ಸ್ಥಳೀಯ ಸುದ್ದಿಗಳು

ಫೆ.28 ರಂದು ಬಜಾರ್ ಮತ್ತು ಗ್ರಾಮಾಂತರ ಭಾಗದಲ್ಲಿ ವಿದ್ಯುತ್ ವ್ಯತ್ಯಯ

ಸುದ್ದಿಲೈವ್/ಶಿವಮೊಗ್ಗ

ಫೆ.28 ರಂದು ಶಿವಮೊಗ್ಗ ಗ್ರಾಮಾಂತರ ಮತ್ತು ನಗರದ ಹಾರ್ಟ್ ಆಫ್ ದ ಸಿಟಿಯಾಗಿರುವ ಗಾಂಧಿ ಬಜಾರ್ ಸುತ್ತಮುತ್ತ ವಿದ್ಯುತ್ ವ್ಯತ್ಯಯವಾಗಲಿದೆ. ಇದರಿಂದ ಗ್ರಾಮಾಂತರ ಮತ್ತು ಬಜಾರ್ ಸುತ್ತಮುತ್ತ ವಿದ್ಯುತ್ ವಿತರಣೆಯಲ್ಲಿ ವ್ಯತ್ಯಾಸವಾಗುವ ಸಂಭವನೀಯತೆ ಇದೆ.

ಎಂ.ಆರ್.ಎಸ್. 220 ಕೆವಿ ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿರುವ 110 ಕೆವಿ ಭದ್ರಾವತಿ ವಿದ್ಯುತ್ ವಿತರಣ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಫೆ. 28 ರಂದು ಬೆಳಗ್ಗೆ 9.30 ರಿಂದ ಸಂ. 3.30ರವರೆಗೆ ಗ್ರಾಮಾಂತರ ಭಾಗದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.‌

ಮಾಚೇನಹಳ್ಳಿ ವಿವಿ ಕೇಂದ್ರದ ವ್ಯಾಪ್ತಿಯ ಮಾಚೇನಹಳ್ಳಿ, ಬಿದರೆ, ನಿದಿಗೆ, ಓತಿಘಟ್ಟ, ಸಿದ್ದರಗುಡಿ, ಹಾರೇಕಟ್ಟೆ, ಸೋಗಾನೆ, ಆಚಾರಿಕ್ಯಾಂಪ್, ಹೊಸೂರು ರೆಡ್ಡಿಕ್ಯಾಂಪ್, ದುಮ್ಮಳ್ಳಿ, ಶುಗರ್‍ಕಾಲೋನಿ ಮತ್ತು ಜಯಂತಿಗ್ರಾಮ, ಹೊನ್ನವಿಲೆ, ಮೇ||ರಾಮಮೂರ್ತಿ ಮಿನರಲ್ಸ್, ಜಿಲ್ಲಾ ಕೇಂದ್ರ ಕಾರಾಗೃಹ, ಕಿಯೋನಿಕ್ಸ್ ಐ.ಟಿ.ಪಾರ್ಕ್, ಮಲ್ನಾಡ್ ಆಸ್ಪತ್ರೆ,

ಕೆ.ಎಸ್.ಆರ್.ಪಿ.ಕಾಲೋನಿ, ನವುಲೆಬಸವಾಪುರ, ಶೆಟ್ಟಿಹಳ್ಳಿ, ಮಾಳೇನಹಳ್ಳಿ, ಗುಡ್ರಕೊಪ್ಪ, ಯಲವಟ್ಟಿ, ಹಸೂಡಿ, ಹಸೂಡಿ ಫಾರಂ, ವೀಭದ್ರಕಾಲೋನಿ, ಸದಾಶಿವಪುರ, ಬಂಗಾರಪ್ಪ ಕಾಲೋನಿ, ಜಿ.ಜಿ.ಕ್ಯಾಂಪ್, ಚಿಕ್ಕಮರಡಿ, ಹಾರೋಬೆನವಳ್ಳಿ, ತಾಂಡ, ಗೌಡನಾಯಕನಹಳ್ಳಿ, ಬಿ.ಬೀರನಹಳ್ಳಿ, ತರಗನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಗಾಂಧಿ ಬಜಾರ್ ಮತ್ತು ಸುತ್ತಮುತ್ತ ವಿದ್ಯುತ್ ವ್ಯತ್ಯಯ

ನಗರದ ಗಾಂಧಿಬಜಾರ್, ಭರಮಪ್ಪ ನಗರ, ಎಂ.ಕೆ.ಕೆ. ರಸ್ತೆಗಳಲ್ಲಿ ಕಂಬಗಳನ್ನು ಬದಲಿಸುವ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಫೆ. 28 ರಂದು ಬೆಳಗ್ಗೆ 9.00 ರಿಂದ ಸಂ. 6.00ರವರೆಗೆ ಗಾಂಧಿಬಜಾರ್, ಸೊಪ್ಪಿನ ಮಾರ್ಕೆಟ್, ಕೆ.ಆರ್.ಪುರಂ, ಭರಮಪ್ಪ ನಗರ, ಎಂ.ಕೆ.ಕೆ.ರಸ್ತೆ, ಬಿ.ಹೆಚ್.ರಸ್ತೆ, ನಾಗಪ್ಪಕೇರಿ, ತಿರುಪಳಯ್ಯನಕೇರಿ, ಸಾವರ್ಕರ್ ನಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ-https://suddilive.in/archives/9629

Related Articles

Leave a Reply

Your email address will not be published. Required fields are marked *

Back to top button