ಕ್ರೈಂ ನ್ಯೂಸ್

ಬ್ಯೂಟಿಷಿಯನ್ ಹಿಂದೆ ಬಿದ್ದವನು ದಾಖಲಾಗಿದ್ದು ಆಸ್ಪತ್ರೆಗೆ!

ಸುದ್ದಿಲೈವ್/ಸಾಗರ

ಸಾಗರದ ಕರೂರು ಹೋಬಳಿ ಬ್ರಾಹ್ಮಣಕೆಪ್ಪಿಗೆಯ ಕಿರುವಸೆಯ ನಿವಾಸಿಗೆ ಎರಡನೇ ಪತ್ನಿ ಇದ್ದು ಎರಡನೇ ಪತ್ನಿ ಇದ್ದಾಗಲೇ ಮತ್ತೋರ್ವ ಬ್ಯೂಟಿಷಿಯನ್ ಹಿಂದೆ ಬಿದ್ದ ವ್ಯಕ್ತಿಗೆ ನಂತರದ ದಿನಗಳಲ್ಲಿ ಕೈಕೊಟ್ಟಾಗ ಕೇಳಲು ಹೋಗಿದ್ದಕ್ಕೆ ನರ ಕಟ್ ಆಗುವಾಗೆ ಹೊಡೆಯಲಾಗಿದೆ. ಪ್ರಕರಣ ಸಾಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಬ್ಯೂಟಿ ಪಾರ್ಲರ್  ನಡೆಸುತ್ತಿದ್ದ ಬ್ಯೂಟಿಯನ್ ಜೊತೆ  ಎರಡು ವರ್ಷ ಕಾಲಕಳೆದಿದ್ದು ಆಕೆಯ ಸಂಸಾರಕ್ಕೆ ಹಣವನ್ನೂ ಕರ್ಚು ಮಾಡಿದ್ದಾನೆ. ಯಾವಾಗ ಬರೊಲ್ಲ ಎಂದು ಹೇಳಿದಾಗ ರೊಚ್ಚಿಗೆದ್ದ ವ್ಯಕ್ತಿ ಗ್ಲಾಜು ಹೊಡೆದಿದ್ದಕ್ಕೆ, ಪಾರ್ಲರ್ ನಲ್ಲಿದ್ದ  ಇಬ್ಬರು ಯುವಕರು ಸಂತ್ರಸ್ತ ಮಂಜುನಾಥ್ ಅವರಿಗೆ ಹಲ್ಲೆ ಮಾಡಿ ಕೈ ನರಕಟ್ ಆಗುವ ರೀತಿ ಹೊಡೆದಿದ್ದಾರೆ. ಅವರನ್ನ ಶಿವಮೊಗ್ಗದ ಮೆಗ್ಗಾನ್ ಗೆ ದಾಖಲಿಸಲಾಗಿದೆ.

ಕಿರುವಸೆಯ ನಿವಾಸಿ ಮಂಜುನಾಥ್ ಗೆ ಎರಡನೇ ಪತ್ನಿಯಿಂದಲೇ ಹೆಗ್ಗೋಡು ನಿವಾಸಿ ಸವಿತಾ ಎಂಬ ಬ್ಯೂಟಿಷಿಯನ್ ಪರಿಚಯವಾಗುತ್ತೆ. ಮೂರನೇ ಮಹಿಳೆಯ ಪರಿಚಯದಿಂದಾಗಿ ಮಂಜುನಾಥ್ ಆಕೆಯೊಂದಿಗೆ  ಹತ್ತಿರವಾಗ್ತಾರೆ. ಆದರೆ ಕಟ್ಟಿಕೊಂಡಿದ್ದ ಎರಡನೇ ಪತ್ನಿ  ದೂರವಾಗ್ತಾಳೆ. ಆದರೆ ಬ್ಯೂಟಿಷಿಯನ್ ಗೆ ಮಂಜುನಾಥ್ ಜೊತೆ ಚೆನ್ನಾಗಿದ್ದು 10-15 ಲಕ್ಷ ಕರ್ಚು ಮಾಡಿರುವುದಾಗಿ ದೂರಿನಲ್ಲಿ ದಾಖಲಿಸಿದ್ದಾರೆ.

ಕಳೆದ ಎರಡು ವರ್ಷದಿಂದ ಇಬ್ಬರ ಸ್ನೇಹ‌ ಚೆನ್ನಾಗಿತ್ತು. ಆದರೆ ನಾಲ್ಕೈದು ತಿಂಗಳಿಂದ ಬ್ಯುಟಿಷಯನ್, ಮಂಜುನಾಥ್ ಜೊತೆ ಬಾರದೆ ಇದ್ದಿದ್ದು ಮಂಜುನಾಥ್ ನಲ್ಲಿ ಬೇಸರ ಮತ್ತು ಸಿಟ್ಟು ಹೆಚ್ಚಿಸಿದೆ. ಜ.22 ರಂದು ಬ್ಯೂಟಿಷಿಯನ್ ಬ್ಯೂಟಿ ಪಾರ್ಲರ್ ಗೆ ತೆರಳಿದ್ದ ಮಂಜುನಾಥ್ ಮಹಿಳೆ ಬಾರದ ವಿಚಾರದಲ್ಲಿ ಕೋಪಗೊಂಡು ಗ್ಲಾಜು ಒಡೆದಿದ್ದರು.

ಅಲ್ಲೇ ಇದ್ದ ಇಬ್ಬರು ಯುವಕರು ಅದೇ ಗ್ಲಾಜು ಹಿಡಿದು ಕೈಗೆ ಬಾರಸಿದ್ದರು. ಮಂಜುನಾಥ್ ಅವರ ಕೈ ನರ ಕಟ್ ಆಗಿದೆ. ಬ್ಯೂಟಿಷಿಯನ್ ಹಿಂದೆ ಬಿದ್ದ ಮಂಜುನಾಥ್ ಆಸ್ಪತ್ರೆ ಸೇರುವಂತಾಗಿದೆ. ಸಾಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ-https://suddilive.in/archives/7804

Related Articles

Leave a Reply

Your email address will not be published. Required fields are marked *

Back to top button