಿಜೆಪಿ ಕಾರ್ಯಕರ್ತರು ಜಾತಿ ಗೊತ್ತಿಲ್ಲ. ಈ ತಾಲೂಕು ಅಭಿವೃದ್ಧಿಗೆ ಸಂಸದರು ಮತ್ತು ಬಿಎಸ್ ವೈ ಕಾಣಿಕೆ ಇಲ್ಲ ಎಂದು ಬಿಂಬಿಸಲಾಗಿತ್ತು. ಬಿಎಸ್ ವೈ ಅವರನ್ನ ಕಡೆಗಾಣಿಸಲಾಗುತ್ತಿದೆ ಎಂದು ಬಿಂಬಿಸಲಾಗುತ್ತಿದೆ.

ಈಗ ಮರಿ ಹುಲಿ ವಿಜೇಂದ್ರ ರಾಜ್ಯಾಧ್ಯಕ್ಷರಾಗಿದ್ದಾರೆ.  ವಿಜೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾದ ಮೇಲೆ ಹುಲಿಯ ಹೊಟ್ಟೆಯಲ್ಲಿ ಹುಲಿಯೇ ಹುಟ್ಟಿದೆ ಎಂಬುದನ್ನ ಸಾಬೀತು ಪಡಿಸಿದ್ದಾರೆ. ಕಾಲಿಗೆ ಚಕ್ರ ಕಟ್ಟಿಕೊಂಡು ರಾಜ್ಯ ಪ್ರವಾಸ ಮಾಡಿದ್ದಾರೆ.

ಅಲ್ಪಸಂಖ್ಯಾತರು ಕಾಂಗ್ರೆಸ್ ಗೆ ಬೀಗರು

ಕಾಂಗ್ರೆಸ್ ಗೆ ಅಲ್ಪಸಂಖ್ಯಾತರು ಬೀಗರು. ಅದರ ಬಗ್ಗೆ ಮಾತನಾಡಲೊಲ್ಲ. ನಾವು ದಿನಬೆಳಿಗ್ಗೆ ಎದ್ದರೆ ಒಬಿಸಿ, ದಲಿತರ ಉದ್ದಾರದ ಬಗ್ಗೆ ಮಾತನಾಡುತ್ತೇವೆ. ಆದರೆ ಕಾಂಗ್ರೆಸ್ ಗೆ ಬೆಳಗಿನಿಂದ ಸಂಜೆಯವರೆಗೆ ಪಾಕಿಸ್ತಾನ್ ಗೆ ಜಿಂದಾಬಾದ್ ಎಂದು ಕೂಗುವುದರಲ್ಲೇ ಮುಳುಗಿದ್ದಾರೆ. ಅದು ಹೇಳಿದರು ಅದಕ್ಕೆ ಬೇರೆ ಹೇಳಿಕೆ ಕೊಡಲು ಮತ್ತಷ್ಟು ಜನ ಇದ್ದಾರೆ. ಹಾಗಾಗಿ ಬರುವ ಲೋಕ ಸಭಾ ಚುನಾವಣೆಯಲ್ಲಿ ತಕ್ಕ ಉತ್ತರ ಕೊಡಬೇಕಿದೆ ಎಂದರು.‌

ಈಗ ರಾಮ ಮಂದಿರ ಉದ್ಘಾಟನೆಯಾಗಿದೆ. ಮಥುರಾ ಮತ್ತು ಕಾಶಿಯಲ್ಲಿ ಮಂದಿರ ನಿರ್ಮಿಸಬೇಕಿದೆ. ಕಾಶಿ ವಿಶ್ವನಾಥನ ಮಸೀದಿ ಹಿಂದೂಗಳ ಕೈಗೆ ಬಂದೇ ಬರುತ್ತೆ. ಹೈಕೋರ್ಟ್ ಸಹ ಪೂಜೆಗೆ ಸಹಕರಿಸಲಾಗುತ್ತದೆ. ಶ್ರೀರಾಮ ಚಂದ್ರ, ಶ್ರೀಕೃಷ್ಣ ಇಬ್ಬರೂ ಹಿಂದುಳಿದ ವರ್ಗದ ದೇವರೆ ಆಗಿದ್ದಾರೆ ಎಂದರು.

ಇದನ್ನೂ ಓದಿ-https://suddilive.in/archives/9800

Related Articles

Leave a Reply

Your email address will not be published. Required fields are marked *

Back to top button