ಸ್ಥಳೀಯ ಸುದ್ದಿಗಳು

ಸಚಿವ ಮಧು ಬಂಗಾರಪ್ಪನವರ ಹುಟ್ಟುಹಬ್ಬ

ಸುದ್ದಿಲೈವ್/ಶಿವಮೊಗ್ಗ

ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ 57 ನೇ ವರ್ಷದ ಹುಟ್ಟುಹಬ್ಬವನ್ನ ಅಭಿಮಾನಿಗಳೊಂದಿಗೆ ಶಿವಮೊಗ್ಗದ ಸ್ವಗೃಹದಲ್ಲಿ ಆಚರಿಸಿಕೊಂಡರು. ಕೇಕ್ ಕಟ್ ಮಾಡಿ ಅಭಿಮಾನಿಗಳ ಜೊತೆ ಹುಟ್ಟುಹಬ್ಬದ ಸಂಭ್ರಮವನ್ನ ಪಟ್ಟರು.‌ ಈ ವೇಳೆ ನಟ ಡಾ.ಶಿವರಾಜ್ ಕುಮಾರ್ ಮತ್ತು ಪತ್ನಿ ಗೀತಾಶಿವರಾಜ್ ಕುಮರ್ ಭಾಗಿಯಾಗಿದ್ದರು‌

ಮೊದಲು‌ನಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ಬೆಳಿಗ್ಗೆ ಬೆಂಗಳೂರಿನಲ್ಲಿ ಅಭಿಮಾನಿಗಳು ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದರು.‌ ನಿನ್ನೆ ದಾವಣಗೆರೆಯಲ್ಲಿ ಮ್ಯೂಸಿಕಲ್ ನೈಟ್ಸ್ ರದ್ದಾದ ನಂತರ ಶಿವರಾಜ್ ಕುಮಾರ್ ನಮ್ಮೊಂದಿಗೆ ಬಂದಿದ್ದಾರೆ. ಸಂಜೆ ಸೊರಬದಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದರು.

ಅಭಿಮಾನಿಗಳು ನನ್ನೊಂದಿಗೆ ಪ್ರೀತಿಯಿಂದ ಕಂಡಿದ್ದಾರೆ. ಇನ್ನು ಮುಂದೆ ನಿಮ್ಮೊಂದಿಗೆಯಾವತ್ತೂ ಹಿಂತುರುಗಿ ನೋಡಲ್ಲ. ಹಿಂದೆ ಅನುಭವ ಮುಂದೆ ಗುರಿ ಇಟ್ಟುಕೊಂಡು ಸಾಗುವೆ ಎಂದು ಸಚಿವರು ಭರವಸೆ ನೀಡಿದರು.

ಬಿಜೆಪಿ ಸರ್ಕಾರ ಬೀಳುಸಲು ಯತ್ನಿಸುತ್ತಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಅನುಷ್ಠಾನವಾದ ಸರ್ಕಾರವನ್ನ ಬೀಳಿಸಿದ್ದಾರೆ. ಕೋಟಿ ಜನರ ಆಶೀರ್ವಾದ ಇದೆ. ಹಾಗಾಗಿ ಬಿಜೆಪಿಯವರ ಪ್ರಯತ್ನ ಸಫಲವಾಗೊಲ್ಲ ಎಂದರು.

ಬಂಗಾರಪ್ಪನವರು 2009 ರಲ್ಲಿ ಸೋತರು. 15 ವರ್ಷ ಆದ ಮೇಲೆ ಅವಕಾಶ ಮತ್ತೊಮ್ಮೆ ಲಭಿಸಿದೆ. ಬಂಗಾರಪ್ಪನವರ ಸೋಲನ್ನ ವಾಪಾಸ್ ತರಲಾಗುತ್ತದೆ. ಗೀತಾ ಅವರು ಕಾರ್ಯಕರ್ತರು. ಜಿಲ್ಲೆಯಲ್ಲಿ ಬಹುತೇಕರು ಅರ್ಜಿ ಹಾಕಿದ್ದಾರೆ. ಯಾರಿಗೆ ಟಿಕೇಟ್ ನೀಡಲು ವರಿಷ್ಠರು ತೀರ್ಮಾನಿಸುತ್ತಾರೋ ಅದು ಅವರಿಗೆ ಬಿಟ್ಟಿದ್ದು ಎಂದರು

