ಕ್ರೈಂ ನ್ಯೂಸ್

ಬೋನಿಗೆ ಬಿದ್ದ ಚಿರತೆ

ಸುದ್ದಿಲೈವ್/ಶಿಕಾರಿಪುರ

ಅನೇಕ‌ ದಿನಗಳಿಂದ ಗ್ರಾಮಸ್ಥರ ಕಣ್ಣಿಗೆ ಬಿದ್ದಿದ್ದ ಚಿರತೆ ಇಂದು ಬೋನಿಗೆ ಬಿದ್ದಿದೆ.‌ ಮೂರು ವರ್ಷದ ಹೆಣ್ಣು ಚಿರತೆ ಬೋನಿಗೆ ಬಿದ್ದಿದೆ.

ಶಿಕಾರಿಪುರದ ಮದಗಾರನ ಹಳ್ಳಿಯ ಅಡಿಕೆ ತೋಟವೊಂದರಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಚಿರತೆ ಬಿದ್ದಿದೆ. ಅನೇಕ ತಿಂಗಳಿಂದ ಚಿರತೆಯನ್ನ ಹಗಲಿನ ವೇಳೆಯಲ್ಲೇ ಚಿರತೆ ಕಂಡು ಬಂದಿತ್ತು.

ಮದಗಾರನ ಹಳ್ಳಿಯ ಪಕ್ಕದಲ್ಲಿರುವ ಚಂದ್ರಕಲಾ ಅರಣ್ಯದಿಂದ ಚಿರತೆ ಗ್ರಾಮಕ್ಕೆ ಬಂದಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಹಳ್ಳಿಯಿಂದ 5-6 ನಾಯಿಗಳನ್ನೂ ಕಚ್ಚಿಕೊಂಡು ಹೋಗಿತ್ತು.

ಹಸುಗಳನ್ನ ಭಯಬೀಳಿಸಿತ್ತು. ಅರಣ್ಯ ಇಲಾಖೆಯ ಅಧಿಕಾರಿಗಳ ಪ್ರಕಾರ ಅರಣ್ಯದಲ್ಲಿ ಬಿಸಿಲ ಬೇಗೆಯಿಂದಾಗಿ ಇತ್ತೀಚೆಗೆ ರೈತರ ಅಡಿಕೆ ತೋಟಕ್ಕೆ ಲಗ್ಗೆ ಇಡಲು ಚಿರತೆ ಆರಂಭಿಸಿತ್ತು. ತೋಟಕ್ಕೆ ಬಳಸುವ ಸ್ಪ್ರಿಕ್ಲಿಂಗ್ ನೀರಿನಲ್ಲಿ ಕುಡಿಯಲು ತೋಟಕ್ಕೂ ಬರುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿದೆ.

ಇದರ ಹಿನ್ನಲೆಯಲ್ಲಿ ಮೂರು ದಿನಗಳ ಹಿಂದೆ ಅರಣ್ಯ ಇಲಾಖೆ ಬೋನಿಟ್ಟಿದೆ. ಬೋನಿಗೆ ಇಂದು ಬೆಳಿಗ್ಗೆ ಬಿದ್ದಿದೆ. ವೈದ್ಯಕೀಯ ಪರೀಕ್ಷೆ ನಂತರ ಅರಣ್ಯ ಎಸ್ ಒಪಿ ಪ್ರಕಾರ ಮತ್ತೆ ಅದೇ ಅರಣ್ಯಕ್ಕೆ ಬಿಡಲಾಗಿದೆ.

ಇದನ್ನೂ ಓದಿ-https://suddilive.in/archives/11985

Related Articles

Leave a Reply

Your email address will not be published. Required fields are marked *

Back to top button