ಮಸೀದಿ ಅಧ್ಯಕ್ಷರ ಸ್ಥಾನದ ವಿಚಾರದಲ್ಲಿ ಗಲಾಟೆ

ಸುದ್ದಿಲೈವ್/ಶಿರಾಳಕೊಪ್ಪ

ಮಸೀದಿ ಕಮಿಟಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಜಟಾಪಟಿಯಲ್ಲಿ ಓರ್ವನಿಗೆ ಚಾಕು ಇರಿದಿರುವ ಘಟನೆ ನಡೆದಿದ್ದು ಇದರಲ್ಲಿ 6 ಜನರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪಟ್ಟಣದ ಮದೀನಾ ಮಸೀದಿಯ ಅಧ್ಯಕ್ಷರಾದ ಅಕ್ರಂಸಾಬ್ ಅವರ ಐದು ವರ್ಷದ ಅವಧಿ ಮುಗಿದಿದ್ದು, ಇವರನ್ನು ಮಸೀದಿ ಅಧ್ಯಕ್ಷ ಸ್ಥಾನ ಬಿಟ್ಟುಕೊಡುವಂತೆ ತಬ್ರೇಜ್ ಮಾಡಿಕೊಳ್ಳುತ್ತಿದ್ದಾಗ ಅಲ್ಲಿಗೆ ಬಂದ ಕೆಳಗಿನ ಕೇರಿಯ ಖುರ್ಷಿದ್, ಜೈನುಲ್ಲಾ, ಸಲ್ಮಾನ್ ಅಸ್ಲಾಮ್, ಇಮ್ರಾನ್, ಅಮೀರ್, ಸೈಫುಲ್ಲಾ ಮತ್ತು ಸನಾವುಲ್ಲಾ ಯಾಸೀನ್, ಟೈಲರ್ ನಜ್ರುಲ್ಲಾ, ಮುಜಾಮಿಲ್ ಹಾಗೂ ಇತರರು ನೀನು ಯಾವನೋ ಇದನ್ನ ಹೇಳಲಿಕ್ಕೆ ಎಂದು ಪ್ರಶ್ನಿಸಿದ್ದಾರೆ.
ನಿನ್ನದು ಜಾಸ್ತಿಯಾಯಿತು ಎಂದು ಅವಾಚ್ಯವಾಗಿ ಬೈದಿದ್ದಾರೆ. ತಬ್ರೇಝ್ ಯಾಕೆ ಬೈಯುತ್ತಿರಾ ಎಂದು ಕೇಳಿದದ್ದಾನೆ. ಇದಕ್ಕೆಲ್ಲಾ ನಿನ್ನದೆ ಕುಮ್ಮಕು ಎಂದು ಖುರ್ಷಿದ, ಅಮೀರ, ಮತ್ತು ಇಮ್ರಾನ್ ಖಾನ್, ಸೈಪುಲಾ ಇವರುಗಳು ಹೊಡೆದಿದ್ದು, ಜೈನುಲಾ ಸಲ್ಮಾನ್ ಇವರು ಅಲೆ ಇದ್ದ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ.
ತಬ್ರೇಝ್ ಗೆ ಕೊಲೆ ಮಾಡುವ ಉದ್ದೇಶದಿಂದ ಖುರ್ಷಿದೆ ಇತನು ತಾನು ತಂದಿದ್ದ ಚಾಕುವಿನಿಂದ ಎಡ ಮತ್ತು ಬಲಬದಿ ಎದೆಗೆ ಚುಚ್ಚಿದ್ದಾರೆ, ಆರೋಪಿತರೆಲರು ಹೋಗುವಾಗ ಈ ದಿನ ಬದುಕಿದ್ದಿಯಾ ಇನ್ನೊಂದು ಸಾರಿ ಮಸೀದಿ ವಿಚಾರಕ್ಕೆ ಬಂದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ ಮಿರ್ಷಿದ್, ಜೈನುಲಾ, ಮತ್ತು ಸಲ್ಮಾನ್ ರವರು ತಮ್ಮ ಕೈಯಲಿದ್ದ ಚಾಕು ಮತ್ತು ದೊಣ್ಣೆಯನ್ನು ಅಲೆ ಬಿಸಾಕಿ ಹೋಗಿದ್ದಾರೆ,
ಪ್ರಕರಣ ದಾಖಲಿಸಿರುವ ಪೊಲೀಸರು, ಖುರ್ಷಿದ್, ಸಲ್ಮಾನ್, ಮೋಟು ಇಮ್ರಾನ್, ಜೈನುಲ್ಲಾ ಸೇರಿದಂತೆ 6 ಜನ ಅರೆಸ್ಟ್ ಆಗಿದೆ. ಮಸೀದಿಯ ಈ ರೀತಿಯ ತಾರಕಕ್ಕೇರಲು ಕಾರಣ ಇಲ್ಲಿರುವ ಎರಡು ಬಣಗಳ ನಡುವಿ ತೀಸ್ರಾದಿಂದ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ-https://suddilive.in/archives/2932
