ಅಭಯ್ ಪ್ರಕಾಶ್ ನಂತ ಅಧಿಕಾರಿಗಳ ಅಮಾನತ್ತು ಅಮಾಯಕರ ಮೇಲಿನ ಗಧಪ್ರಹಾರ-ಟಿ.ಡಿ.ಮೇಘರಾಜ್

ಸುದ್ದಿಲೈವ್/ಶಿವಮೊಗ್ಗ

ರಾಗಿಗುಡ್ಡದಲ್ಲಿ ಹಿಂದೂ ಮನೆಗಳ ಮೇಲೆ ನಡೆದ ಕಲ್ಲುತೂರಾಟದಲ್ಲಿ ಸರ್ಕಾರ ನಡೆದುಕೊಂಡ ರೀತಿ ಜಿಲ್ಲಾ ಉಸ್ತುವಾರಿ ಸಚಿವ, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಗೃಹಸಚಿವರ ಮಾತು ಹಿಂದೂ ಬಾಂಧವರ ವಿರೋಧಿ ಹೇಳಿಕೆಗಳಾಗಿದ್ದವು ಎಂದು ಬಂದ ಬಿಜೆಪಿ ಜಿಲ್ಲಾಧ್ಯಕ್ಷ ಮೇಘರಾಜ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ ರಾಗಿಗುಡ್ಡದಲ್ಲಿ ಹಿಂದೂ ಮತ್ತು ಮುಸ್ಲೀಂ ಸಮುದಾಯ ಅಣ್ಣ ತಮ್ಮನವರಂತಿದ್ದ ಸ್ಥಿತಿಯನ್ನ ನಿಷೇಧಿತ ಪಿಎಫ್ಐ ಹೇಗೆ ಹದಗೆಡೆಸಿತು ಎಂಬುದನ್ನ ನೋಡಿದ್ದೇವೆ. ಬಿಜೆಪಿ ಸತ್ಯಶೋಧನಾ ಸಮಿತಿ ಭೇಟಿ ನೀಡಿತ್ತು. ಗಲಭೆ ನಡೆದಿದ್ದೇ ಹಿಂದೂಗಳ ಮನೆಗಳನ್ನ ಖಾಲಿ ಮಾಡಿಸುವುದೇ ಗಲಭೆಯ ಹಿಂದಿನ ಉದ್ದೇಶವಾಗಿತ್ತು ಎಂದರು.
ಸಾಮರಸ್ಯಕ್ಕೆ ಸಾಕ್ಷಿಯಾಗಿ ಹಿಂದೂ ಬಾಂಧವರು ಅಲ್ಲಿ ಹೇಗೆ ಬದುಕುತ್ತಿದ್ದಾರೆ ಎಂದರೆ ಅಲ್ಲಿನ 400 ಮನೆಗಳಲ್ಲಿ 150 ಹಿಂದೂಗಳು ಮುಸ್ಲೀಂರಿಗೆ ಬಾಡಿಗೆ ಕೊಟ್ಟಿದ್ದಾರೆ. ಅದು ಹಿಂದೂಗಳ ಸಾಮರಸ್ಯದ ಮನಸ್ಸಾಗಿದೆ. ಅಲ್ಲಿ ಬಂದ ವಾಹನಗಳು, ಗುಂಪಿನಲ್ಲಿರುವ ಯುವಕರ ಬಗ್ಗೆ ಬಿಜೆಪಿ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟಿದೆ. ರಾಗಿಗುಡ್ಡದ ಒಟ್ಟಾರೆ ಸಾಮರಸ್ಯ ಕದಡಲಾಗಿದೆ ಎಂದು ಆರೋಪಿಸಿದರು.
ಸಾಲು ಸಾಲು ಬಂದ್ ನಿಂದ ಪ್ರತಿಔಟನೆ ನಡೆಸಲು ಆಗಲಿಲ್ಲ ಈ ಹಿನ್ನಲೆಯಲ್ಲಿ ಅ.12 ರಂದು ರಾಗಿಗುಡ್ಡದ ಗಲಭೆಯನ್ನ ವಿರೋಧಿಸಿ ಮಥುರಾ ಪ್ಯಾರಡೈಸ್ ಎದುರು ಪ್ರತಿಭಟನೆ ಮತ್ತು ಪ್ರತಿಭಟನೆ ಸಭೆ ನಡೆಸಲಾಗುತ್ತದೆ. ಶಾಸಕರು, ಸಂಸದರು, ಸ್ಥಳೀಯ ಮುಖಂಡರು ಮಾಜಿ ಸಚಿವರು ಭಾಗಿಯಾಗಲಿದ್ದಾರೆ.
ಇತರರು ಎಂಬ ಪಟ್ಟಿಯಲ್ಲಿ ಅಮಾಯಕರ ದುರ್ಬಳಕೆ ಯಾಗುತ್ತೆ. ಘಟನೆಯನ್ನ ಮರೆಸುವ ದಿಕ್ಕಿನಲ್ಲಿ ಏನೇನೋ ಆಗಿದೆ. ಕಟೌಟ್ ಗೆ ಅನುಮತಿ ಪಡೆದಿಲ್ಲ. ಅಭಯ್ ಪ್ರಕಾಶ್ ಅಮಾನತ್ತು ಅಮಾಯಕರ ಮೇಲೆ ನಡೆದ ಗಧಾಪ್ರಹಾರ ಎಂಬುದರಲ್ಲಿ ಎರಡು ಮಾತಿಲ್ಲ ಎಂದು ತಿಳಿಸಿದರು.
ಇದನ್ನೂ ಓದಿ-https://suddilive.in/archives/829
