ಕ್ರೈಂ ನ್ಯೂಸ್

ಆಳು ಮಾಡಿದ್ದು ಹಾಳು ಎಂಬಂತಾಯಿತಾ ಅಡಿಕೆ ಮಾಲೀಕನ ಪ್ರಕರಣ?

ಸುದ್ದಿಲೈವ್/ಶಿವಮೊಗ್ಗ

ಆಳು ಮಾಡಿದ್ದು ಹಾಳು ಎಂಬ ಗಾದೆಗೆ ಈ ಘಟನೆ ಮತ್ತೊಮ್ಮೆ ಸಾಕ್ಷಿಯಾಗಿ ನಿಂತಿದೆ.‌ 12 ಸಾವಿರ ರೂ.ಗೆ ಕೆಲಸಕ್ಕಿದ್ದವರನ್ನ ನಂಬಿದ ಮಾಲೀಕನಿಗೆ 7 ಕೋಟಿ ವಂಚನೆ ಮಾಡಿರುವ ಘಟನೆ ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಎಪಿಎಂಸಿಯಲ್ಲಿರುವ ದುರ್ಗಾಪರಮೇಶ್ವರಿ ಅಡಿಕೆ ಮಂಡಿಯ ಮಾಲೀಕರನ ಪತ್ನಿಗೆ ಕ್ಯಾನ್ಸರ್ ಬಂದ ಹಿನ್ಬಲೆಯಲ್ಲಿ ತನ್ನ ಕುಟುಂಬ ಸಮೇತ ಹೊಸನಗರ ತಾಲೂಕಿನ ಮಾವಿನಹೊಳೆಗೆ ಹೋಗಿ ವಾಸಿಸಲು ಆರಂಭಿಸಿದ್ದಾರೆ. ಆಸ್ಪತ್ರೆ ಓಡಾಟಕ್ಕೆ ಮತ್ತು ಆಗಾಗ್ಗೆ ಮಂಡಿಗೆ ಬರಲು ಮಾನಸ್ಸು ಮಾಡಿದ 71 ವರ್ಷದ ಮಂಜುನಾಥ್ ಕಲ್ಲುಗಂಗೂರಿನ ಮೇಘನಾ ಮತ್ತು ಬೊಮ್ಮನ್ ಕಟ್ಟೆಯ ಸಹನರಿಗೆ ಕರೆದು ಜವಬ್ದಾರಿ ನೀಡಿರುತ್ತಾರೆ.

ಖಾಲಿ ಚೆಕ್‌ ದುರ್ಬಳಕೆ, ಅಡಿಕೆ ಮಾಯ

ಕಳೆದ ಮೂರು ವರ್ಷದಿಂದ ಮಂಡಿ ನಿರ್ವಹಣೆಯ ಜವಾಬ್ದಾರಿಯನ್ನು ಕೆಲಸಕ್ಕಿದ್ದ ಇಬ್ಬರು ಮಹಿಳೆಯರಿಗೆ ವಹಿಸಿದ್ದರು. ಖಾಲಿ ಚೆಕ್‌ಗಳಿಗೆ ಸಹಿ ಮಾಡಿ ರೈತರಿಗೆ ನೀಡುವಂತೆ ತಿಳಿಸಿದ್ದರು. ಆದರೆ ಈ ಚೆಕ್‌ಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಇನ್ನು, ಮಂಡಿಯಲ್ಲಿ 2071 ಚೀಲ ಅಡಿಕೆ ಸ್ಟಾಕ್‌ ಇರಬೇಕು. ಆದರೆ 33 ಚೀಲಗಳು ಮಾತ್ರವೆ ಇದೆ. ಅಡಿಕೆ ಮಾರಾಟದ ಹಣ ಕೇಳಿದರೆ ರೈತರಿಗೆ ಮುಂಗಡವಾಗಿ ನೀಡಿರುವಾಗಿ ತಿಳಿಸಿದ್ದರು. ಆಡಿಟರ್‌ ಪರಿಶೀಲಿಸಿದಾಗ ಲೆಕ್ಕಪತ್ರದಲ್ಲಿ ವ್ಯತ್ಯಾಸ ಕಂಡು ಬಂದಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಐಷಾರಾಮಿ ಬದುಕಿನಿಂದ ಅನುಮಾನ

ಮಹಿಳೆಯರ ಐಷಾರಾಮಿ ಬದುಕಿನಿಂದ ಅನುಮಾನಗೊಂಡು ಮಂಡಿಯ ಲೆಕ್ಕಪತ್ರ ಪರಿಶೀಲಿಸಿದಾಗ ವಂಚನೆ ಆಗಿರುವುದು ಗೊತ್ತಾಗಿದೆ. ಸುಮಾರು 7 ಕೋಟಿ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಈ ಸಂಬಂಧ ದೂರು ನೀಡುವುದಾಗಿ ಮಹಿಳೆಯರಿಗೆ ತಿಳಿಸಿದಾಗ, ಕೊಲೆ ಬೆದರಿಕೆ ಒಡ್ಡಿದ್ದಾರೆ. ಅಲ್ಲದೆ 15 ನಿಮಿಷದ ನಿಮ್ಮ ವಿಡಿಯೋ ಬಿಡುಗಡೆ ಮಾಡುವುದಾಗಿ ಬೆದರಿಸಿದ್ದಾರೆ ಎಂದು ಮಂಜುನಾಥ್‌ ದೂರಿನಲ್ಲಿ ಆಪಾದಿಸಿದ್ದಾರೆ. ವಿನೋಬನಗರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಕರಣದಲ್ಲಿ ಮಂಡಿಯ  ಹಮಾಲನೋರ್ವ ಸಾವನ್ನಪ್ಪಿದ್ದು ಆತನನ್ನ ಈ ಮಹಿಳೆಯರು ಮತ್ತು ಇತರರು ಸೇರಿ ಕೊಲೆ ಮಾಡಿರುವ ಶಂಕೆಯನ್ನ ದೂರಿನಲ್ಲಿ ಮಾಲೀಕರು ವ್ಯಕ್ತಪಡಿಸಿದ್ದಾರೆ. ಮಹಿಳೆಯರು ಹೆದರಿಸಿರುವ 15 ನಿಮಿಷದ ವಿಡಿಯೋ ಮಾಡುವ ತಪ್ಪು ನಾನು ಮಾಡಿಲ್ಲ. ನನಗೆ 71 ವರ್ಷ ಎಂದು ಮಾಲೀಕರು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ-https://suddilive.in/archives/3552

Related Articles

Leave a Reply

Your email address will not be published. Required fields are marked *

Back to top button