ಪ್ರತಿಭಟನೆ ನಡೆಸದಂತೆ ಖಾಕಿ ಪಡೆ ನೋಟೀಸ್, ನೋಟೀಸ್ ಮಧ್ಯೆಯೂ ಸಂಘಟನೆಯ ಭರ್ಜರಿ ಪ್ರತಿಭಟನೆ

ಸುದ್ದಿಲೈವ್/ಶಿವಮೊಗ್ಗ

ರಾಗಿಗುಡ್ಡದ ವಿಷಯದಲ್ಲಿ ಹಿಂದೂಗಳ ಮನೆಯನ್ನೇ ಟಾರ್ಗೆಟ್ ಮಾಡಿಕೊಂಡು ದಾಳಿ ನಡೆದಿರುವುದನ್ನ ಖಂಡಿಸಿ ಇಂದು ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆಗೆ ಕರೆದಿತ್ತು.
ಆದರೆ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯ ವತಿಯಿಂದ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಜಿಲ್ಲಾಧ್ಯಕ್ಷ ವಾಸುದೇವ್ ಅವರಿಗೆ ಪ್ರತಿಭಟನೆ ಸಭೆ ಕೈಬಿಡುವಙತೆ ಹಾಗೂ ಯಾವುದೇ ಪ್ರಚೋದನಕಾರಿ ಭಾಷಣ ಮಾಡದಂತೆ ನೋಟೀಸ್ ನೀಡಿದೆ ಯಾವುದಾದರೂ ಅಹಿತಕರ ಘಟನೆ ನಡೆದರೆ ನೀವೇ ಜವಬ್ದಾರರೆಂದು ನೋಟೀಸ್ ನಲ್ಲಿ ತಿಳಿಸಲಾಗಿದೆ.
ಈ ನೋಟೀಸ್ ನಾಳೆ ನಡೆಯುವ ಬಿಜೆಪಿಯ ಪ್ರತಿಭಟನೆಗೂ ನೀಡಿದೆ. ಸೆಕ್ಷನ್ 144 ರಿಲ್ಯಾಕ್ಸ್ ಆದರೂ ಸಂಘಟನೆಗಳ ಮತ್ತು ಪಕ್ಷದ ಪ್ರತಿಭಟನೆಗೆ ಖಾಕಿಪಡೆ ಬಿಸಿ ಮುಟ್ಟಿಸಿದೆ.
ಪ್ರತಿಭಟನೆ
ನೋಟೀಸ್ ಗಳ ಮಧ್ಯೆಯೇ ವಿಹೆಚ್ ಪಿ ಮತ್ತು ಬಜರಂಗದಳ ಇಂದು ಪ್ರತಿಭಟನಾ ಸಭೆ ನಡೆಸಿ ರಾಗಿಗುಡ್ಡದಲ್ಲಿ ಔರಂಗ ಜೇಬ್ ಕಟೌಟ್ ನಿರ್ಮಿಸಿರುವ
ಟೂಲ್ ಕಿಟ್ ಸಿದ್ದಪಡಿಸಿರುವ ಮತ್ತು ಹಿಂದೂಗಳ ಮನೆಯ ಮೇಲೆ ಕಲ್ಲುತೂರಾಟ ನಡೆಸಿದ ದುಷ್ಕರ್ಮಿಗಳನ್ನ ಬಂಧಿಸಿ ದೇಶದ್ರೋಹ ಪ್ರಕರಣ ದಾಖಲಿಸುವಂತೆ ಆಗ್ರಹಿಸಲಾಗಿದೆ.
ರಾಗಿಗುಡ್ಡದಲ್ಲಿ ಈದ್ ಮೆರವಣಿಗೆಯ ವೇಳೆ ಕಟೌಟ್ ನಿರ್ಮಿಸಲು ಪಾಲಿಕೆಯಿಂದ ಅನುಮತಿ ಪಡೆಯದೆ ನಿರ್ಮಿಸಲು ಅವಕಾಶ ಕೊಟ್ಟವರು ಯಾರು? ಪ್ರಚೋದನೆಯ ಪರಿಕಲ್ಪನೆಯನ್ನ ಇಟ್ಟುಕೊಂಡು ಅಲಂಕರಿಸಿದ ವ್ಯಕ್ತಿಗಳನ್ನ ಬಂಧಿಸುವಂತೆ ಅವರ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಬೇಕು.
ಹಿಂದೂ ಬಾಂಧವರಿಗೆ ಸೂಕ್ತ ರಕ್ಷಣೆ ನೀಡಬೇಕು. ಹಿಂದೂಗಳ ಮೇಲೆ ಹಾಕಿರುವ ಮೊಕದ್ದಮೆಯನ್ನ ರದ್ದುಗೊಳಿಸಬೇಕು. ಘಟನೆಯಲ್ಲಿ ಹಾನಿಗೊಳಗಾದ ಮನೆಗಳಿಗೆ ಮತ್ತು ಹಲ್ಲೆಗೊಳಗಾದ ವ್ಯಕ್ತಿಗಳಿಗೆ ಸರ್ಕಾರ ಪರಿಹಾರ ನೀಡುವಂತೆ ಪ್ರತಿಭಟನೆಯಲ್ಲಿ ಒತ್ತಾಯಿಸಲಾಯಿತು.
ಪ್ರತಿಭಟನೆಯಲ್ಲಿ ವಿಹಿಂಪದ ಜಿಲ್ಲಾಧ್ಯಕ್ಷ ಜೆ.ಆರ್.ವಾಸುದೇವ್, ಜಿಲ್ಲಾ ಕಾರ್ಯದರ್ಶಿ ನಾರಾಯಣ್ ಜಿ ವರ್ಣೇಕರ್, ಬಜರಂಗದಳದ ಸಂಯೋಜಕ್ ವಡಿವೇಲು ರಾಘವನ್, ರಾಜೇಶ್ ಗೌಡ, ರಮೇಶ್ ಬಾಬು ಮೊದಲಾದವರು ಭಾಗಿಯಾಗಿದ್ದರು.
ಇದನ್ನೂ ಓದಿ-https://suddilive.in/archives/968
