ಕ್ರೈಂ ನ್ಯೂಸ್

ಹಾರನಹಳ್ಳಿಯಲ್ಲಿ ಈದ್ ಕಮಿಟಿಯವರ ಮೇಲೆ ಹಲ್ಲೆ

ಸುದ್ದಿಲೈವ್/ಶಿವಮೊಗ್ಗ

ಈದ್ ಮೆರವಣಿಗೆಯ ವೇಳೆ ಪಟಾಕಿ ವಿಚಾರದಲ್ಲಿ ಹಾರನಹಳ್ಳಿಯಲ್ಲಿ ಮಜರ್ ಮತ್ತು  ಈದ್ ಕಮಿಟಿಯ ಎಂಟು ಜನರ ನಡುವೆ ಗಲಾಟೆಯಾಗಿದ್ದು ಎಂಟು ಜ‌ನ ಮೆಗ್ಗಾನ್ ಗೆ ದಾಖಲಾಗಿದ್ದಾರೆ.

ಅ.3 ರಂದು ಹಾರನಹಳ್ಳಿಯಲ್ಲಿ ಈದ್ ಮೆರವಣಿಗೆ  ನಡೆದಿದೆ. ಮೆರವಣಿಗೆಯಲ್ಲಿ ಯುವಕರ ಬಣ  ಪಟಾಕಿ ಸಿಡಿಸಿ ಸಂಭ್ರಮಿಸಿದೆ. ಮರುದಿನ ಇಡೀ ಊರಿಗೆ ಊಟ ಹಾಕಲಾಗಿದೆ. ಆದರೆ ಮೆರವಣಿಗೆ ನಡೆದು ಒಂದು ವಾರದ ಬಳಿಕ ನಿನ್ನೆ ರಾತ್ರಿ ಸುನ್ನಿ ಜಮಾಯತ್ ಎದುರು ಗಲಾಟೆ ನಡೆದಿದೆ.

ಗಲಾಟೆಯಲ್ಲಿ ಎಂಟು ಜನಕ್ಕೆ ಹಲ್ಲೆನಡೆದಿದೆ.  ಖಯ್ಯುಂ ಎಂಬುವರಿಗೆ ಬಾಟಲಿನಲ್ಲಿ ಹಲ್ಲೆ ನಡೆಸಲಾಗಿದೆ.  ಇವರ ಹಣೆಗೆ 6 ಹೊಲಿಗೆ ಹಾಕಲಾಗಿದೆ. ರಹೀಲ್, ನೂರುಲ್ಲಾ, ಸಿದ್ದಿಕ್ ಮುಜಾಹಿದ್,  ಶಮ್ಮು ಎಂಬುವರ ಮೇಲೆ ಕಟ್ಟಿಗೆಯಿಂದ ಹಲ್ಲೆನಡೆಸಲಾಗಿದೆ. ಈ ಗಲಭೆಯಲ್ಲಿ ಖುಯ್ಯುಂ ಅವರ ಸೊಸೆ ‌ನಜತ್ ಉನ್ನೀಸ ಎಂಬ ಮಹಿಳೆಯೂ ಗಾಯಗೊಂಡಿದ್ದಾರೆ.  ಇವರೆಲ್ಲರೂ ಮೆಗ್ಗಾನ್ ಪರೀಕ್ಷಾಂಗ ವಿಭಾಗದಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ.

ಖುಯ್ಯಂ ಎಂಬುವರ ಹೇಳಿಕೆ ಪ್ರಕಾರ ಸಯ್ಯದ್ ಮಜರ್ ಎಂಬ 50 ವರ್ಷದ ವ್ಯಕ್ತಿಯ ಕಡೆಯವರೆ ಮಿಲಾದ್ ಮೆರವಣಿಗೆಯಲ್ಲಿ ಪಟಾಕಿ ಸಿಡಿಸಿ ನಿನ್ನೆ ಮೆರವಣಿಗೆಯಲ್ಲಿ  ಪಟಾಕಿ ಸಿಡಿಸಿದ್ದು ಯಾಕೆ ಎಂದು ಪ್ರಶ್ನಿಸಿದ್ದಾನೆ. ವಾರ ಕಳೆದ ಮೇಲೆ ಈಗ ಕೇಳಿದರೆ ಹೇಗೆ ಎಂದು ಪ್ರಶ್ನಿಸಿದ ಈದ್ ಕಮಿಟಿಯವರ ಮೇಲೆ ಏಕಾಏಕಿ ಹಲ್ಲೆ ನಡೆದಿದೆ ಎಂದು ದೂರಿದ್ದಾರೆ.

ಸಯ್ಯದ್ ಮಜರ್, ಪಿಳ್ಳಂಗಿರಿ ಅತಿಕ್, ಸಮೀರ್, ನವಾಜ್, ಸಾಬಿಕ್, ಸನಾವುಲ್ಲಾ, ನಸ್ರುಲ್ಲಾ, ಯಾಸಿನ್, ಪಾಜಿಲ್, ಅದನಾನ್, ರೆಹಮಾನ್, ಅಕ್ಕಿಯಾಸ್, ಮತಿನ್, ಇಮ್ರಾನ್ ಮತ್ತು ಇತರರು ಸೇರಿ  ಕಟ್ಟಿಗೆ, ಬಾಟಲ್ ಮತ್ತು ಇತರೆ ವಸ್ತುಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಹಲ್ಲೆಗೊಳಗಾದವರು ದೂರು ದಾಖಲಿಸಿದ್ದಾರೆ.ಇವರುಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಇದರಲ್ಲಿ ಮಜರ್ ನ ಮಗನೂ ಶಾಮೀಲ್ ಆಗಿದ್ದು ಮಗನ ಹೆಸರು ಕೈಬಿಡಲಾಗಿದೆ ಎಂದು ಸಂತ್ರಸ್ತರು ದೂರಿದ್ದಾರೆ. ಪ್ರಕರಣ ಕುಂಸಿ ಠಾಣೆಯಲ್ಲಿ ದಾಖಲಾಗಿದೆ.

ಇದನ್ನೂ ಓದಿ-https://suddilive.in/archives/973

Related Articles

Leave a Reply

Your email address will not be published. Required fields are marked *

Back to top button