ಕಾಂಗ್ರೆಸ್ ಸೇರ್ಪಡೆ ನಂತರ ಗೀತಾ ಜಾಸ್ತಿ ಪಕ್ಷದಲ್ಲಿ ಕಾಣಿಸಿಕೊಳ್ತಿಲ್ಲವೆಂಬ ಆರೋಪ ಕೇಳಿ ಬರುತ್ತಿತ್ತು. ಬಳ್ಳಾರಿಯಲ್ಲಿ ಶಕ್ತಿಯೋಜನೆಗೆ ಚಾಲನೆ ನೀಡಿದ್ದು ಗೀತಕ್ಕ ಅವರೆ. ಗೀತಕ್ಕ ಇಡೀ ರಾಜ್ಯದಲ್ಲಿ ಪ್ರವಾಸ ಮಾಡಲಿದ್ದಾರೆ ಎಂದರು.

ಗ್ಯಾರೆಂಟಿಗಳಿಂದಾಗಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಹೆಚ್ಚು ಮತ ಬಂದಿದೆ. 135 ಸ್ಥಾನ ಗೆದ್ವಿ. 9 ತಿಂಗಳ ಒಳಗೆ ಪಕ್ಷ ಅಧಿಕಾರಕ್ಕೆ ಬಂದ ನಂತರ 5 ಗ್ಯಾರೆಂಟಿ ಜಾರಿಗೆ ತಂದ್ವಿ. ಗ್ಯಾರೆಂಟಿಗಳಲ್ಲಿ 20% ಜನರಿಗೆ ರೀಚ್ ಆಗಿಲ್ಲ ಎಂದು. ಬಿಜೆಪಿ ನಾಯಕರ ಆರೋಪಿಸಿದ್ದರು. ಅವರ ತೋಟದಲ್ಲಿ ಕೆಲಸ ಮಾಡುವ ಕೂಲಿಕಾರ್ಮಿಕನೂ ಗ್ಯಾರೆಂಟಿ ಅನುಕೂಲ ಮಾಡಿಕೊಂಡಿದ್ದಾರೆ ಎಂದು ಹೇಳಿದರು.‌

ಜನರಿಗೆ ಬಿಜೆಪಿ ಅವರ ಧರ್ಮದ ಅತಿರೇಕತನ ಗೊತ್ತಾಗಿದೆ. ಲೋಕಸಭಾ‌ಚುನಾವಣೆಯಲ್ಲಿ ಪ್ರವಾಸ ಮಾಡಿದ್ದೇನೆ.‌ ಭಾವನಾತ್ಮಕತೆ ಈ ಬಾರಿಯ ಚುನಾವಣೆಯಲ್ಲಿ ನಡೆಯೊಲ್ಲ. ವಿಧಾನ ಸಭೆ ಚುನಾವಣೆ ಪ್ರಚಾರದ ವೇಳೆ ಪ್ರಧಾನಿ ಮೋದಿ ಜೈ ಬಜರಂಗ ಬಲಿ ಎಂದು ಪ್ರಚಾರ ನಡೆಸಿದ್ದರು.‌ಆದರೆ ಜನ ಆಶೀರ್ವಾದ ಮಾಡಿರೋದು ನಮಗೆ ಎಂದರು.

ವಿಧಾನ ಸೌಧ ಒಳಗೆ ಹೊರಗೆ ಯಾರೆ ತಪ್ಪು ಮಾಡಿದರೂ ಆಜಾತಿ ಈ ಧರ್ಮ ಆಧರ್ಮ ಎಂದು ನೋಡಲ್ಲ. ರಾಜ್ಯದಲ್ಲಿ ಅಂಬೇಡ್ಕರ್ ಅವರ ಸಂವಿಧಾನ ನಡೆಯೋದು. ಬಾಂಬ್ ಸ್ಪೋಟದ ಬಗ್ಗೆ ಬಿಜೆಪಿಗೆ ಉತ್ತರಕೊಡಲ್ಲ ಜನರಿಗೆ ಉತ್ತರ ಕೊಡುತ್ತೇವೆ ಎಂದರು.

