ಕ್ರೈಂ ನ್ಯೂಸ್

ಜಿಲ್ಲೆಯಲ್ಲಿ ಮತ್ತೊಂದು ಬಹಿಷ್ಕಾರದ ಕೂಗು

ಸುದ್ದಿಲೈವ್/ಶಿವಮೊಗ್ಗ

ಮಗ ಮಾಡಿರುವ ತಪ್ಪಿಗೆ ಸಹೋದರಿ ಮತ್ತು ತಾಯಿ ಒದ್ದಾಡುವ ಹಾಗೆ ಆಗಿದೆ. ಮಗ ಮಾಡಿದ ಆಕ್ಸಿಡೆಂಟ್ ನಲ್ಲಿ ವ್ಯಕ್ತಿ ಸಾವನ್ನಪ್ಪಿದ್ದು ಈ ಸಾವು ಕೊಲೆ ಎಂದು ಸಾಬೀತಾಗಿದ್ದಕ್ಕೆ ಆ ಕುಟುಂಬವನ್ನೇ ಗ್ರಾಮಸ್ಥರು ಬಹಿಷ್ಕಾರಿಸಿದ್ದಾರೆ ಎಂದು ಆರೋಪಿಸಿ ತಾಯಿ ಮಗಳು ಇಂದು ಜಿಲ್ಲಾಧಿಕಾರಿಗಳ ಕಚೇರಿ ಮೆಟ್ಟಿಲೇರಿದ್ದಾರೆ.

ಎರಡು ವರ್ಷದ ಹಿಂದೆ ಭೂಮಿ ಹುಣ್ಣಿಮೆದಿನ ಸೊರಬದ ಕುಳುವಳ್ಳಿ ಗ್ರಾಮದಲ್ಲಿ ಒಂದು ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಟಿವಿಎಸ್ ಮೇಲೆ ಬರುತ್ತಿದ್ದ ಮಂಜುನಾಥ್ ಸಾವನ್ನಪ್ಪಿದ್ದರು. ಈ ಪ್ರಕರಣ ತಿರುವು ಪಡೆದು ಅಳಿಯ ಪ್ರವೀಣ್ ಕೊಲೆ ಮಾಡಿದ್ದೆಂದು ನ್ಯಾಯಾಲಯದಲ್ಲಿ ಸಾಭೀತಾಗಿ ಜೈಲು ಶಿಕ್ಷೆ ತೀರ್ಪು ಹೊರಬಿದ್ದಿತ್ತು.

ಮಗ ಮಡಿದ ತಪ್ಪಿಗೆ ತಾಯಿ ಸರೋಜಮ್ಮ ಪ್ರವೀಣನ‌ ತಂಗಿ ಪವಿತ್ರ ಎಂಬುವರನ್ನ ಕುರುವಳ್ಳಿಯಲ್ಲಿ ಬಹಿಷ್ಕಾರ ಹಾಕಿ ಗ್ರಾಮಕ್ಕೆ ಕಾಲಿಡುವಂತೆ ಜೀವಬೆದರಿಕೆ ಹಾಕಲಾಗಿದೆ. 60 ಕುಟುಂಬವಿರುವ ಸಮುದಾಯ ಒಂದು ಕಡೆಯಾದರೆ , ಸರೋಜಮ್ಮ ಮತ್ತು ಪವಿತ್ರ ಒಂದು ಕಡೆಯಾಗಿದ್ದಾರೆ. ಎರಡೂ ಕುಟುಂಬ ಈಡಿಗ ಸಮುದಾಯದ್ದಾಗಿದೆ.

ಯಾರಾದರೂ ಈ ಕುಟುಂಬವನ್ನ ಮಾತನಾಡಿಸಿದರೆ ಒಂದು ಸಾವಿರ ರೂ. ದಂಡ ವಿಧಿಸುವಂತೆ ದೇವಸ್ಥಾನದ ಗಂಟೆ ಬಾರಿಸಲಾಗಿದೆ. ಇವರ ಜಮೀನಿಗೆ ನೀರು, ವಿದ್ಯುತ್ ಮತ್ತು ಮೂಲಭೂತ ಸೌಕರ್ಯವನ್ನ ಗ್ರಾಮಸ್ಥರು ಕಟ್ ಮಾಡಿರುವುದಾಗಿ ಆರೋಪಿಸಲಾಗಿದೆ.

ಈ ಕುರಿತು ಮಾಧ್ಯಮಗಳಿಗೆ ಮಾತನಾಡಿರುವ ಜಿಲ್ಲಾಧಿಕಾರಿ ಗುರುದತ್ತ ಜಿ ಹೆಗಡೆ, ಸಂಬಂಧಪಟ್ಟ ಅಧಿಕಾರಿಗಳನ್ನ ಸ್ಥಳಕ್ಕೆ ಕಳುಹಿಸಿ ಪರಿಶೀಲಿಸುವಂತೆ ಸೂಚಿಸಲಾಗಿದೆ. ಕುಟುಂಬಕ್ಕೆ ರಕ್ಷಣೆ ನೀಡುವುದಾಗಿ ಭರವಸೆ ನೀಡಿದ್ದಾರೆ.

ಇದನ್ನೂ ಓದಿ-https://suddilive.in/archives/9301

Related Articles

Leave a Reply

Your email address will not be published. Required fields are marked *

Back to top button