ಸಾಗರದಲ್ಲಿ ಇಕೋ ಟೂರ್ ವಿ 5 ಎಸ್ ಟಿ ಆರ್ ಕಾರು ಪಲ್ಟಿ

ಸುದ್ದಿಲೈವ್/ಸಾಗರ

ನಗರಸಭೆ ವ್ಯಾಪ್ತಿಯ ರಾಮನಗರ ನಿವಾಸಿಯಾದ ಲೋಕೇಶ್ ಆಚಾರ್ಯಎಂಬವರಿಗೆ ಸೇರಿರುವ ಮಾರುತಿ ಸುಜುಕಿ ಇಕೋ ಟೂರ್ V 5 STR AC ಕಾರು ಪಲ್ಟಿಯಾಗಿದೆ.
ರಸ್ತೆಯ ಪಕ್ಕದ ತಡೆಗೋಡೆಗೆ ಡಿಕ್ಕಿ ಹೊಡೆದು ಕೆರೆಯ ಪಕ್ಕದಲ್ಲಿ ಪಲ್ಟಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿರುವ ಘಟನೆ ಸೋಮವಾರ ತಡರಾತ್ರಿ ನಡೆದಿದೆ. ಲೋಕೇಶ್ ಅಚಾರಿ ರವರ ಪುತ್ರ ಆಕಾಶ ಹಾಗೂ ಮತ್ತೋರ್ವ ಸ್ನೇಹಿತ ಸಾಗರದ ಅಗ್ರಹಾರ ಸರ್ಕಲ್ ಮೂಲಕ ಬಿಹೆಚ್ ರಸ್ತೆಯ ಗಣಪತಿ ಕೆರೆ ಮಾರ್ಗವಾಗಿ ಬರುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು ಅದೃಷ್ಟವಶಾತ್ ಯಾವುದೇ ರೀತಿಯ ಪ್ರಾಣಹಾನಿ ಸಂಭವಿಸಿಲ್ಲ. ಚಾಲಕನಿಗೆ ಹಾಗೂ ಮತ್ತೋರ್ವನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಅಪಘಾತ ಮಾಹಿತಿ ಪಡೆದ ತಕ್ಷಣ ಸ್ಥಳಕ್ಕೆ ಆಗಮಿಸಿದ ಹೈ ವೈ ಪೆಟ್ರೋಲಿಂಗ್ ಪೋಲಿಸ್ ವಾಹನದ ಸಿಬ್ಬಂದಿಗಳು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಪಲ್ಟಿ ಆಗಿರುವ ಕಾರನ್ನು ಕ್ರೇನ್ ಮೂಲಕ ಮೇಲೆತ್ತಲಯಿತ್ತು. ಸಾಗರ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆಯಾಗಿದ್ದು ಪೇಟೆ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.
ಇದನ್ನೂ ಓದಿ-https://suddilive.in/archives/920