ಪುಲ್ವಾಮಾದಲ್ಲಿ ನಡೆದ ಘಟನೆ, ಮಣಿಪುರದ ಘಟನೆ ಇವೆಲ್ಲಾ ಕಾನೂನು ವೈಫಲ್ಯವಲ್ವಾ? ಎಂದು ಪ್ರಶ್ನಿಸಿದ ಸಚಿವರು ಮೋದಿ ಜನರಿಗೆ ಸಿಗುವುದು ಕಷ್ಟವಾಗಿದೆ. ಕರಾವಳಿ ಬಿಜೆಪಿ ಭದ್ರಕೋಟೆ ಆಗ್ತಾ ಇದೆ ಮಲೆನಾಡು ಹಾಗೆ ಆಗ್ತಾ ಇದೆ ಎಂಬ ಮಾಧ್ಯದಮದ ಪ್ರಶ್ನೆಗೆ ಉತ್ತರಿಸಿದ ಸಚಿವರು‌ ಕಾರವಾರದಲ್ಲಿ ಯಾಕೆ ಬಿಜೆಪಿ ಪಲ್ಟಿ ಹೊಡೆದರು. ಉಡುಪಿ ಮಂಗಳೂರಿನಲ್ಲಿ ನಮ್ಮ ಸಮಸ್ಯೆ ಇತ್ತು ಸೋಲಾಗಿದೆ ಎಂದರು.

ಮಾ.5ವರಂದು ಈಡಿಗರ ಸಮಾವೇಶಕ್ಕೆ ಭಾಗಿಯಾಗುವ ಬಗ್ಗೆ ಯೋಚಿಸುವೆ. ಬೈಂದೂರಿನಲ್ಲಿ ಕಾರ್ಯಕ್ರಮವಿದೆ ನೋಡೋಣ ಎಂದರು.

ಗೀತಾ ಶಿವರಾಜ್ ಕುಮಾರ್

ಸಚಿವರ ಸಹೋದರಿ ಗೀತಾ ಶಿವರಾಜ್ ಕುಮಾರ್ ಮಾತನಾಡಿ ಸ್ಪರ್ಧೆಯ ಬಗ್ಗೆ ಹೇಳಲ್ಲ ವರಿಷ್ಠರು ತೀರ್ಮಾನಿಸವರು. ಅವಕಾಶ ಕೊಟ್ಟರೆ ಸ್ಪರ್ಧಿಸುವೆ. ಸಾಮಾಜಿಕ ಕೆಲದ ಬಗ್ಗೆ ಆಸಕ್ತಿ ಇದೆ ಎಂದು ತಿಳಿಸಿದರು.

ವಾತಾವರಣ ಚೆನ್ನಾಗಿದೆ.‌ ಈ ಮೊದಲು ಪ್ರಚಾರ ಮಾಡಿರುವೆ. 2013 ರಲ್ಲಿ ಸೋತಾಗ ಜನರೊಂದಿಗೆ ಇರುವೆ ಎಂದಿದ್ರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ನೀವು ನೋಡಿಲ್ಲ. ನಾನು ಬಹಳ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸಿರುವೆ ಎಂದರು.

ಮಧು ಬಂಗಾರಪ್ಪ ಮಂತ್ರಿ ಆದ ಮೇಲೆ ಉತ್ತಮ ಕೆಲಸ ಮಾಡಿದ್ದಾರೆ. ಸಚಿವರಾದ ತಕ್ಷಣ ಕಾರ್ಯಕ್ರಮ ಮಾಡಲಿಲ್ಲ ಐಎಎಸ್ ಆಧಿಕಾರಿಗಳ‌ಜೊತೆ ಮಾಹಿತಿ ಪಡೆದು ಕೆಲಸ ಮಾಡ್ತಾ ಇದ್ದಾರೆ ಎಂದರು.

ಇದನ್ನೂ ಓದಿ-https://suddilive.in/archives/9915

Related Articles

Leave a Reply

Your email address will not be published. Required fields are marked *

Back to top button