ಸ್ಥಳೀಯ ಸುದ್ದಿಗಳು

28 ಕ್ಷೇತ್ರದಲ್ಲಿ 25 ಸ್ಥಾನ ಬಿಜೆಪಿ ಗೆಲುವು-ಬಿಎಸ್ ವೈ

ಸುದ್ದಿಲೈವ್/ಶಿವಮೊಗ್ಗ

ರಾಜ್ಯದಲ್ಲಿ ಬಿಜೆಪಿ ಪಕ್ಷ 28 ಕ್ಷೇತ್ರಗಳಲ್ಲಿ 28 ಕ್ಷೇತ್ರ ಗೆಲ್ಲುತ್ತದೆ ಎನ್ನುತ್ತಿದ್ದ ನಾಯಕರು ಈಗ ಸ್ವಲ್ಪ ಕಡಿಮೆ ಹೇಳಲು ಆರಂಭಿಸಿದ್ದಾರೆ. ಬಿಎಸ್ ಯಡಿಯೂರಪ್ಪನವರು ಸಹ 28‌ಕ್ಷೇತ್ರದಲ್ಲಿ 25 ಗೆಲ್ಲಲಿದೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದೆ.‌

ಮಾಧ್ಯಮಗಳಿಗೆ ಮಾತನಾಡಿ ಈಗಾಗಲೇ ಪರಿಷತ್ ಹಾಗೂ ವಿಧಾನಸಭೆಯಲ್ಲಿ ಚರ್ಚೆ ನಡೆದಿದೆ. ಜೆಡಿಎಸ್ ಮೈತ್ರಿ ನಮಗೆ ದೊಡ್ಡ ಶಕ್ತಿ ತಂದು ಕೊಂಡಂತಾಗಿದೆ. ಬರುವ ದಿನಗಳಲ್ಲಿ ಜೆಡಿಎಸ್, ಕುಮಾರಸ್ವಾಮಿ ಜೊತೆ ಒಟ್ಟಾಗಿ ಒಂದಾಗಿ ಚುನಾವಣೆ ಎದುರಿಸಲು ಸಿದ್ಧತೆ ನಡೆಸಿದ್ದೇವೆ ಎಂದರು

ಇದಕ್ಕೆ ಪೂರಕವಾಗಿ ಶಾಸಕಿ ಶಾರದಾ ಪೂರ್ಯಾನಾಯ್ಕ್ ನಮ್ಮ ಜೊತೆ ಬಂದಿದ್ದಾರೆ.ಲೋಕಸಭೆ ಚುನಾವಣೆ ಎದುರಿಸಲು ಸಿದ್ಧತೆ ನಡೆದಿದೆ.28 ಸ್ಥಾನಗಳಲ್ಲಿ 25 ಸ್ಥಾನಗಳನ್ನು ಗೆಲ್ಲುತ್ತೇವೆ.ಪ್ರಧಾನಿ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾನ್ನಾಗಿಸುತ್ತೇವೆ. ಎಂದರು.

ನಿನ್ನೆ ವಿಧಾನ ಸಭೆಯಲ್ಲಿ ಪಾಕ್ ಪರ ಘೋಷಣೆ ಕೂಗಿದ ಘಟನೆ ಕುರಿತು ಶಿಕಾರಿಪುರದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.‌ಇದು ಅಕ್ಷಮ್ಯ ಅಪರಾಧ ಮಾಡಿದ್ದಾರೆ.ಇದರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವ ಭರವಸೆ ಇದೆ ಎಂದರು.

ಇದನ್ನೂ ಓದಿ-https://suddilive.in/archives/9737

Related Articles

Leave a Reply

Your email address will not be published. Required fields are marked *

Back to top button