ಕ್ರೈಂ ನ್ಯೂಸ್

ಭದ್ರಾವತಿಯಲ್ಲಿ ರಸ್ತೆ ಅಪಘಾತ

ಸುದ್ದಿಲೈವ್/ಭದ್ರಾವತಿ

ಭದ್ರಾವತಿಯಲ್ಲಿ ಸರಣಿ ಅಪಘಾತವಾಗಿದೆ. ಘಟನೆ ನಡೆದಿದೆ. ನಿನ್ನೆ ರಾತ್ರಿ  ನಡೆದಿದ್ದು ಘಟನೆಯಲ್ಲಿ ಒಂದು ಆಟೋ ಹಾಗೂ ಬಸ್​ ಜಖಂಗೊಂಡಿದೆ.

ಘಟನೆಯಲ್ಲಿ ಓರ್ವರು ಗಾಯಗೊಂಡಿದ್ದಾರೆ. ಅಲ್ಲದೆ ಆಟೋ ಸಂಪೂರ್ಣ ಜಖಂಗೊಂಡಿದೆ. ಒಂದರ ಹಿಂದೆ ಒಂದು ವಾಹನ ಜಖಂಗೊಂಡ ಕಾರಣ ನಾಲ್ಕು ವಾಹನಗಳಿಗೆ ಹಾನಿಯಾಗಿದೆ. ಭದ್ರಾವತಿ ನಿವಾಸಿಯೊಬ್ಬರು ಕಾರು ಓಡಿಸಿಕೊಂಡು ಬಂದಿದ್ದು ಕುಡಿದ ಮತ್ತಿನಲ್ಲಿ ಈ ಅಪಘಾತವೆಸಗಿದ್ದಾರೆ ಎಂದು ಆರೋಪಿಸಲಾಗಿದೆ. ಕಾರಿನಲ್ಲಿಯೇ ಡ್ರೈವರ್ ಸಿಲುಕಿಕೊಂಡಿದ್ದಾರೆ.

ಕಾರಿನ ಮುಂಭಾಗ ಕೂಡ ಜಖಂಗೊಂಡಿದ್ದು, ಸ್ಥಳಕ್ಕೆ ಬಂದ ಭದ್ರಾವತಿ ಪೊಲಿಸರು ವಾಹನಗಳನ್ನು ಸ್ಥಳಾಂತರಿಸಿ ಪ್ರಕರಣ ದಾಖಲಿಸಿದ್ದಾರೆ. ಭದ್ರಾವತಿ ಖಾಸಗಿ ಬಸ್ ನಿಲ್ದಾಣದ ಬಳಿಯೇ ಈ ಘಟನೆ ನಡೆದಿದ್ದು ಅದೃಷ್ಟಕ್ಕೆ ಯಾರಿಗೂ ಹೆಚ್ಚಿನ ಅಪಾಯ ಉಂಟಾಗಿಲ್ಲ.
ಇದನ್ನೂ ಓದಿ

Related Articles

Leave a Reply

Your email address will not be published. Required fields are marked *

Back to top button